ಬೆಟ್ಟದಪುರದಲ್ಲಿ ಬೆಳ್ಳಿ ಬಸವ ಮೂರ್ತಿ ಉತ್ಸವ
ಪಿ.ಎನ್. ಸುಬ್ರಹ್ಮಣ್ಯ
ಪಿರಿಯಾಪಟ್ಟಣ: ತಾಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಧಾರ್ಮಿಕ ಹಾಗೂ ಪಾರಂಪರಿಕವಾಗಿ ದೀವಟಿಗೆ(ಪಂಜಿನ ಮೆರವಣಿಗೆ) ಸೇವೆಯು ವಿಜೃಂಭಣೆಯಿಂದ ನೆರವೇರಿತು.
ಗ್ರಾಮದ ಸುತ್ತಮುತ್ತಲಿನ ಹಾಗೂ ಹೊರ ಜಿಲ್ಲೆಗಳ ಸಾವಿರಾರು ಭಕ್ತರು ದೀವಟಿಗೆ ಹಿಡಿದು ಸಿಡಿಲು ಮಲ್ಲಿಕಾರ್ಜುನ, ಭ್ರಮರಾಂಭ ಹಾಗೂ ಬೆಳ್ಳಿ ಬಸಪ್ಪ ದೇವರುಗಳ ಮೂರ್ತಿಗಳನ್ನು ಪಲ್ಲಕ್ಕಿಯೊಂದಿಗೆ ಬೆಟ್ಟದಪುರದ ಬೆಟ್ಟದ ಸುತ್ತ ಸುಮಾರು 18 ಕಿ.ಮೀ.ನಷ್ಟು ದೂರವನ್ನು ಕಾಲ್ನಿಡಿಗೆಯಲ್ಲಿ ಪ್ರದಕ್ಷಿಣೆ ಹಾಕಿ ಪೂಜೆ ಸಲ್ಲಿಸಿದರು.
ದೀವಟಿಗೆ ಸೇವೆಯಲ್ಲಿ ಪಾಲ್ಗೊಳ್ಳುವ ಭಕ್ತರು ಬೆಳಗ್ಗೆಯಿಂದಲೇ ಉಪವಾಸವಿದ್ದು ಜಾತ್ಯತೀತವಾಗಿ ದೀವಟಿಗೆಗಳನ್ನು ಹಿಡಿದು ಬೆಟ್ಟದ ಸುತ್ತ ದೇವರ ಮರೆವಣಿಗೆಯಲ್ಲಿ ಭಾಗವಹಿಸಿ ಹರಕೆ ತೀರಿಸುವುದು ಹಿಂದಿನಿಂದಲೂ ನಡೆದು ಬಂದ ಸಂಪ್ರದಾಯ.
ದೀವಟಿಗೆ ಸೇವೆಯು ಗ್ರಾಮದ ಸಿಡಿಲು ಮಲ್ಲಿಕಾರ್ಜುನ ದೇವಾಲಯದ ಮುಂಭಾಗದಿಂದ ಗಿರಿ(ಬೆಟ್ಟ) ಪ್ರದಕ್ಷಿಣೆ ಹೊರಟು ಬೆಟ್ಟದತುಂಗ, ತುಂಗದಕೊಪ್ಪಲು, ಕೆಳಗಿನಕೊಪ್ಪಲು ಕುಡುಕೂರು ಗ್ರಾಮಗಳ ಮೂಲಕ ಬೆಟ್ಟವನ್ನು ಸುತ್ತುತ್ತಾ ಸುತ್ತಲಿನ ಕಾಡು ದಾರಿಯಲ್ಲಿ ಮೆರವಣಿಗೆಯು ಸಾಗಿ ಬಂದು ಬೆಟ್ಟದಪುರ ಗ್ರಾಮದಲ್ಲಿರುವ ದೇವಸ್ಥಾನಕ್ಕೆ ಬಂದು ಸೇರಿತು.
ಪ್ರತಿ ಗ್ರಾಮಗಳ ಮನೆಯ ಮುಂದೆ ಚಪ್ಪರ ನಿರ್ಮಿಸಿ ಹಸಿರು ತೋರಣದಿಂದ ಅಲಂಕರಿಸಿ ಪೊಜೆ ಮಾಡಲಾಗುತ್ತದೆ. ಹೀಗೆ ಸುಮಾರು 128 ಮನೆಗಳ ಮುಂಭಾಗದಲ್ಲಿ ಮಂಟಪ ನಿರ್ಮಿಸಿ ಪೂಜಿಸಲಾಗುತ್ತದೆ ಎಂದು ದೀವಟಿಗೆ ಸೇವೆ ಸಲ್ಲಿಸುವ ಹಿರಿಯರು ತಿಳಿಸುತ್ತಾರೆ. ದೀವಟಿಗೆ ಹಿಡಿದು ಬರುವ ಭಕ್ತರಿಗೆ ಸುತ್ತಲಿನ ಗ್ರಾಮಸ್ಥರು ಮಜ್ಜಿಗೆ, ಪಾನಕ ಕೆಲವು ಕಡೆಗಳಲ್ಲಿ ಪ್ರಸಾದದ ವ್ಯವಸ್ಥೆ ಮಾಡಿರುತ್ತಾರೆ.
ಹಳೆಯದಾದ ದೀವಟಿಗೆಗಳು: ದೀವಟಿಗೆ ಸೇವೆಯಲ್ಲಿ ಭಾಗವಹಿಸುವ ಹಲವಾರು ಭಕ್ತರು ತರುವ ದೀವಟಿಗೆ ಹಾಗೂ ಎಣ್ಣೆಕಾಯಿಗಳಲ್ಲಿ(ದೀವಟಿಗೆಗೆ ಹಾಕಲು ಎಣ್ಣೆ ಇಟ್ಟುಕೊಳ್ಳುವ ವಿಶಿಷ್ಟ ಡಬ್ಬಿ) ಕೆಲವು 200 ವರ್ಷದಷ್ಟು ಹಳೆಯದಾಗಿದ್ದು, ಹಿತ್ತಾಳೆಯ ಲೋಹದ್ದಾಗಿದ್ದು ಸುಮಾರು 4ರಿಂದ 5 ಕೆ.ಜಿ. ತೂಕವುಳ್ಳದ್ದಾಗಿರುತ್ತವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

