ಮೈಸೂರು

ಪಡಿತರ ಚೀಟಿ: ಬಡವರಿಗೆ ಕಿರುಕುಳ- ಮೈಗ್ರಾಪ

Published On :

ಕ.ಪ್ರ.ವಾರ್ತೆ   ಮೈಸೂರು   ಮೇ 29
ಸರ್ಕಾರ ಮಾಡಿದ ತಪ್ಪಿಗಾಗಿ ಪಡಿತರ ಚೀಟಿ ವಿಷಯದ ಬಗ್ಗೆ ಬಡ ಜನರಿಗೆ ಅನವಶ್ಯಕ ಕಿರುಕುಳ ನೀಡುತ್ತಿದ್ದಾರೆ ಎಂದು ಮೈಸೂರು ಗ್ರಾಹಕರ ಪರಿಷತ್ನ ಜಿ.ಎಲ್. ನಾಗರಾಜ ಅರಸ್ ಟೀಕಿಸಿದ್ದಾರೆ.
ಅಸಂಖ್ಯಾತ ಜನರು 60 ಶುಲ್ಕ ನೀಡಿ ತಮ್ಮ ಪಡಿತರ ಚೀಟಿಗಳನ್ನು ಪಡೆದಿದ್ದಾರೆ. ಎರಡು ತಿಂಗಳ ಹಿಂದೆ ರಾಜ್ಯ ಸರ್ಕಾರವು ಹಲವಾರು ಪ್ರಮುಖ ವೃತ್ತ ಪತ್ರಿಕೆಗಳಲ್ಲಿ ಪ್ರಕಟಣೆ ಕೊಟ್ಟು, ಡಿಸೆಂಬರ್ 2010ಕ್ಕೆ ಮುಂಚೆ ವಿತರಣೆಯಾದ ಪಡಿತರ ಚೀಟಿಗಳ ಮಾಹಿತಿ ಕಳೆದುಹೋಗಿರುವುದರಿಂದ ಅಂತಹ ಚೀಟಿಗಳನ್ನು ಹೊಂದಿರುವ ವ್ಯಕ್ತಿಗಳು 50 ಶುಲ್ಕ ಪಾವತಿಸಿ ಮತ್ತೊಮ್ಮೆ ತಮ್ಮ ಬೆರಳಚ್ಚು ಮಾಹಿತಿ ನೀಡುವಂತೆ ಹೇಳಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರ ಮಾಡಿದ ತಪ್ಪಿಗಾಗಿ ಜನರು 50 ದಂಡ ಕಟ್ಟುವ ಸನ್ನಿವೇಶ ಉಂಟಾಗಿದೆ. ಅಲ್ಲದೆ, ತಮ್ಮ ಬಯೋವುಟ್ರಿಕ್ ಮಾಹಿತಿಯನ್ನು ಪುನಃ ಸಲ್ಲಿಸಲು ಹೋದವರು ದೂರುಗಳ ಸರಮಾಲೆಯನ್ನೇ ಬಿಚ್ಚುತ್ತಾರೆ. ಬಯೋವುಟ್ರಿಕ್ ಮಾಹಿತಿಯನ್ನು ಪುನಃ ಸಲ್ಲಿಸಲು ಮಾ. 31, 2013 ಗಡುವು ನೀಡಿತ್ತು. ಆದರೆ, ಚುನಾವಣೆಯಿಂದಾಗಿ ಗಡುವನ್ನು ವಿಸ್ತರಿಸಲಾಗಿದೆ. ಹೊಸ ಗಡುವು ಏನು ಎಂಬುದು ಸ್ಪಷ್ಟವಿಲ್ಲ ಮತ್ತು ಪಡಿತರ ಚೀಟಿ ನವೀಕರಿಸಬೇಕಾದ ಜನರು ತೀವ್ರ ಕಳವಳದಲ್ಲಿದ್ದಾರೆ. ಸರ್ಕಾರವು ಜನರನ್ನು ಅದರಲ್ಲೂ ಬಹುಪಾಲು ಬಡ ಜನರನ್ನು ಏಕೆ ಗೋಳು ಹುಯ್ದುಕೊಳ್ಳುತ್ತಿದೆ ಎಂದು ಪ್ರಶ್ನಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.