ಹುಲ್ಲಹಳ್ಳಿಯಲ್ಲಿ ರಾಜ್ಯೋತ್ಸವ
ಹುಲ್ಲಹಳ್ಳಿ: ಕರ್ನಾಟಕ ರಕ್ಷಣಾ ವೇದಿಕೆಯಿಂದ ಗ್ರಾಮದ ಶ್ರೀಕಂಠ ಜೋಯಿಸ್ ವೃತ್ತದಲ್ಲಿ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಅದ್ಧೂರಿಯಾಗಿ ಆಚರಿಸಲಾಯಿತು. ಅಂತಾರಾಷ್ಟ್ರೀಯ ಅಂಗವಿಕಲ ಕ್ರಿಕೆಟ್ ಆಟಗಾರ ಮಹೇಶ ಧ್ವಜಾರೋಹಣ ನೆರವೇರಿಸಿದರು. ಗ್ರಾಪಂ ಅಧ್ಯಕ್ಷ ಎಚ್.ಎಂ. ಬಸವರಾಜು ಅಧ್ಯಕ್ಷತೆ ವಹಿಸಿ ಮಾತನಾಡಿ, ಕರವೇ ವತಿಯಿಂದ ಪ್ರತಿವರ್ಷವು ಅದ್ಧೂರಿಯಾಗಿ ಗ್ರಾಮೀಣ ಭಾಗದಲ್ಲಿ ಆಚರಿಸುತ್ತಿದ್ದಾರೆ. ಪ್ರತಿಯೊಂದು ಗ್ರಾಮಗಳಲ್ಲೂ ಆಚರಿಸಲು ಆದ್ಯತೆ ನೀಡುತ್ತಿದ್ದಾರೆ ಎಂದು ಪ್ರಶಂಶಿಸಿದರು. ಎಪಿಎಂಸಿ ಸದಸ್ಯ ಮಾದಪ್ಪ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಎಚ್.ಎಂ. ಬಸವರಾಜು, ಸದಸ್ಯರಾದ ವರದರಾಜು, ಗೋಪಾಲನಾಯಕ, ಶಿವನಂಜಪ್ಪ, ನಾಗರಾಜ, ವಿಮಲಮ್ಮ, ಉಪಾಧ್ಯಕ್ಷೆ ಸರೋಜ, ಕರವೇ ಹೋಬಳಿ ಅಧ್ಯಕ್ಷ ರವೀಂದ್ರ, ಫಯೂ, ಪದ್ದು, ರಾಮು, ಮಹೇಶ, ದೇವಣ್ಣ, ನಾಗರಾಜು, ಉಮೇಶ, ಸುಂದರ, ಆನಂದ್, ಮುಖ್ಯ ಶಿಕ್ಷಕ ಕೃಷ್ಣಮೂರ್ತಿ ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು. ದೈಹಿಕ ಶಿಕ್ಷಕ ದೇವರಾಜನಾಯಕ ನಿರೂಪಿಸಿದರು.
ಬೈಕ್ನಿಂದ ಬಿದ್ದು ಸಾವು
ಬೈಲಕುಪ್ಪೆ: ಬೈಕ್ನಲ್ಲಿ ತೆರಳುವಾಗ ಸವಾರನೊಬ್ಬ ಆಯತಪ್ಪಿ ಬಿದ್ದು ಮೃತಪಟ್ಟು, ಮತ್ತೊಬ್ಬರು ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗಿನ ಜಾವ ಬಿ.ಎಂ. ರಸ್ತೆಯ ಹತ್ತಿರ ಜರುಗಿದೆ. ಮೂಲತಃ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕು ನಿವಾಸಿ, ಬೆಂಗಳೂರಿನ ಸಮಾಜ ಕಲ್ಯಾಣ ಇಲಾಖೆಯ ನೌಕರ ಸೋಮಶೇಖರ (22) ಮೃತಪಟ್ಟ ದುರ್ದೈವಿ. ಹಿಂಬದಿ ಕುಳಿತಿದ್ದ ಸ್ನೇಹಿತ ಸೋಮವಾರಪೇಟೆಯ ಸಂಜಯ್ (24) ಗಾಯಗೊಂಡು, ಕುಶಾಲನಗರದ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಪಡೆದು, ನಂತರ ಮಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಬೈಲುಕುಪ್ಪೆ ಠಾಣಾಧಿಕಾರಿ ಮೊಕದ್ದಮೆ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಯುವಕ ನಾಪತ್ತೆ
ಬೈಲಕುಪ್ಪೆ: ಕುಶಾಲನಗರಕ್ಕೆ ಹೋಗಿ ಬರುವುದಾಗಿ ತೆರಳಿದ ಮರೂರು ಗ್ರಾಮದ ನಿವಾಸಿ ಎ.ಎಸ್. ಸ್ವಾಮಿ ಅವರ ಪುತ್ರ ಸಂತೋಷ (23) ಅ.29 ರಂದು ಕಾಣೆಯಾಗಿರುವ ಘಟನೆ ಬೈಲಕುಪ್ಪೆ ಠಾಣೆ ವ್ಯಾಪ್ತಿಯಲ್ಲಿ ಜರುಗಿದೆ. 5.8 ಅಡಿ ಎತ್ತರ, ಕಪ್ಪು ಬಣ್ಣ, ಸಾಧಾರಣ ಶರೀರ, ಕೋಲು ಮುಖ, ಚಿಗುರು ಮೀಸೆ, ಕನ್ನಡ ಮಾತನಾಡುತ್ತಾನೆ. ದೂ. 08223-254433 ಮೈಸೂರು ಜಿಲ್ಲಾ ಕಂಟ್ರೋಲ್ ರೂಮ್ ದೂ. 2444800 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

