ಮೈಸೂರು

ಸಚಿವ ಡಾ.ಎಚ್.ಸಿ ಮಹದೇವಪ್ಪಗೆ ಅಭಿನಂದನೆ

Published On :

ಮೂಗೂರು: ಕ್ಷೇತ್ರ ಪ್ರವಾಸ ಕೈಗೊಂಡು ಹಳ್ಳಿಗಾಡಿನ ಜನತೆಯ ಮೂಲ ಸೌಕರ್ಯಕ್ಕೆ ಒತ್ತು ನೀಡುವಂತೆ ಮೂಗೂರು ಹೋಬಳಿ ಕಾಂಗ್ರೆಸ್ ಕಾರ್ಯಕರ್ತರು ನೂತನ ಸಚಿವರಲ್ಲಿ ಮನವಿ ಮಾಡಿದರು.
ಗ್ರಾಮದ ಎಂ.ಡಿ. ಬಸವರಾಜು ಅಭಿಮಾನಿ ಬಳಗ, ಕನ್ನಡ ಸ್ನೇಹ ಬಳಗದ ಹಾಗೂ ಮೂಗೂರು ಹೋಬಳಿ ವ್ಯಾಪ್ತಿ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಸಚಿವರ ಬೆಂಗಳೂರು ನಿವಾಸಕ್ಕೆ ತೆರಳಿ ಅಭಿನಂದಿಸಿ, ಮನವಿ ಸಲ್ಲಿಸಿದರು.
ಕಳೆದ ಬಾರಿಯಂತೆ ಈ ಬಾರಿಯೂ ಜನತೆ ತಮ್ಮನ್ನು ಬೆಂಬಲಿಸಿ ಸಹಕಾರ ನೀಡಿದ್ದಾರೆ. ಅದರಂತೆ ಹೋಬಳಿವಾರು ಪ್ರವಾಸ ಕೈಗೊಂಡು ಜನರ ಇಷ್ಟಾರ್ಥ, ಅವರ ಬೇಡಿಕೆ ಈಡೇರಿಸುವಲ್ಲಿ ಮುಂದಾಗಬೇಕು, ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಮನ್ನಣೆ ನೀಡಿ ಮಾದರಿ ಕ್ಷೇತ್ರವನ್ನಾಗಿ ಮಾಡುವಂತೆ ಕಾರ್ಯಕರ್ತರು ಒತ್ತಾಯಿಸಿದರು.
ಯುವ ಮುಖಂಡ ಸುನಿಲ್‌ಬೋಸ್, ಕಾಂಗ್ರೆಸ್ ಹಿರಿಯ ಮುಖಂಡರಾದ ಎಂ.ಡಿ. ಬಸವರಾಜು, ಎಂ.ಆರ್. ಸುಂದರ್, ಎಂ.ಪಿ. ನಿಂಗಪ್ಪ, ಎಂ.ಪಿ. ಮರಿಸ್ವಾಮಿ, ಉಮೇಶ್, ದೀಪು, ಆಲಗೂಡು ಸಿದ್ದಣ್ಣ, ನಾಗೇಂದ್ರ, ವಿನಯ್, ಸಾಗರ್, ಸತೀಶ್, ನಂಜುಂಡನಾಯಕ, ಕಬಿನಿ ಕಾರ್ಯದರ್ಶಿ ನಾಗರಾಜು, ಎಂ.ಡಿ. ಸುಂದರಪ್ಪ, ಗುರುಮೂರ್ತಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.