ನವೆಂಬರ್ನಲ್ಲಿ ಉಪನ್ಯಾಸಕ ಅರ್ಹತಾ ಪರೀಕ್ಷೆ
ಕ.ಪ್ರ. ವಾರ್ತೆ ಮೈಸೂರು ಮೇ 27
ಮೈಸೂರು ವಿಶ್ವವಿದ್ಯಾನಿಲಯವು ರಾಜ್ಯ ಉಪನ್ಯಾಸಕ ಅರ್ಹತಾ ಪರೀಕ್ಷೆಯನ್ನು (ಕೆ-ಎಸ್ಇಟಿ) ಮುಂದಿನ ನವೆಂಬರ್ನಲ್ಲಿ ನಡೆಸಲಿದೆ.
ಈ ಪರೀಕ್ಷೆಯಲ್ಲಿ ಅರ್ಹತೆ ಪಡೆದ ಅಭ್ಯರ್ಥಿ ರಾಜ್ಯದ ವಿವಿ, ಕಾಲೇಜು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ (ಸರ್ಕಾರಿ, ಅನುದಾನಿತ ಮತ್ತು ಖಾಸಗಿ) ಉಪನ್ಯಾಸಕ ಹುದ್ದೆಗೆ ಅರ್ಜಿ ಹಾಕಬಹುದು. ಪರೀಕ್ಷೆಯನ್ನು 32 ವಿಷಯಗಳಲ್ಲಿ ರಾಜ್ಯ ವಿವಿಗಳ ಆಯ್ದ 12 ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗುತ್ತದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್. ರಂಗಪ್ಪ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕೆ-ಸೆಟ್ಗೆ ಮೈಸೂರು ವಿವಿಯನ್ನು ನೋಡಲ್ ಏಜೆನ್ಸಿಯಾಗಿ ನೇಮಿಸಲಾಗಿದ್ದು, ಮೂರು-ನಾಲ್ಕು ವರ್ಷ ಪರೀಕ್ಷೆ ನಡೆಸಿದ ನಂತರ ಕಾಯಂ ನೋಡೆಲ್ ಏಜೆನ್ಸಿಯ ಸ್ಥಾನಮಾನ ನೀಡುವ ಭರವಸೆ ದೊರೆತಿದೆ. ಪ್ರತಿವರ್ಷ ನವೆಂಬರ್ನಲ್ಲಿ ಕೆ-ಸೆಟ್ ಅನ್ನು ಪಾರದರ್ಶಕವಾಗಿ, ಯುಜಿಸಿ, ಎನ್ಇಟಿ ಮಾದರಿಯಲ್ಲಿಯೇ ನಡೆಸಲಾಗುವುದು ಎಂದು ಅವರು ಹೇಳಿದರು.
ವಸ್ತುನಿಷ್ಠ ಮಾದರಿ ಪ್ರಶ್ನೆ: ಕಳೆದ ಬಾರಿ 26 ವಿಷಯಗಳ ಪರೀಕ್ಷೆ ನಡೆಸಲು ಅನುಮತಿ ಸಿಕ್ಕಿತ್ತು. ಈ ಬಾರಿ 32 ವಿಷಯಗಳಿಗೆ ಅನುಮತಿ ಪಡೆದಿದ್ದೇವೆ. ವಸ್ತುನಿಷ್ಠ ಮಾದರಿಯಲ್ಲಿ ಪ್ರಶ್ನೆ ಪತ್ರಿಕೆಗಳಿದ್ದು, ಮೌಲ್ಯಮಾಪನ ಸುಲಭವಾಗಲಿದೆ ಎಂದರು.
ಕಳೆದ ವರ್ಷ 53 ಸಾವಿರ ಮಂದಿ ಕೆ-ಸೆಟ್ ಪರೀಕ್ಷೆ ತೆಗೆದುಕೊಂಡಿದ್ದರು. ಈ ಬಾರಿ 70 ಸಾವಿರ ಮಂದಿ ಪರೀಕ್ಷೆ ತೆಗೆದುಕೊಳ್ಳುವ ನಿರೀಕ್ಷೆ ಇದೆ ಎಂದು ಹೇಳಿದರು.
ಮೌಲ್ಯ ಭವನ ನಿರ್ಮಾಣ: ಕೆ- ಸೆಟ್ ಪರೀಕ್ಷೆ ನಡೆಸಲು ಔಟ್ರೀಚ್ ಕಾರ್ಯಕ್ರಮಗಳನ್ನು ನಡೆಸಲು ಕುಕ್ಕರಹಳ್ಳಿ ಕೆರೆ ಪಕ್ಕದಲ್ಲಿರುವ ವಿವಿ ಜಾಗದಲ್ಲಿ 10 ರಿಂದ 15 ಕೋಟಿ ವೆಚ್ಚದಲ್ಲಿ ಮೌಲ್ಯ ಭವನ ನಿರ್ಮಿಸಲಾಗುವುದು ಎಂದರು.
