ಕುಸ್ತಿಯಲ್ಲಿ ಸಮಬಲ ಸಾಧಕರೆ ಹೆಚ್ಚು
ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಡಿ.ದೇವರಾಜ ಅರಸ್ ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕುಸ್ತಿ ಪಂದ್ಯಾವಳಿ ಭಾನುವಾರ ಸಮಬಲ ಸಾಧಕರ ಅಖಾಡವಾಗಿತ್ತು. ಎರಡನೇ ದಿನದ ನಾಡಕುಸ್ತಿಯಲ್ಲಿ ಬಹುತೇಕ ಜೋಡಿಗಳು ಸೆಣಸಾಟವು ಸಮಬಲದೊಂದಿಗೆ ಮುಕ್ತಾಯಗೊಂಡಿತು.
ಬಾಬುರಾಯಕೊಪ್ಪಲಿನ ಕಿರಣ್ಕುಮಾರ್- ನವೀನ್ಕುಮಾರ್, ರಮ್ಮನಹಳ್ಳಿಯ ರಘು- ಶಂಕರಪುರದ ಶೈಲೇಶ್, ನಂಜನಗೂಡಿನ ಸಲ್ಮಾನ್- ಬೆಂಗಳೂರಿನ ಆಡುಗೋಡಿಯ ಜಿಂಕೆಮರಿ, ಶ್ರೀರಂಗಪಟ್ಟಣದ ಮಧು- ಮೈಸೂರಿನ ಅಮೃತ್ಕುಮಾರ್, ಗಂಜಾಂನ ರವಿಚಂದ್ರ- ಮೆಲ್ಲಹಳ್ಳಿಯ ಮಹದೇವು, ಗಳಿಗರಹುಂಡಿಯ ಸುರೇಶ್- ಕೆ.ಜಿ. ಕೊಪ್ಪಲಿನ ಸತ್ಯ, ರಮ್ಮನಹಳ್ಳಿಯ ಪ್ರವೀಣ್- ಈರನಗೆರೆಯ ಕುಮಾರ್, ಪಾಲಹಳ್ಳಿಯ ಸಂಜು- ಮೈಸೂರಿನ ಕಾರ್ತಿಕ್, ಮೇಳಾಪುರದ ಮಂಜುನಾಥ್- ಕಳಲೆಯ ಗುಂಡ, ಎಸ್.ರಘು- ನವೀನ್, ಬೋಗಾದಿ ಚಾಮುಂಡಿ ಆನಂದ್- ಮಹದೇವಪುರದ ಮಧು ಸಮಬಲ ಸಾಧಿಸಿದರು.
ಸಮಬಲ
ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಡಿ.ದೇವರಾಜ ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿಯಲ್ಲಿ ಬಹುಪಾಲು ಮಂದಿ ಜೋಡಿ ಸಮಬಲ ಸಾಧಿಸಿದರು. ಅಂತಿಮವಾಗಿ ಪೈಲ್ವಾನ್ ಮಂಜುನಾಥ್ ಜಯಗಳಿಸಿದರು. ಬನ್ನೂರು ಶಿವಕುಮಾರ್, ಹರೀಶ್, ರಮ್ಮನಹಳ್ಳಿ ಗಣೇಶ್, ಮೈಸೂರಿನ ಶ್ರೀಕಂಠು, ದೀಕ್ಷಿತ್, ಗಂಜಾಂನ ವೇಣು, ವೀರನಗೆರೆ ನವೀನ್ ಕುಮಾರ್ ಜಯಗಳಿಸಿದ್ದಾರೆ.
ಅದ್ಧೂರಿ ಪ್ರದರ್ಶನ ಚೋರಚರಣದಾಸ
ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವ ಅಂಗವಾಗಿ ಮಂಡ್ಯ ರಮೇಶ್ ನೇತೃತ್ವದ ನಟನ ತಂಡವು ದ್ವಾದಶ ರಂಗೋತ್ಸವ ಪ್ರಯುಕ್ತ ಚೋರ ಚರಣದಾಸ ನಾಟಕ ಪ್ರಸ್ತುತಪಡಿಸಿತು. ಸಮಾಜದ ಎಲ್ಲಾ ಆಯಾಮಗಳಿಗೂ ತಾಗುವಂತಹ ನಾಟಕದ ವಸ್ತು, ಮುಖ್ಯ ಪಾತ್ರ ಚರಣದಾಸ ಕಳ್ಳನಾದರೂ ಕೊಟ್ಟ ಮಾತಿಗೆ ತಪ್ಪದೆ ಸುಳ್ಳು ಹೇಳದೆ ಸತ್ಯದೆಡೆಗೆ ನಡೆಯುವ ಅವನ ಮನಸ್ಸು, ಪ್ರಸ್ತುತ ಮಾಧ್ಯಮ, ರಾಜಕಾರಣ, ಮಠ ಮಾನ್ಯಗಳ ಡೋಂಗೀತನ ಇದೆಲ್ಲದರ ಬಗೆಗೆ ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕುತ್ತಾ, ನಾಟಕದ ಕಡೆ ಭಾಗವು ಸತ್ಯದಿಂದಾಗುವ ಪರಿಣಾಮವನ್ನು ನಿರ್ದೇಶಕರು ಪ್ರೇಕ್ಷಕನಿಗೆ ಬಿಡುತ್ತಾರೆ. ನಾಟಕ ಸಂಪೂರ್ಣ ವಿಡಂಬನಾತ್ಮಕವಾಗಿ ನಗೆಗಡಲಿನಲ್ಲಿ ತೋಯಿಸಿದ್ದು ಎಲ್ಲರ ಮುಖದಲ್ಲೂ ಸಂತಸ ಕಂಡು ಬರುತ್ತಿತ್ತು. ಒಟ್ಟಿನಲ್ಲಿ ನಾಟಕವು ಪ್ರಸ್ತುತ ಸಮಾಜದ ಆಗುಹೋಗುಗಳಿಗೆ ಹಿಡಿದ ಕೈಗನ್ನಡಿಯಾಗಿದೆ. ಹಬೀಬ್ ತನ್ವೀರ್ ನಾಟಕ ರಚಿಸಿದ್ದಾರೆ. ಶ್ರೀ ಚಂದ್ರಶೇಖರ ಹೆಗ್ಗೂಠಾರ ಸಂಗೀತ ನೀಡಿದ್ದಾರೆ. ನಾಟಕದ ಹಾಡುಗಳನ್ನು ಮುರಳಿ ಶೃಂಗೇರಿ ರಚಿಸಿದ್ದಾರೆ. ನಾಟಕವನ್ನು ಮಂಡ್ಯ ರಮೇಶ್ ನಿರ್ದೇಶಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

