ಪ್ರೊ.ಅನಂತಮೂರ್ತಿ ಹೇಳಿಕೆಗೆ ತೀವ್ರ ಖಂಡನೆ
ಕ.ಪ್ರ.ವಾರ್ತೆ ನಂಜನಗೂಡು ಅ. 3
ಸಾಹಿತಿ ಯು.ಆರ್. ಅನಂತಮೂರ್ತಿ ಬ್ರಾಹ್ಮಣರನ್ನು ಗೋಭಕ್ಷಕರು ಎಂದು ಕರೆದಿರುವುದು ಖಂಡನೀಯ. ಅವರ ವರ್ತನೆಯನ್ನು ಬದಲಾಯಿಸಿಕೊಳ್ಳದಿದ್ದರೆ ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಇಳೈಆಳ್ವಾರ್ ಸ್ವಾಮೀಜಿ ಎಚ್ಚರಿಕೆ ನೀಡಿದರು.
ಭಾರತೀತೀರ್ಥ ಸಭಾಂಗಣದಲ್ಲಿ ತಾಲೂಕು ಬ್ರಾಹ್ಮಣ ಧರ್ಮ ಸಹಾಯ ಸಭಾ ಆಯೋಜಿಸಿದ್ದ ಯು.ಆರ್. ಅನಂತಮೂರ್ತಿ ಹೇಳಿಕೆ ಖಂಡನಾ ನಿರ್ಣಯ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಅನಂತಮೂರ್ತಿ ಅವರ ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಸಮುದಾಯವನ್ನು ಟೀಕಿಸಿದ್ದಾರೆ ಎಂದು ಆರೋಪಿಸಿದ ಅವರು, ರಾಜ್ಯದಲ್ಲಿ 80 ಲಕ್ಷಕ್ಕೂ ಅಧಿಕ ಬ್ರಾಹ್ಮಣ ಸಮುದಾಯದವರಿದ್ದರೂ, ಕೇವಲ 28 ಲಕ್ಷ ಜನ ಮಾತ್ರ ಸದಸ್ಯತ್ವ ಹೊಂದಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ನೋಂದಾಯಿಸಿಕೊಂಡು ವಿಪ್ರ ಸಮುದಾಯವು ಸಂಘಟಿತರಾದಾಗ ಮಾತ್ರ ಇಂತಹ ವಿರೋಧಗಳನ್ನು ಎದುರಿಸಲು ಸಾಧ್ಯ ಎಂದರು.
ಸಮುದಾಯದ ಮುಖಂಡ ಯು.ಎನ್. ಪದ್ಮನಾಭರಾವ್ ಮಾತನಾಡಿ, ರಾಜಕೀಯ ಲಾಭಕ್ಕಾಗಿ ಇಲ್ಲ ಸಲ್ಲದ ಹೇಳಿಕೆಗಳನ್ನು ನೀಡಿ ಪುಕ್ಕಟೆ ಪ್ರಚಾರ ಪಡೆಯುವ ಪ್ರವೃತ್ತಿಯನ್ನು ಅನಂತಮೂರ್ತಿ ಕೈಬಿಡಬೇಕು. ಬ್ರಾಹ್ಮಣ ಸಮುದಾಯ ಕೇವಲ ವಿದ್ಯಾವಂತರಾಗದೆ ಆರ್ಥಿಕವಾಗಿ ಸಬಲರಾಗಬೇಕು. ಸಮುದಾಯದವರಿಗೆ ತೊಂದರೆ ಎದುರಾದಲ್ಲಿ ಪ್ರತಿಭಟಿಸುವ ಶಕ್ತಿ ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಸಭೆ ಕೈಗೊಂಡ ಖಂಡನಾ ನಿರ್ಣಯವನ್ನು ಅನಂತಮೂರ್ತಿ ಅವರ ವಿಳಾಸಕ್ಕೆ ತಲುಪಿಸಲು ತೀರ್ಮಾನಿಸಲಾಯಿತು. ಚಾಮರಾಜನಗರದ ಸುರೇಶ್ಋಗ್ವೇದಿ, ಶಂಕರ ಮಠದ ಧರ್ಮಾಧಿಕಾರಿ ಎನ್.ಸಿ. ಶ್ರೀಕಂಠಜೋಯಿಸ್ ಮಾತನಾಡಿದರು.
ಉಪನ್ಯಾಸಕ ಇ.ಕೆ. ರಾಮಮೋಹನ್, ರಮೇಶಧನ್ಯ, ಪುರಸಭಾ ಸದಸ್ಯರಾದ ಆನಂದ್, ರಾಮಕೃಷ್ಣ, ಪ್ರಮುಖರಾದ ಗೋವರ್ಧನ್, ರಾಘವೇಂದ್ರ, ಕಪಿಲೇಶ್, ರಮೇಶ್, ರಂಗನಾಥ್, ನರಸಿಂಹ, ಗೋಪಿ, ನಾಗರಾಜು, ರಾಜೇಶ್ ಬೋರೆ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

