ರಸಗೊಬ್ಬರದಲ್ಲಿ ಕಲಬೆರಕೆ: ರೈತರ ಆಕ್ರೋಶ
ಕ.ಪ್ರ.ವಾರ್ತೆ ಪಿರಿಯಾಪಟ್ಟಣ ಮೇ 30
ತಾಲೂಕಿನ ಮಾಲಂಗಿ ಗ್ರಾಮದಲ್ಲಿ ತಂಬಾಕು ಮಂಡಳಿ ವತಿಯಿಂದ ಖಾಸಗಿ ಕಂಪನಿಯೊಂದು ವಿತರಿಸಿದ ಗೊಬ್ಬರದಲ್ಲಿ ಕಲಬೆರಕೆ ಕಂಡು ಬಂದಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ಧಾರೆ.
ಗ್ರಾಮದಲ್ಲಿ ತಂಬಾಕು ಸಸಿಗಳನ್ನು ನಾಟಿ ಮಾಡಿದ್ದು, ತಂಬಾಕು ಮಂಡಳಿ ವತಿಯಿಂದ ಖಾಸಗಿ ಕಂಪನಿಯೊಂದಕ್ಕೆ ಗೊಬ್ಬರ ಸರಬರಾಜು ಮಾಡಲು ಟೆಂಡರ್ ನೀಡಲಾಗಿದ್ದು, ತಂಬಾಕು ರೈತರಿಗೆಲ್ಲಾ ಮಂಡಳಿ ವತಿಯಿಂದ ಸಾಲದ ರೂಪದಲ್ಲಿ ಗೊಬ್ಬರ ನೀಡಲಾಗುತ್ತಿದೆ.
ಗ್ರಾಮದ ಶಾಂತಕುಮಾರ್, ವೀರೇಂದ್ರ ಎಂಬವರು ಪಡೆದ ಎಸ್ಒಪಿ ಗೊಬ್ಬರದ ಮೂಟೆಯಲ್ಲಿ ರಂಗೋಲಿ ಪುಡಿಯಂತ ವಸ್ತು ಕಂಡು ಬಂದಿದ್ದು, ತಲಾ ಮೂರು ಮೂಟೆ ಗೊಬ್ಬರದಲ್ಲಿ ಎರಡು ಮೂಟೆಯಲ್ಲಿ ಇಂತಹ ಗೊಬ್ಬರ ಕಂಡುಬಂದಿದ್ದು, ಒಂದು ಮೂಟೆ ಚೆನ್ನಾಗಿದೆ. ಕೆಲವರು ಇದನ್ನು ಹೊಲದಲ್ಲಿ ನಾಟಿ ಮಾಡಿದ ಸಸಿಗಳಿಗೆ ನೀಡಿದ್ದು, ಗೊಬ್ಬರ ಕರಗದೆ ಹಾಗೆ ಉಳಿದಿದೆ.
ಕಳೆದ ವರ್ಷವು ಇದೇ ರೀತಿ ತಂಬಾಕು ಮಂಡಳಿಯಿಂದ ನೀಡಲಾಗಿದ್ದ ಎಸ್ಒಪಿ ಗೊಬ್ಬರದಲ್ಲಿ ರಂಗೋಲಿ ಪುಡಿಯಂತಹ ವಸ್ತು ಕಂಡು ಸ್ಯಾಂಪಲ್ಸ್ ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಿ, ಅಲ್ಲಿ ಕಲಬೆರೆಕೆ ದೃಢಪಟ್ಟ ನಂತರ ಐಪಿಎಲ್ ಕಂಪನಿ ಮುಖ್ಯಸ್ಥ ಹಾಗೂ ಆಗಿನ ಎಸ್ಜಿಒ ಶಿವರಾಂ ಎಂಬವವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿತ್ತು.
ಭೇಟಿ: ಜಿಪಂ ಸದಸ್ಯ ಎಂ.ಪಿ. ಚಂದ್ರೇಶ್ ಮತ್ತು ಸಹಾಯಕ ಕೃಷಿ ನಿರ್ದೇಶಕ ಕೆ. ರಾಜು ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದು ಗೊಬ್ಬರಗಳನ್ನು ಪರಿಶೀಲನೆ ನಡೆಸಿ, ರೈತರಿಂದ ಕಲಬೆರೆಕೆ ಗೊಬ್ಬರದ ಬಗ್ಗೆ ಆರೋಪ ಕೇಳಿ ಬಂದಿದ್ದು, ಸ್ಯಾಂಪಲ್ಸ್ ಸಂಗ್ರಹಿಸಲಾಗಿದೆ. ಇವುಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿ ವರದಿ ಬಂದ ನಂತರ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

