ಮತದಾರರಿಗೆ ಶ್ರೀನಿವಾಸಪ್ರಸಾದ್ ಕೃತಜ್ಞತೆ
ಕ.ಪ್ರ.ವಾರ್ತೆ ನಂಜನಗೂಡು ಮೇ 30
ರಾಜ್ಯದ ಆಡಳಿತದ ಜವಾಬ್ದಾರಿ ಮಾತ್ರ ನಮ್ಮದು. ಆದರೆ, ಸರ್ಕಾರಿ ಕಚೇರಿಗಳು ಪಕ್ಷಕ್ಕೆ ಸೇರಿದ್ದಲ್ಲ ಎಂಬದನ್ನು ಸದಾ ನೆನಪಿಟ್ಟು ಕಾರ್ಯನಿರ್ವಹಿಸುವಂತೆ ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್ ಕಾರ್ಯಕರ್ತರಿಗೆ ಹೇಳಿದರು.
ನಂಜನಗೂಡು ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿ ರಾಜ್ಯ ಸಚಿವ ಸಂಪುಟದಲ್ಲಿ ಕಂದಾಯ ಮಂತ್ರಿಯಾದ ನಂತರ ಪ್ರಥಮ ಬಾರಿಗೆ ನಂಜನಗೂಡಿಗೆ ಶನಿವಾರ ಆಗಮಿಸಿದ ಅವರು, ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮತದಾರರಿಗೆ ಕೃತಜ್ಞತೆ ಸಲ್ಲಿಸಿ ಮಾತನಾಡಿದರು.
ತಮ್ಮ ಸಚಿವ ಸ್ಥಾನದ ಅಧಿಕಾರ, ಮತ ನೀಡಿ ಗೆಲ್ಲಿಸಿದ ನಿಮ್ಮದು ಎಂದ ಸಚಿವರು, ನಿಮ್ಮಂತೆಯೆ ರಾಜ್ಯದ ಜನತೆ ಕಾಂಗ್ರೆಸ್ ಪಕ್ಷದ ಹುರಿಯಾಳುಗಳಿಗೆ ಮತ ನೀಡಿ ಆಡಳಿತದ ಚುಕ್ಕಾಣಿಯ ಜವಾಬ್ದಾರಿ ವಹಿಸಿದ್ದಾರೆ.
ಸರ್ಕಾರಿ ಕಚೇರಿಗಳು ಪಕ್ಷದ್ದಲ್ಲ ಎಂಬದನ್ನು ಕಾರ್ಯಕರ್ತರು ಸದಾ ನೆನಪಿಟ್ಟು ಅಸಹಾಯಕರು, ದೀನ- ದಲಿತರು ಸೇರಿದಂತೆ ಅಶಕ್ತರ ಸೇವೆ ಮಾಡಬೇಕೆಂದು ಹೇಳಿದರು.
ಸಂಸದ ಆರ್. ಧ್ರುವನಾರಾಯಣ ಹಾಗೂ ಕಾರ್ಯಕರ್ತರಾದ ನೀವೆ ನನ್ನ ಅನುಪಸ್ಥಿತಿಯಲ್ಲಿ ಓಡಾಡಿ ಮತಯಾಚಿಸಿ ನನ್ನನ್ನು ಗೆಲ್ಲಿಸಿದ್ದೀರಿ. ಹಾಗಾಗಿ ಆ ವಿಜಯದ ಮೂಲಕ ಸಿಕ್ಕಿದ ಸಚಿವ ಸ್ಥಾನದ ಅಧಿಕಾರ ಸಹಾ ನಿಮ್ಮದೆ ಎಂದು ಅವರು ಹೇಳಿದರು.
ತಾವು ನಾಲ್ಕು ತಿಂಗಳು ಆಸ್ಪತ್ರೆಯಲ್ಲಿದ್ದಾಗ ಕ್ಷೇತ್ರದ ಸೇವೆ ಮಾಡಿದ ಧ್ರುವನಾರಾಯಣ ಅವರನ್ನು ಅಭಿನಂದಿಸಿದರು. ಅವರಿಲ್ಲದಿದ್ದರೆ ನಂಜನಗೂಡು- ಹುಲ್ಲಹಳ್ಳಿ ರಸ್ತೆ ಪ್ರಗತಿಯಾಗುತ್ತಿರಲಿಲ್ಲ ಎಂದು ತಿಳಿಸಿದರು.
