ಮೈಸೂರು

ಕರ್ನಾಟಕ ಶಾಸ್ತ್ರೀಯ ಸಂಗೀತ ಸ್ಪರ್ಧೆ ವಿಜೇತರು

Published On :

ನಂಜನಗೂಡು: ಇಲ್ಲಿನ ಶೃಂಗೇರಿ ಶಂಕರಮಠ ಮತ್ತು ಸಂಪದ ಸಾಂಸ್ಕೃತಿಕ ಸಂಘಟನೆ ಪ್ರಾಯೋಜಿಸಿದ್ದ ಕರ್ನಾಟಕ ಶಾಸ್ತ್ರೀಯ ಸಂಗೀತ ರಾಗ, ತಾನ, ಪಲ್ಲವಿ ಗಾಯನ ಸ್ಪರ್ಧೆಯಲ್ಲಿ ಮೈಸೂರಿನ ಆರ್. ಹರಿಣಿ ಮತ್ತು ಬೆಂಗಳೂರಿನ ಯು.ಎನ್. ನಂದಿತಾ ಕ್ರಮವಾಗಿ ಪ್ರಥಮ ಮತ್ತು ದ್ವಿತೀಯ ಸ್ಥಾನ ಪಡೆದು ಸಾಧನೆ ಮೆರೆದಿದ್ದಾರೆ.
ಕಮಲಾ ಅವಧಾನಿ ಟ್ರಸ್ಟ್ ಆಶ್ರಯದಲ್ಲಿ ಪ್ರತಿ ವರ್ಷ ನಡೆಯುವ ಈ ಕ್ರಾರ್ಯಕ್ರಮದಲ್ಲಿ ಈ ಬಾರಿ 7 ಮಂದಿ ಸ್ಪರ್ಧಿಗಳು ಪಾಲ್ಗೊಂಡಿದ್ದರು. ತೀರ್ಪುಗಾರರ ಸೂಚನೆಯಂತೆ ನಡುವೆ ವಿವಿಧ ಪ್ರಕಾರಗಳಲ್ಲಿ ಹಾಡುಗಾರಿಕೆಯ ಪ್ರಾವೀಣ್ಯತೆಯನ್ನು ಸಭೆಗೆ ಪರಿಚಯಿಸುವುದು ಸ್ಪರ್ಧಿಗಳಿಗೆ ಸವಾಲೇ ಸರಿ.
ಸ್ಪರ್ಧಿಗಳು ಉತ್ತಮವಾದ ಹಾಡುಗಾರಿಕೆಯಿಂದ ಸಭಾ ಸ್ಪಂದನ ಮೂಡಿಸಿದರು. ಎರಡು ದಿನ ನಡೆದ ಕಾರ್ಯಕ್ರಮದಲ್ಲಿ ಮೊದಲ ದಿನ ಭಾರತೀ ತೀರ್ಥ ಸಭಾಂಗಣದಲ್ಲಿ ವಿದ್ವಾನ್ ಪಟ್ಟಾಭಿ ರಾಮಪಂಡಿತ್ ತಮ್ಮ ವಿದ್ವತ್ಪೂರ್ಣ ಗಾಯನದೊಂದಿಗೆ ಶ್ರೋತೃಗಳ ಮುಂದೆ ಸಂಗೀತ ರಸಲೋಕ ತೆರೆದಿಟ್ಟರು.
ಕರ್ನಾಟಕ ಶಾಸ್ತ್ರೀಯ ಸಂಗೀತದಲ್ಲಿ ಹೆಚ್ಚಿನ ಸಾಧನೆಗೆ ವಿದ್ಯಾರ್ಥಿಗಳನ್ನು ಪ್ರೆರೇಪಿಸಿ ಸಾಧನೆಯ ಹಾದಿಯಲ್ಲಿ ತೊಡಗಿಸುವುದೆ ಸ್ಪರ್ಧೆಯ ಉದ್ದೇಶ ಎಂದು ಕಾರ್ಯಕ್ರಮದ ರೂವಾರಿ ವಿ.ಟಿ. ಅವಧಾನಿ ತಿಳಿಸಿದರು.
ಸ್ಪರ್ಧೆಯ ತೀರ್ಪುಗಾರರಾಗಿ ಸಂಗೀತ ವಿದುಷಿ ಡಾ. ಬೇಬಿ ಶ್ರೀರಾಮ್ ಮತ್ತು ಖ್ಯಾತ ಲಯ ವಾದ್ಯ ವಿದ್ವಾನ್ ಜಿ.ಎಸ್. ರಾಮಾನುಜಂ ಇದ್ದರು. ವಿದ್ವಾನ್ ವೈದ್ಯನಾಥನ್ ಮತ್ತು ವಿದುಷಿ ರಮಾ ಬೆನ್ನೂರು ವಿಜೇತರಿಗೆ ನಗದು ಬಹುಮಾನದೊಂದಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಧರ್ಮಾಧಿಕಾರಿ ಎನ್.ಸಿ. ಶ್ರೀಕಂಠ ಜೋಯಿಸ್ ಶ್ರೀಮಠದ ವತಿಯಿಂದ ಸನ್ಮಾನಿಸಿದರು. ಸಂಪದದ ರಾಮಮೋಹನ್, ಡಾ. ವೈದ್ಯ ನಿರೂಪಿಸಿದರು. ಗೋಪಿನಾಥ್, ಶ್ರೀನಿವಾಸ್, ವಕೀಲ ಯೋಗಿಶ್, ಪುರಸಭೆ ಮಾಜಿ ಅಧ್ಯಕ್ಷ ಮಹದೇವಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.