ಮೈಸೂರು

ಗೋಡೆ ಹತ್ತುವ ಸ್ಪರ್ಧೆ: ಕೌಟಿಲ್ಯ ಶಾಲೆಗೆ ಬಹುಮಾನ

Published On :

ಕ.ಪ್ರ.ವಾರ್ತೆ    ಮೈಸೂರು    ಅ. 2
ದಸರಾ ಮಹೋತ್ಸವ ಅಂಗವಾಗಿ ದಸರಾ ಕ್ರೀಡಾಕೂಟ ಮತ್ತು ಸಾಹಸೋತ್ಸವ ಉಪ ಸಮಿತಿಯು ಬುಧವಾರ ತಾಲೂಕು ಮಟ್ಟದ ಕೃತಕ ಗೋಡೆ ಹತ್ತುವ ಸ್ಪರ್ಧೆ ಆಯೋಜಿಸಿತ್ತು.
15 ವರ್ಷ ಒಳಪಟ್ಟವರ ವಿಭಾಗದಲ್ಲಿ ಜ್ಯೋತಿನಗರ ಸರ್ಕಾರಿ ಶಾಲೆಯ ಶಿವಕುಮಾರ್, ನಜರ್ಬಾದ್ ಸರ್ಕಾರಿ ಶಾಲೆಯ ಪಿ.ನವೀನ್ಕುಮಾರ್ ಮತ್ತು ಕೌಟಿಲ್ಯ ವಿದ್ಯಾಶಾಲೆಯ ಎನ್.ಪಿ. ಪೂಜಿತ್ ಪ್ರಥಮ ಬಹುಮಾನ ಪಡೆದರು. ನಜರ್ಬಾದ್ ಶಾಲೆಯ ಕೆ.ಶಶಾಂಕ್, ಕೌಟಿಲ್ಯ ವಿದ್ಯಾಲಯದ ಅಂಜನೇಶ್ ಪ್ರತಾಪ್ ಮತ್ತು ಅದೆ ಶಾಲೆಯ ಡಿ.ಸುಶೀಲ್ ದ್ವಿತೀಯ ಬಹುಮಾನ ಪಡೆದರು. ಕೌಟಿಲ್ಯ ವಿದ್ಯಾಲಯದ ಕೆ.ಆರ್. ಅಭಿಷೇಕ್ ಮತ್ತು ಶಾಂತಲಾ ವಿದ್ಯಾಪೀಠದ ಎಂ. ಅಮಿತ್ ತೃತೀಯ ಬಹುಮಾನ ಪಡೆದರು. 15 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಗೋಪಾಲಸ್ವಾಮಿ ಶಿಶುವಿಹಾರದ ಶ್ರೀನಿಧಿ, ಕೌಟಿಲ್ಯ ವಿದ್ಯಾಲಯದ ಮೊಹಮ್ಮದ್ ಮತ್ತು ವಿದ್ಯಾರ್ಥಿಯೇತರ ಪವನ್ ಅರಸ್ ಪ್ರಥಮ ಬಹುಮಾನ. ಶಿವು, ಕೆಎಸ್ಐಒಯುನ ಪಿ. ಚಂದ್ರು, ಪ್ರಶಾಂತ್ ಅವರು ದ್ವಿತೀಯ ಬಹುಮಾನ ಗಳಿಸಿದ್ದಾರೆ. ಮರಿಮಲ್ಲಪ್ಪ ಶಾಲೆಯ ಎಂ.ಎಲ್. ಶಶಾಂಕ್, ಡೆಮೋನ್ಸ್ಟ್ರೇಷನ್ ವಿವಿಧೋದ್ದೇಶ ಶಾಲೆಯ ವಿ.ಅಲೋಕ್ ಮತ್ತು ವಿದ್ಯಾವಿಕಾಸ ಶಾಲೆಯ ಮಧು ತೃತೀಯ ಬಹುಮಾನ ಗಳಿಸಿದ್ದಾರೆ. ಸ್ಪರ್ಧೆ ವೇಳೆ ದಸರಾ ಕ್ರೀಡಾ ಉಪ ಸಮಿತಿ ಅಧ್ಯಕ್ಷ ಸತ್ಯನಾರಾಯಣ, ಉಪಾಧ್ಯಕ್ಷ ನರೇಂದ್ರ ಪ್ರಸಾದ್, ಎನ್ಐಎಫ್ ನಿರ್ದೇಶಕಿ ರುಕ್ಮಿಣಿ ಚಂದ್ರನ್, ದಸರಾ ಕ್ರೀಡಾ ಹಾಗೂ ಸಾಹಸೋತ್ಸವ ಉಪ ಸಮಿತಿ ಕಾರ್ಯದರ್ಶಿ ಕೆ. ಸುರೇಶ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.