ಮೈಸೂರು

ಜಸ್ಕೋ ಕಂಪನಿಯಿಂದ ಸಮಸ್ಯೆಗಳೇ ಹೆಚ್ಚು

Published On :

ಕ.ಪ್ರ.ವಾರ್ತೆ   ಮೈಸೂರು   ನ. 4
ನಗರಕ್ಕೆ 24್ಢ7 ನೀರು ಸರಬರಾಜು ಜವಾಬ್ದಾರಿ ವಹಿಸಿಕೊಂಡಿರುವ ಜಸ್ಕೋ ಕಂಪನಿಯಿಂದ ಸಾಕಷ್ಟು ಸಮಸ್ಯೆಗಳು ಉಂಟಾಗಿದೆ ಎಂದು ಮೈಸೂರು ಗ್ರಾಹಕರ ಪರಿಷತ್ನ ವಿ. ಮಹೇಶ್ ಆರೋಪಿದ್ದಾರೆ.
ಜಸ್ಕೋ ಕಂಪನಿಯ ಒಪ್ಪಂದ ರದ್ದುಪಡಿಸುವುದು ಸುಲಭವಲ್ಲ. ಜಸ್ಕೋಗೆ ಕುಡಿಯುವ ನೀರು ಸರಬರಾಜು ಮಾಡುವ ಜವಾಬ್ದಾರಿಯನ್ನು ವಹಿಸಲಾಯಿತು. ಈಗ ಒಪ್ಪಂದ ರದ್ದು ಮಾಡಿದರೆ 24.2 ಕಲಂ ಅನ್ವಯ ಜಸ್ಕೋ ಮಧ್ಯಸ್ಥಗಾರರ ಮೊರೆ ಹೋಗುತ್ತದೆ. ಜಸ್ಕೋ ಅನೇಕ ತಪ್ಪು ಮಾಡಿದ್ದರೂ 212 ಕೋಟಿ ಪರಿಷ್ಕೃತ ಅಂದಾಜನ್ನು ನಿಗದಿತ ಅವಧಿಯಲ್ಲಿ ನಿರಾಕರಿಸದೆ ಸರ್ಕಾರವೂ ತಪ್ಪು ಮಾಡಿದೆ. ಆದ್ದರಿಂದ ಮಧ್ಯಸ್ಥಗಾರ ಜಸ್ಕೋ ವಿರುದ್ಧ ತೀರ್ಪು ನೀಡುವುದಿಲ್ಲ. ಒಂದು ವೇಳೆ ಜಸ್ಕೋ ವಿರುದ್ಧ ತೀರ್ಪು ಬಂದರೂ ಉಳಿದ ಕೆಲಸ ಮಾಡಿಸಲು ಪಾಲಿಕೆ ಮರು ಟೆಂಡರ್ ಕರೆಯಬೇಕಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ನೀರು ಸರಬರಾಜು ಕಾಮಗಾರಿಯನ್ನು ಎರಡಾಗಿ ವಿಭಜಿಸಿ ಇಬ್ಬರಿಗೆ ಕಾಮಗಾರಿ ವಹಿಸಿದ್ದು ತಪ್ಪಾಗಿದೆ. ಒಬ್ಬರಿಗೂ ಎರಡೂ ಕಾಮಗಾರಿ ವಹಿಸಿದ್ದರೆ ಹೆಚ್ಚು ಸಮಸ್ಯೆ ಉಂಟಾಗುತ್ತಿರಲಿಲ್ಲ. ನೀರಿನ ಸಗಟು ಸರಬರಾಜಿನ ಹೊಣೆಯನ್ನು ಮಹಾನಗರ ಪಾಲಿಕೆಗೆ ಕೊಟ್ಟು ನೀರಿನ ವಿತರಣೆಯ ಹೊಣೆಯನ್ನು ಜಸ್ಕೋಗೆ ಕೊಟ್ಟಿರುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.
ಸರ್ಕಾರ ತನ್ನ ಅಂಗ ಸಂಸ್ಥೆಗೆ ಕೆಲಸ ಮಾಡಲು ಬೇಕಾದ ದಕ್ಷತೆ ಮತ್ತು ಕೌಶಲ್ಯ ಇಲ್ಲ ಎಂದು ತೀರ್ಮಾನಿಸಿಯೇ ಈ ಕೆಲಸವನ್ನು ಖಾಸಗಿ ಕಂಪನಿಗೆ ವಹಿಸಲಾಯಿತು. ಜಸ್ಕೋ ಒಪ್ಪಂದದಲ್ಲಿ ಅನೇಕ ನೂನ್ಯತೆಗಳಿವೆ. ಮನೆ ಆವರಣದ ಒಳಗೆ ಒಂದು ಮೀ. ಉದ್ದಕ್ಕೆ ಮಾತ್ರ ಹೊಸ ನೀರಿನ ಕೊಳವೆ ಅಳವಡಿಸಲು ಜಸ್ಕೋಗೆ ನಿರ್ಬಂಧ ಇದೆ. ಅಲ್ಲಿಂದ ಮುಂದಕ್ಕೆ ಮಾಪಕದ ತನಕ, ಕೊಳವೆಯನ್ನು ಮನೆ ಮಾಲೀಕರೇ ಹಾಕಿಸಬೇಕಾಗುತ್ತಿದೆ. ಇಷ್ಟು ಸಣ್ಣ ಕೆಲಸಕ್ಕೆ ಕೆಲಸಗಾರರನ್ನು ಹುಡುಕುವುದೆ ಬಹಳ ಕಷ್ಟ. ಕೆಲಸಗಾರರು ಸಿಕ್ಕರೂ ಅವರು ಮನಸ್ಸಿಗೆ ಬಂದಷ್ಟು ಕೂಲಿ ವಸೂಲು ಮಾಡುತ್ತಿದ್ದಾರೆ.
ಜಸ್ಕೋ ಒಪ್ಪಂದವನ್ನು ರಚಿಸಿದವರಿಗೆ ಈ ಸಮಸ್ಯೆ ಮುಂಚೆಯೇ ಹೊಳೆಯದಿರುವುದು ಸೋಜಿಗದ ಸಂಗತಿ. ಕೊಳವೆ ಅಳವಡಿಸಲು ರಸ್ತೆ ಅಗೆದು ಸಕಾಲದಲ್ಲಿ ರಿಪೇರಿ ಮಾಡದಿದ್ದರಿಂದ ನಿವಾಸಿಗಳಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಸಾಮಾನ್ಯವಾಗಿ ದೂರುಗಳು ಬರುತ್ತಿವೆ. ಅಗೆದ ಹಳ್ಳಗಳನ್ನು ಮಣ್ಣಿನಿಂದ ಮುಚ್ಚುವುದು, ದಮ್ಮಸ್ ಮಾಡುವುದು ಮತ್ತು ರಸ್ತೆಯನ್ನು ದುರಸ್ತಿ ಮಾಡುವುದು ಇವೆಲ್ಲವನ್ನು ನಿಗದಿತ ಅವಧಿಯಲ್ಲಿ ಮಾಡುವ ಷರತ್ತುಗಳನ್ನು ಸೇರಿಸಬಹುದಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.