ಇಲವಾಲದಲ್ಲಿ ನೀರಿನ ಘಟಕ ಉದ್ಘಾಟನೆ
ಕ.ಪ್ರ.ವಾರ್ತೆ ಮೈಸೂರು ಅ. 2
ಮಹಾತ್ಮ ಗಾಂಧಿ ಜಯಂತಿ ಅಂಗವಾಗಿ ಇಲವಾಲ ಗ್ರಾಪಂ ಆವರಣದಲ್ಲಿ ಶುದ್ಧ ಕುಡಿಯುವ ನೀರಿನ ಘಟಕವನ್ನು ಗ್ರಾಪಂ ಅಧ್ಯಕ್ಷ ಭೈರೇಗೌಡ ಉದ್ಘಾಟಿಸಿದರು.
ಜಿಲ್ಲೆಯಲ್ಲಿಯೇ ಪ್ರಥಮವಾಗಿ ಇಲವಾಲದಲ್ಲಿ 3.30 ಲಕ್ಷ ವೆಚ್ಚದಲ್ಲಿ ಸ್ಥಾಪಿಸಲಾಗಿದ್ದು, ಸಾರ್ವಜನಿಕರಿಗೆ 1 ರು.ಗೆ 1 ಲೀಟರ್ ನೀರು. 5ಗೆ 20 ಲೀಟರ್ ನೀರನ್ನು ಕಾಯಿನ್ ಹಾಕುವ ಮೂಲಕ ನೀಡಲಾಗುತ್ತದೆ. ಸಾರ್ವಜನಿಕರು ಬೆಳಗ್ಗೆ 8 ರಿಂದ ಸಂಜೆ 6 ಗಂಟೆವರೆಗೆ ನೀರನ್ನು ಪಡೆಯಬಹುದು ಎಂದು ಪಿಡಿಒ ನಾಗೇಗೌಡ ತಿಳಿಸಿದರು. ಈ ಬಗ್ಗೆ ಜಿಪಂ ಸಿಇಒ ಪಿ.ಎ. ಗೋಪಾಲ್ ಮಾತನಾಡಿ, ಸರ್ಕಾರ ಪ್ರತಿಯೊಬ್ಬರಿಗೂ ಶುದ್ಧ ಕುಡಿಯುವ ನೀರನ್ನು ಕೊಡಲು ಬದ್ಧವಾಗಿದ್ದು ಈ ನಿಟ್ಟಿನಲ್ಲಿ ಜಿಲ್ಲೆಯಲ್ಲಿ ಪ್ರತಿ ತಾಲೂಕಿಗೆ 5 ಶುದ್ಧ ಕುಡಿಯುವ ನೀರಿನ ಘಟಕವನ್ನು ಪ್ರಾಯೋಗಿಕವಾಗಿ ಸ್ಥಾಪಿಸಲು ತೀರ್ಮಾನಿಸಲಾಗಿದೆ ಎಂದರು. ಗ್ರಾಪಂ ಉಪಾಧ್ಯಕ್ಷೆ ಪುಟ್ಟಸಿದ್ದಮ್ಮ, ತಾಪಂ ಸದಸ್ಯ ಗೋವಿಂದಸ್ವಾಮಿ, ಎಂಜಿನಿಯರ್ ಕೆಂಪರಾಜು, ರಚನಾ, ಗ್ರಾಪಂ ಸದಸ್ಯರು ಇದ್ದರು.
ಸೆರೆಸಿಕ್ಕ ಕೊಲೆ ಆರೋಪಿ
ನಂಜನಗೂಡು: ತಾಲೂಕಿನ ಹೆಡಿಯಾಲ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಪ್ಲಾಸ್ಟಿಕ್ ವ್ಯಾಪಾರಿ ನೇಮನ್ ಹುಸೇನ್ ಕೊಲೆ ರಹಸ್ಯ ಭೇದಿಸುವಲ್ಲಿ ಹುಲ್ಲಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ. ಹತ್ಯೆಗೀಡಾದ ಹುಸೇನ್ನ ಆಪ್ತ ಸ್ನೇಹಿತ ಪ್ಲಾಸ್ಟಿಕ್ ವ್ಯಾಪಾರಿ ದಸ್ತಗೀರ್ (35) ಎಂಬಾತನೇ ಆರೋಪಿ ಎಂಬುದು ತನಿಖೆಯಿಂದ ಪತ್ತೆಯಾಗಿದೆ. ತನ್ನ ಪತ್ನಿಯೊಡನೆ ಅನೈತಿಕ ಸಂಬಂಧ ಬಯಸಿದ್ದ ದಸ್ತಗೀರ್ನ ನಡವಳಿಕೆಯನ್ನು ಪ್ರಶ್ನಿಸಿದ್ದೆ ಹುಸೇನ್ ಹತ್ಯೆಗೆ ಕಾರಣವಾಯಿತು ಎಂದು ಗೊತ್ತಾಗಿದೆ. ಆರೋಪಿಯನ್ನು ಮೈಸೂರು ನಗರದ ಬನ್ನಿಮಂಟಪದ ಸಮೀಪ ಬಂಧಿಸಲಾಯಿತು ಎಂದು ಸರ್ಕಲ್ ಇನ್ಸ್ಪೆಕ್ಟರ್ ಜಿ.ಎಸ್. ರಘು ತಿಳಿಸಿದರು. ಜಿ.ಎಸ್. ರಘು, ಹುಲ್ಲಹಳ್ಳಿ ಎಸ್ಐ ಎನ್. ಜಯಕುಮಾರ್ ಹಾಗೂ ಸಿಬ್ಬಂದಿ ಅರೋಪಿಯನ್ನು ಬಂಧಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

