ನಂಜನಗೂಡಿನಲ್ಲಿ ನಮೋ ಬ್ರಿಗೇಡ್
ಕ.ಪ್ರ.ವಾರ್ತೆ ನಂಜನಗೂಡು ಅ. 2
ಕಾಂಗ್ರೆಸ್ ಕಳೆ ಅಳಿಸಿ... ಮೋದಿ ಬೆಂಬಲಿಸಿ... ದೇಶ ಉಳಿಸಿ ಎಂಬ ಸಂಕಲ್ಪದೊಂದಿಗೆ ನಮೋ ಬ್ರಿಗೇಡ್ ಪಟ್ಟಣದಲ್ಲಿ ಬುಧವಾರ ಅಸ್ತಿತ್ವ ತಳೆಯಿತು.
ಹಿಂದೆ ಬ್ರಿಟಿಷರ ವಿರುದ್ಧದ ಹೋರಾಟದ ಹಾದಿಯಲ್ಲೇ ಇಂದು ಇಟಲಿ ವಿರುದ್ಧ ಹೋರಾಟ ರೂಪಿಸಬೇಕಾಗಿದೆ. ದೇಶದಲ್ಲಿ ಬಡತನ ನಿರ್ಮೂಲನೆ ಎಂದು ಬೊಗಳೆಬಿಟ್ಟ ಕಾಂಗ್ರೆಸ್ ನಾಯಕರ ಬಡತನ ಮಾತ್ರ ದೂರವಾದದ್ದು ಈಗ ಇತಿಹಾಸ. ಸದ್ಯದ ಪರಿಸ್ಥಿತಿಯಲ್ಲಿ ದೇಶಕ್ಕೆ ತಾಕತ್ತಿರುವ ಪ್ರಧಾನಿ ಅವಶ್ಯಕತೆ ಇದೆ ಎಂದು ಯುವ ಭಾರತ ರಾಜ್ಯಾಧ್ಯಕ್ಷ ನಿಖೇತ್ರಾಜ್ ಪ್ರತಿಪಾದಿಸಿದರು.
ಟೀ ಮಾರುವವರು ಯಾಕಾಗಬಾರದು: ಗೋಹತ್ಯೆ ನಿಷೇಧ ಗಾಂಧೀಜಿ ಅವರ ಕನಸಾಗಿತ್ತು. ಅವರ ಕನಸು ಗುಜರಾತ್ನಲ್ಲಿ ನನಸಾಗಿದೆ. ಇದರ ಅರಿವಿಲ್ಲದೆ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಅವರು ನರೇಂದ್ರ ಮೋದಿ ವಿರುದ್ಧ ಹರಿಹಾಯುತ್ತಿರುವುದು ಹಾಸ್ಯಾಸ್ಪದ. ಜಾತ್ಯತೀತತೆ ಹೆಸರಿನಲ್ಲಿ ದೇಶದ ಮತದಾರರನ್ನು ನಪುಂಸಕರನ್ನಾಗಿಸುವ ಕೆಲಸ ನಡೆದಿದೆ ಎಂದ ಅವರು, ಬಾರ್ನಲ್ಲಿ ವೈನ್ ಸಪ್ಲೈ ಮಾಡುತ್ತಿದ್ದ ವಿದೇಶಿ ಮಹಿಳೆ ಈ ದೇಶದ ಪ್ರಧಾನಿ ಆಗಬಹುದಾದರೆ, ರಸ್ತೆ ಬದಿ ಟೀ ಮಾರುತ್ತಿದ್ದ ಮೋದಿ ಏಕಾಗಬಾರದು ಎಂದು ಕಾಂಗ್ರೆಸ್ ನಾಯಕರಿಗೆ ನಿಖೇತ್ರಾಜ್ ಸವಾಲೆಸದರು.
