ಮೈಸೂರು

ತಲಕಾಡಿಗೆ ಕಾಲೇಜು: ಸಚಿವರಿಗೆ ಕೃತಜ್ಞತೆ

Published On :

ತಲಕಾಡು: ಟಿ. ನರಸೀಪುರ ತಾಲೂಕಿನ ತಲಕಾಡಿಗೆ ಪದವಿ ಪೂರ್ವ ಕಾಲೇಜು ಮಂಜೂರು ಮಾಡಿರುವ ಸರ್ಕಾರಕ್ಕೆ ಹಸ್ತಿಕೇರಿ ಮಠದ ಅಧ್ಯಕ್ಷ ಡಾ.ಸಿದ್ದಮಲ್ಲಿಕಾರ್ಜುನ ಸ್ವಾಮೀಜಿ ಹಾಗೂ ಕಾರ್ಯದರ್ಶಿ ಟಿ.ಎನ್. ದಾಸೇಗೌಡ ಕೃತಜ್ಞತೆ ಸಲ್ಲಿಸಿದ್ದಾರೆ. ಕಳೆದ ಐದಾರು ವರ್ಷಗಳಿಂದ ತಲಕಾಡಿಗೆ ಪದವಿ ಕಾಲೇಜು ಮಂಜೂರು ಮಾಡುವಂತೆ ಸರ್ಕಾರಗಳನ್ನು ಮಠವು  ಒತ್ತಾಯಿಸುತ್ತಾ ಬಂದಿತ್ತು. 2013- 14ನೇ ಸಾಲಿಗೆ ಇಲ್ಲಿನ ಶಾಸಕ ಹಾಗೂ ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಮಂಜೂರು ಮಾಡಿಸಿರುವುದು ಅಭಿನಂದನೀಯ ಎಂದಿದ್ದಾರೆ. ಪ್ರವಾಸಿ ತಾಣ ತಲಕಾಡಿನಲ್ಲಿ ಡಿ.2 ರಂದು ಪಂಚಲಿಂಗ ದರ್ಶನ ನಡೆಯಲಿದ್ದು, ದಸರಾ ಹಿನ್ನೆಲೆಯಲ್ಲಿ ಈವರೆಗೆ ಪೂರ್ವಸಿದ್ಧತೆ ಕಾರ್ಯ ನಡೆದಿಲ್ಲ. ಈ ಮಹೋತ್ಸವದ ಅಂಗವಾಗಿ ಅಗತ್ಯ ಸೌಕರ್ಯಗಳನ್ನು ಒದಗಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರಿನಿವಾಸ ಪ್ರಸಾದ್ ಅವರು ಗಮನ ಹರಿಸಿ ಜಿಲ್ಲಾಡಳಿತಕ್ಕೆ ಸೂಕ್ತ ಸಲಹೆ ನೀಡಬೇಕು ಎಂದು ಅವರು ತಿಳಿಸಿದ್ದಾರೆ.
ಉಪನ್ಯಾಸಕರ ಸಭೆ
ಮೈಸೂರು- ಚಾಮರಾಜನಗರ ಸರ್ಕಾರಿ, ಅನುದಾನಿತ ಪಿಯು ಕಾಲೇಜುಗಳಲ್ಲಿ ಕಾಯಂ ಆಗಿ ಕಾರ್ಯನಿರ್ವಹಿಸುತ್ತಿರುವ ಪಿಎಚ್.ಡಿ., ಎನ್ ಇಟಿ, ಎಸ್ಎಲ್ಇಟಿ, ಯುಜಿಸಿ, ಎಂ.ಫಿಲ್ ಪಾಸು ಮಾಡಿರುವ ಪ್ರಾಚಾರ್ಯರು ಮತ್ತು ಉಪನ್ಯಾಸಕರ ಸಭೆಯನ್ನು ಅ.6ರ ಬೆಳಗ್ಗೆ 11ಕ್ಕೆ ಮಹಾರಾಣಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಏರ್ಪಡಿಸಿದ್ದು, ಮೊ. 94484 25774 ಸಂಪರ್ಕಿಸಿ.
ತಪಾಸಣೆ
ಧನ್ವಂತ್ರಿ ರಸ್ತೆಯಲ್ಲಿರುವ ನೌಕರರ ಭವನದಲ್ಲಿ ಜಿಲ್ಲಾ ಸರ್ಕಾರಿ ನೌಕರರ ಸಂಘದ ಸದಸ್ಯರು ಮತ್ತು ಕುಟುಂಬಸ್ಥರಿಗೆ ಅ.6ರ ಬೆಳಗ್ಗೆ 10 ರಿಂದ ಮಧ್ಯಾಹ್ನ 1 ರವರೆಗೆ ನ್ಯೂರೋಪತಿ, ಬಿ.ಪಿ. ತಪಾಸಣೆ ಶಿಬಿರ ಏರ್ಪಡಿಸಿದ್ದು, ಮೊ. 91411 19651 ಸಂಪರ್ಕಿಸಿ. ಹೆಬ್ಬಾಳಿನಲ್ಲಿರುವ ರೀವರ್ ವ್ಯೂ ಆಸ್ಪತ್ರೆಯಲ್ಲಿ ಅ.6ರ ಬೆಳಗ್ಗೆ 10ಕ್ಕೆ ಗುದ ಸಂಬಂಧಿ ತೊಂದರೆಗೆ ಉಚಿತ ತಪಾಸಣೆ ಶಿಬಿರ ಏರ್ಪಡಿಸಿದ್ದು, ಮೊ. 88844 08000 ಸಂಪರ್ಕಿಸಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.