ಸಂಸದ ಆರ್. ಧ್ರುವನಾರಾಯಣ ಅವರನ್ನು ಪುನರಾಯ್ಕೆ ಗೊಳಿಸುವ ಹೊಣೆಗಾರಿಕೆ ನಮ್ಮ ನಿಮ್ಮ ಮೇಲಿದೆ. ಆ ನಿಟ್ಟಿನಲ್ಲಿ ನಾವೆಲ್ಲರೂ ಇಂದಿನಿಂದಲೇ ಕಾರ್ಯಕ್ರಮ ಹಮ್ಮಿಕೊಳ್ಳಬೇಕೆಂದು ಅವರು ತಿಳಿಸಿದರು.
ಸಂಸದ ಆರ್. ಧ್ರುವನಾರಾಯಣ ಮಾತನಾಡಿ, ತಮ್ಮ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿಗ ಸುವರ್ಣಯುಗ ಪ್ರಾರಂಭವಾಗಿದೆ ಎಂದು ಹರ್ಷಿಸಿದರು. ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಸೇರುವ 8 ವಿಧಾನಸಭಾ ಕ್ಷೇತ್ರಗಳಲ್ಲಿ 7ರಲ್ಲಿ ಪಕ್ಷ ಗೆಲವು ಸಾಧಿಸಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಗಳಾದರೆ ಹಿರಿಯ ನಾಯಕ ಶ್ರೀನಿವಾಸ ಪ್ರಸಾದ್, ಡಾ. ಎಚ್.ಸಿ. ಮಹದೇವಪ್ಪ ಹಾಗೂ ಎಚ್.ಎಸ್. ಮಹದೇವಪ್ರಸಾದ ಆಯಕಟ್ಟಿನ ಖಾತೆಗಳ ಸಚಿವರಾಗಿದ್ದಾರೆ. ನಾವೀಗ ಸುವರ್ಣಯುಗದ ಕಾಲದಲ್ಲಿದ್ದು, ಇಲ್ಲಿನ ಅಭಿವೃದ್ಧಿ ಸಾಧಿಸಿ ತೋರಿಸಬೇಕಾಗಿದೆ ಎಂದು ಹೇಳಿದರು.
ಜಿಪಂ ಪ್ರತಿಪಕ್ಷ ನಾಯಕ ಕೆ.ಮಾರುತಿ, ಮುಖಂಡರಾದ ಪುಟ್ಟಸ್ವಾಮಿ, ಅಕ್ಬರ್, ಬಸವರಾಜು, ಮೂಗಶೆಟ್ಟಿ, ನಂದಕುಮಾರ, ಕೆ.ಡಿ.ಮಂಜು, ಕೆ.ಆರ್. ಮೋಹನ್ಕುಮಾರ್, ಯು.ಎನ್. ಪದ್ಮನಾಭರಾವ್ ಮಾತನಾಡಿದರು.
ಜಿಪಂ ಮಾಜಿ ಅಧ್ಯಕ್ಷೆ ಲತಾ ಸಿದ್ದಶೆಟ್ಟಿ, ದೇವನೂರು ಶಿವಮಲ್ಲು, ವಿ. ರಾಮಸ್ವಾಮಿ, ಕೃಷ್ಣಪ್ಪ, ಖಾದರ್ ಹರ್ಷವರ್ಧನ, ಶಿವಕುಮಾರ, ಹುಲ್ಲಳ್ಳಿ ಘಟಕದ ಅಧ್ಯಕ್ಷ ಬಿ. ಮಹದೇವಪ್ಪ ಇದ್ದರು. ನಂಜನಗೂಡು ಬ್ಲಾಕ್ ಅಧ್ಯಕ್ಷ ಸುಬ್ಬಣ್ಣ ಸ್ವಾಗತಿಸಿದರು. ಮಲ್ಲಿಕಾರ್ಜುನ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

