ಕಸ್ತೂರಿ ಜನನಿ ಸಂಸ್ಥೆಯಲ್ಲಿ ರಾಜ್ಯೋತ್ಸವ
ಎಚ್.ಡಿ. ಕೋಟೆ: ಕನ್ನಡನಾಡು ದಕ್ಷಿಣದ ಕಾವೇರಿಯಿಂದ ಉತ್ತರದ ಗೋದಾವರಿಗೆ ವಿಸ್ತಾರಗೊಂಡಿತ್ತು ಎಂದು ಅಂದಿನ ನೃಪತುಂಗ ಕವಿ ತಮ್ಮ ಕವಿರಾಜಮಾರ್ಗದಲ್ಲಿ ತಿಳಿಸಿದ್ದಾರೆ ಎಂದು ನಿವೃತ್ತ ಕನ್ನಡ ಉಪನ್ಯಾಸಕ ಸಿ. ಸಿದ್ದರಾಜೇ ಅರಸ್ ಹೇಳಿದರು.
ಪಟ್ಟಣದ ಕಸ್ತೂರಿ ಜನನಿ ಸಂಸ್ಥೆಯ ಕಚೇರಿಯಲ್ಲಿ ನಡೆದ ಸರಳ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸಕರಾಗಿ ಅವರು ಮಾತನಾಡಿದರು.
ಆದರೆ ಅಂದಿಗೂ ಇಂದಿಗೂ ಕನ್ನಡ ನಾಡಿನ ವಿಸ್ತಾರದಲ್ಲಿ ಅಜಗಜಾಂತರ ಇದೆ. ಆದರೆ ಇಂದು ಕನ್ನಡ ನಾಡು ಅಷ್ಟು ದೊಡ್ಡದಿಲ್ಲ. ಕನ್ನಡ ನಾಡಿಗೆ ವಿಶೇಷ ಗುಣಗಳಿವೆ. ದೇಶದ ಇನ್ನಾವುದೆ ರಾಜ್ಯದಲ್ಲೂ ಕನ್ನಡ ನಾಡಿನಲ್ಲಿ ಕಂಡು ಬರುವ ವಿಶೇಷ ಗುಣಗಳು, ಸಾಹಿತ್ಯ ಪ್ರಕಾರಗಳು ಇಲ್ಲ. ಕನ್ನಡಿಗರದು ಬಹಳ ದೊಡ್ಡತನ ಇರುವಂತ ಗುಣಗಳು, ಅದಕ್ಕೆ ನಿದರ್ಶನವೆಂದರೆ ಅನ್ಯ ಭಾಷಿಗರನ್ನು ತಮ್ಮ ಮಡಿಲಿಗೆ ಹಾಕಿಕೊಂಡು ಸಾಕಿ ಸಲಹುವುದು ಎಂದು ತಿಳಿಸಿದರು.
ಕಸ್ತೂರಿ ಜನನಿ ಸಂಸ್ಥೆಯ ಅಧ್ಯಕ್ಷ ಸಿ.ಎಸ್. ಕುಮಾರಸ್ವಾಮಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕನ್ನಡ ಸಾಹಿತ್ಯ ಪರಿಷತ್ನ ತಾ. ಅಧ್ಯಕ್ಷ ಡಿ.ಆರ್. ಮಹೇಶ್ ಕಾರ್ಯಕ್ರಮ ಉದ್ಘಾಟಿಸಿದರು. ವಕೀಲ ಹಾಗೂ ಉಪನ್ಯಾಸಕ ಎಂ.ಎನ್. ರವಿಶಂಕರ್, ಕನ್ನಡ ಪ್ರಮೋದ್, ಎನ್ಎಸ್ಎಸ್ ಶಿಕ್ಷಕ ಪ್ರಕಾಶ್ ಮಾತನಾಡಿದರು.
ನಂತರ ಕಸ್ತೂರಿ ಸಂಸ್ಥೆಯ ಪರವಾಗಿ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಮಹದೇವಪ್ಪ, ನಿವೃತ್ತ ಉಪನ್ಯಾಸಕ ಸಿ. ಸಿದ್ದರಾಜೇ ಅರಸ್ ಹಾಗೂ ಹಿರಿಯರಾದ ಅಪ್ಪಾಜಿಗೌಡ ಅವರನ್ನು ಸನ್ಮಾನಿಸಲಾಯಿತು. ಸಂಸ್ಥಾಪಕ ಕಸ್ತೂರಿ ಸತೀಶ್, ಸೋಮಾಚಾರ್, ಜೆ.ಸಿ. ಯೋಗಿಶ್ಕುಮಾರ್, ಹನುಮೇಶ್, ಡಾ. ಜಯಂತ್, ಪ್ರಭು, ಚಂದ್ರಶೇಖರ್ ಆರಾಧ್ಯ, ಶಿಕ್ಷಕರಾದ ಸ್ವಾಮಿ, ಪವನ್, ರಾಜೇಶ್, ಆನಂದ್, ಚಲುವನಾಯಕ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

