ಮೈಸೂರು

ಜಾತಿ, ಆದಾಯ ಪ್ರಮಾಣ ಪತ್ರ ಶೀಘ್ರ ವಿತರಣೆಗೆ ಆಗ್ರಹ

Published On :

ಮೈಸೂರು: ಈ ಸಾಲಿನ ಎಲ್ಲಾ ಶಾಲಾ, ಕಾಲೇಜುಗಳು ಆರಂಭವಾಗುತ್ತಿದ್ದು, ವಿದ್ಯಾರ್ಥಿಗಳು ಸೂಕ್ತ ಸಮಯದಲ್ಲಿ ಶಾಲಾ- ಕಾಲೇಜುಗಳಿಗೆ ಪ್ರವೇಶ ಪಡೆಯಲು ಅನುಕೂಲವಾಗುವಂತೆ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ವಿತರಿಸುವಂತೆ ವಾಜಮಂಗಲ ಗ್ರಾಪಂ ಸದಸ್ಯ ವರಕೂಡು ದೊಡ್ಡೇಗೌಡ ಆಗ್ರಹಿಸಿದ್ದಾರೆ. ಜಾತಿ, ಆದಾಯ ಪ್ರಮಾಣ ಪತ್ರಕ್ಕಾಗಿ ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಅಲೆದಾಡುವ ಪರಿಸ್ಥಿತಿ ಉಂಟಾಗಿದೆ. ಹೀಗಾಗಿ, ಸಂಬಂಧಪಟ್ಟ ಅಧಿಕಾರಿಗಳು ಜಾತಿ, ಆದಾಯ ಪ್ರಮಾಣ ಪತ್ರಗಳನ್ನು ಶೀಘ್ರವಾಗಿ ಮಾಡಿಕೊಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
ಇಂದು ಸಿಎಚ್ವಿ ಪರಿಶೀಲನೆ
ಮೈಸೂರು: ವಿಧಾನಪರಿಷತ್ ಸದಸ್ಯ ಸಿ.ಎಚ್. ವಿಜಯಶಂಕರ್ ಅವರು ಮೇ 30ರ ಬೆಳಗ್ಗೆ 9.30ಕ್ಕೆ ನಗರದ ಕೆಳಕಂಡ ಪ್ರದೇಶಗಳಿಗೆ ಸಂಬಂಧಪಟ್ಟ ಪಾಲಿಕೆ ಹಾಗೂ ನೀರಾವರಿ ಇಲಾಖೆ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಸ್ಥಳ ಪರಿಶೀಲಿಸುವರು. ಕುಕ್ಕರಹಳ್ಳಿಕೆರೆ ಮುಂಭಾಗದ ಸಿಗ್ನಲ್ ಲೈಟ್, ಮಹಾರಾಣಿ ಕಾಲೇಜು ಮುಂಭಾಗದ ಪಾದಚಾರಿ ರಸ್ತೆ, ರಮಾವಿಲಾಸ ರಸ್ತೆ, ಶಾಂತಲಾ ಚಿತ್ರಮಂದಿರ ಸಿಗ್ನಲ್, ಅರಮನೆ ಮುಂಭಾಗದ ಫುಟ್ಪಾತ್, ಕಾರಂಜಿಕೆರೆ ಮುಂಭಾಗದ ರಸ್ತೆ, ದಳವಾಯಿ ಕೆರೆ, ಮಂಡಕಳ್ಳಿಕೆರೆಗೆ ಭೇಟಿ ಸ್ಥಳ ಪರಿಶೀಲಿಸಿದವರು. ಬಳಿಕ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸುವರು.
ಕಾನೂನು ಸಾಕ್ಷರತಾ ರಥಕ್ಕೆ ಚಾಲನೆ
ಎಚ್.ಡಿ. ಕೋಟೆ: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ತಾಲೂಕು ಕಾನೂನುಗಳ ಸೇವಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ನಡೆದ ಕಾನೂನು ಸಾಕ್ಷರತಾ ರಥಕ್ಕೆ ಸಿವಿಲ್ ನ್ಯಾಯಾಧೀಶ ಹನುಮಂತ ಬೋವಿ ಚಾಲನೆ ನೀಡಿದರು. ಈ ರಥವು ಬುಧವಾರ ತಾಲೂಕಿನ ಜಿನ್ನಹಳ್ಳಿ, ಮಾದಾಪುರ, ದೇವರಾಜ ಕಾಲೋನಿ, ಮೇ 30ರಂದು ಗೊಂತಕಾಲಹುಂಡಿ, ಚೌಡಹಳ್ಳಿ, ಜಕ್ಕಹಳ್ಳಿ, ಮೇ 31ರಂದು ನಾಗನಹಳ್ಳಿ, ಬೋಪ್ಪನಹಳ್ಳಿ, ಹೊಸತೊರವಳ್ಳಿ ಗ್ರಾಮಗಳಲ್ಲಿ ರಥವು ಸಂಚರಿಸುತ್ತಿದ್ದು, ಸೇವಾ ಪ್ರಾಧಿಕಾರದ ಉದ್ದೇಶಗಳು, ಹೆಚ್ಚು ಪರಿಣಾಮಕಾರಿ ಹಾಗೂ ಅರ್ಥಪೂರ್ಣವಾಗಿ ಗ್ರಾಮೀಣ ಪ್ರದೇಶದ ಜನರಿಗೆ ತಲುಪಿಸುವ ದೃಷ್ಟಿಯಿಂದ ತಾಲೂಕಿನ ಗ್ರಾಮಗಳಲ್ಲಿ ಸಂಚರಿಸುತ್ತಿದ್ದು, ತಾಲೂಕಿನ ಗ್ರಾಮೀಣ ಪ್ರದೇಶದ ಜನತೆ ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ತಿಳಿಸಿದರು.  ವಕೀಲರ ಸಂಘದ ಅಧ್ಯಕ್ಷ ಕೃಷ್ಣೇಗೌಡ, ವಕೀಲರಾದ ದಿನೇಶ್, ಎ.ಟಿ. ಕೃಷ್ಣ, ಸೋಮಶೇಖರ್, ಸದಾಶಿವಪ್ಪ, ನಾಗೇಂದ್ರ, ನೂರಾಳ್ ನಾಯಕ ಸೇರಿದಂತೆ ನ್ಯಾಯಾಲದ ಅಧಿಕಾರಿಗಳು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.