ಮೈಸೂರಿನ ವಿಜಯ ವಿಠ್ಠಲ ಕಾಲೇಜಿನ ಪ್ರಾಂಶುಪಾಲ ಎಚ್. ಸತ್ಯಪ್ರಸಾದ್ ಬ್ರಿಗೇಡ್ ಉದ್ಘಾಟಿಸಿ ಮಾತನಾಡಿ, ದೇಶ ಪ್ರೇಮಕ್ಕೆ ಯಾವುದೇ ರಾಜಕೀಯ ಪಕ್ಷಗಳ ಅನಿವಾರ್ಯತೆ ಇಲ್ಲ. ಮೋದಿ ಅಲೆ ದೇಶದಲ್ಲಿ ಜನ ಜಾಗೃತಿ ಮೂಡಿಸಿದೆ. ಮತದಾನ ಜಾಗೃತಿ ಮೂಡಿಸುವಲ್ಲಿ ನಮೋ ಬ್ರಿಗೇಡ್ ಕಾರ್ಯೋನ್ಮುಖವಾಗಲಿ ಎಂದು ಹೇಳಿದರು.
ಮೋದಿ ಮುಖವಾಡ: ಮೋದಿ ಭಾವಚಿತ್ರದ ಮುಖವಾಡ ಮತ್ತು ಬಿಳಿ ಬನಿಯನ್ ತೊಟ್ಟ ಬ್ರಿಗೇಡ್ನ ನೂರಾರು ಯುವಕರು ಬೆಳಗ್ಗೆ ಊಟಿ ರಸ್ತೆಯ ಚಿಂತಾಮಣಿ ಗಣಪತಿ ಗುಡಿ ಮುಂಭಾಗದಿಂದ ಸಮಾರಂಭ ನಡೆದ ಭಾರತೀತೀರ್ಥ ಸಭಾಂಗಣದವರಿಗೆ ಬೈಕ್ ರ್ಯಾಲಿಯಲ್ಲಿ ಆಗಮಿಸಿ ಗಮನ ಸೆಳೆದರು. ಉಪನ್ಯಾಸಕ ಇ.ಕೆ. ರಾಮಮೋಹನ್ ನಿರೂಪಿಸಿದರು. ಹಿಂದೂಪರ ಸಂಘಟನೆಯ ರಾಮಯ್ಯ, ಮಾಜಿ ಶಾಸಕ ಎ.ಆರ್. ಕೃಷ್ಣಮೂರ್ತಿ, ಜಿಪಂ ಸದಸ್ಯ ಡಾ. ಶಿವರಾಮು, ಮಾಜಿ ಸದಸ್ಯೆ ಸರ್ವಮಂಗಳ, ಪುರಸಭಾ ಸದಸ್ಯ ಆನಂದ್, ಎನ್.ಆರ್. ಕೃಷ್ಣಪ್ಪಗೌಡ, ವಕೀಲರಾದ ಈ. ಮಹದೇವಕುಮಾರ್, ಮಹೇಶ್ ಅತ್ತಿಖಾನೆ, ಕೆ.ಎಂ. ಮಹೇಶ್, ವಾಲ್ಟರ್ ಬುತೇಲೊ ಇದ್ದರು. ಬ್ರಿಗೇಡ್ನ ಪ್ರದಿಪ್, ಮಂಗಳ, ಕಪಿಲೇಶ್, ರಮೇಶ್, ಭರತೇಶ್, ಕಿಶೋರ್, ಕೆ. ಚಂದನ್, ಶಿವಕುಮಾರ್, ರಾಹುಲ್, ಶ್ರೀಕಾಂತ್, ಕೆ.ಕಾರ್ತಿಕ್, ಎನ್. ಶಿವನಾರಾಯಣ ಶರ್ಮ, ಸಂಜಯ್ಶರ್ಮ, ಚಂದನ್, ಕೆ.ಬಿ. ಶಂಕರ್, ಮಂಜುನಾಥ್, ಮಧುಮಲ್ಲೇಶ್, ರವಿಶಾಸ್ತ್ರಿ, ಚಂದ್ರಶೇಖರ್, ಗಿರೀಶ್, ಶ್ರೀಕಾಂತ್, ಸನತ್ ಕುಮಾರ್ ನೇತೃತ್ವ ವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

