'ಕಲಿಕಾ ಕೇಂದ್ರಗಳಲ್ಲಿ ಲೋಪ ಆಗದಂತೆ ಎಚ್ಚರ ವಹಿಸಿ'
ಕ.ಪ್ರ.ವಾರ್ತೆ ಮೈಸೂರು ನ. 3
ಶಿಕ್ಷಣ ವಂಚಿತರಿಗೆ ಶಿಕ್ಷಣ ನೀಡುವಾಗ ಕಲಿಕಾ ಕೇಂದ್ರಗಳು ಯಾವುದೆ ರೀತಿಯ ಲೋಪಗಳು ನುಸುಳದಂತೆ ನೋಡಿಕೊಂಡು ಈ ಮಹಾತ್ಕಾರ್ಯದಲ್ಲಿ ಭಾಗವಹಿಸಬೇಕೆಂದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ಡಿ. ನಾಗೇಂದ್ರಕುಮಾರ್ ಹೇಳಿದರು.
ಜೆಎಸ್ಎಸ್ ಕರ್ನಾಟಕ ಮುಕ್ತ ವಿದ್ಯಾಲಯದ ಸಮನ್ವಯಾಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಶಿಕ್ಷಣ ನೀಡುವುದು ಒಂದು ಪುಣ್ಯದ ಕಾರ್ಯ, ಜೆಎಸ್ಎಸ್ ಕರ್ನಾಟಕ ಮುಕ್ತ ವಿದ್ಯಾಲಯ ಈ ಕಾರ್ಯವನ್ನು ನಿರ್ವಹಿಸಿಕೊಂಡು ಬರುತ್ತಿರುವುದನ್ನು ಶ್ಲಾಘಿಸಿದರು. ಜೆಎಸ್ಎಸ್ ಮಹಾ ವಿದ್ಯಾಪೀಠದ ಸಾಮಾನ್ಯ ಶಿಕ್ಷಣ ವಿಭಾಗದ ನಿರ್ದೇಶಕ ಕೆ. ಶಾಂತಯ್ಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಲಿಕಾ ಕೇಂದ್ರಗಳು ಉತ್ತಮವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ಕಲಿಕೆಯ ಗುಣಮಟ್ಟ ಹೆಚ್ಚುತ್ತದೆ. ಈ ಉದ್ದೇಶ ಸಾಧನೆಗೆ ಎಲ್ಲ ಸಮನ್ವಯಾಧಿಕಾರಿಗಳು ಶ್ರಮಿಸಬೇಕೆಂದು ಕರೆ ನೀಡಿದರು. ಜೆಎಸ್ಎಸ್ ಕರ್ನಾಟಕ ಮುಕ್ತ ಶಾಲೆಯ ನಿರ್ದೇಶಕ ಡಾ. ಕೆ.ಎಂ. ವೀರಯ್ಯ ಮಾತನಾಡಿ, ಜೆಎಸ್ಎಸ್ ಕರ್ನಾಟಕ ಮುಕ್ತ ವಿವಿ ನಡೆದು ಬಂದ ದಾರಿಯನ್ನು ವಿವರಿಸಿ, ಇದರ ಮುಂದಿನ ಯೋಜನೆಗಳು, ಎದರುಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿದರು.
ಜೆಎಸ್ಎಸ್ ಮಹಾ ವಿದ್ಯಾಪೀಠದ ಸಾಮಾನ್ಯ ಶಿಕ್ಷಣ ವಿಭಾಗದ ಉಪ ನಿರ್ದೇಶಕ ಶೇಷಗಿರಿರಾವ್ ಮತ್ತು ಜೆಎಸ್ಎಸ್ ಕರ್ನಾಟಕ ಮುಕ್ತ ವಿವಿ ಸಹಾಯಕ ನಿರ್ದೇಶಕ ಎಸ್. ಚಂದ್ರಕಾಂತ, ಕಲಿಕಾ ಕೇಂದ್ರಗಳ ಸಮನ್ವಯಾಧಿಕಾರಿ ಉಪಯುಕ್ತ ಸಲಹೆ ನೀಡಿದರು.
ಡಾ. ಕೆ.ಎಂ. ವೀರಯ್ಯ ಸ್ವಾಗತಿಸಿದರು. ಉಪ ನಿರ್ದೇಶಕ ನಾಗರಾಜಾಚಾರ್ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