ಕೆ-ಎಸ್ಇಟಿಯ 32 ವಿಷಯಗಳು: ವಾಣಿಜ್ಯಶಾಸ್ತ್ರ, ಕನ್ನಡ, ಅರ್ಥಶಾಸ್ತ್ರ, ಇಂಗ್ಲಿಷ್, ರಾಜ್ಯಶಾಸ್ತ್ರ, ಇತಿಹಾಸ, ಸಮಾಜಶಾಸ್ತ್ರ, ಭೂಗೋಳಶಾಸ್ತ್ರ, ಹಿಂದಿ, ನಿರ್ವಹಣೆ (ಮ್ಯಾನೇಜ್ಮೆಂಟ್), ಪ್ರವಾಸೋದ್ಯಮ ಮತ್ತು ಆಡಳಿತ, ಶಿಕ್ಷಣ, ಗ್ರಂಥಾಲಯ ಹಾಗೂ ಮಾಹಿತಿ ವಿಜ್ಞಾನ, ಸಂವಹನ ಮತ್ತು ಪತ್ರಿಕೋದ್ಯಮ, ಮನೋವಿಜ್ಞಾನ, ಸಮಾಜ ಕಾರ್ಯ, ಅಪರಾಧ ಶಾಸ್ತ್ರ, ಕಾನೂನು, ಸಂಸ್ಕೃತ, ದೈಹಿಕ ಶಿಕ್ಷಣ, ಜನಪದ ಸಾಹಿತ್ಯ, ಉರ್ದು, ಸಾರ್ವಜನಿಕ ಆಡಳಿತ, ಗಣಕ ವಿಜ್ಞಾನ ಮತ್ತು ಅನ್ವಯ, ಭೌತ ವಿಜ್ಞಾನ, ಗಣಿತ ವಿಜ್ಞಾನ, ರಸಾಯನಿಕ ವಿಜ್ಞಾನ, ಜೀವ ವಿಜ್ಞಾನ, ಪರಿಸರ ವಿಜ್ಞಾನ, ಗೃಹ ವಿಜ್ಞಾನ, ವಿದ್ಯುನ್ಮಾನ ವಿಜ್ಞಾನ, ಭೂ ವಿಜ್ಞಾನ.
ಪರೀಕ್ಷಾ ಕೇಂದ್ರಗಳು: ಕೆ-ಎಸ್ಇಟಿ ಅನ್ನು ಬೆಂಗಳೂರು, ಬೆಳಗಾವಿ, ಬಳ್ಳಾರಿ, ಬಿಜಾಪುರ, ದಾಣಗೆರೆ, ಧಾರವಾಡ, ಗುಲ್ಬರ್ಗ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಶಿಗ್ಗಾಂವಿಗಳಲ್ಲಿ ನಡೆಸಲಾಗುತ್ತದೆ. ಕೆ-ಎಸ್ಇಟಿಗೆ ಅರ್ಜಿ ಸಲ್ಲಿಸಲು ಜೂನ್ ಅಥವಾ ಜುಲೈ 2013ರಲ್ಲಿ ವಿವಿಯ ವೆಬ್ಸೈಟ್ನಲ್ಲಿ (ಢಿಢಿಢಿ.್ಞಡಜಡಿ.್ಡಟ್ಝಿ-ಟಣಡ್ಟ್ಠಜ.ಛ್ಛ.್ಝಟಿ) ಪ್ರಕಟಗೊಳಿಸಲಾಗುವುದು.
ಸ್ನಾತಕೋತ್ತರ ಪರೀಕ್ಷೆಯಲ್ಲಿ ಶೇ.55 ಅಂಕಗಳನ್ನು ಗಳಿಸಿರುವ ಸಾಮಾನ್ಯ ವರ್ಗದ ಅಭ್ಯರ್ಥಿಗಳು, ಶೇ.50ರಷ್ಟು ಅಂಕಗಳನ್ನು ಗಳಿಸಿರುವ ಪ.ಜಾತಿ, ವರ್ಗ, ಅಂಗವಿಕಲ ಅಬ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ವಯೋವುತಿಯ ನಿರ್ಬಂಧ ಇಲ್ಲ.
ಪರೀಕ್ಷಾ ಪಠ್ಯಕ್ರಮ ಯುಜಿಸಿ ನಿಗದಿಪಡಿಸಿದ ಪಠ್ಯಕ್ರಮದ ಮಾದರಿಯಲ್ಲಿಯೆ ಇರುತ್ತದೆ. ಹೆಚ್ಚಿನ ಮಾಹಿತಿಗೆ ಪ್ರೊ.ಸಿ. ಶ್ರೀಕಂಠಪ್ಪ, ಸಂಯೋಜಕರು, ಕೆ-ಸೆಟ್ ಕೇಂದ್ರ ಪರೀಕ್ಷಾ ಭವನ, ಮೈಸೂರು, ದೂ.0821- 2419202 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

