ರಕ್ತ ಚಂದನ ಮರ ಸಾಗಿಸುತ್ತಿದ್ದ ಇಬ್ಬರ ಸೆರೆ
ಕ.ಪ್ರ.ವಾರ್ತೆ ಮೈಸೂರು ಅ. 7
ಸ್ಕಾರ್ಪಿಯೋ ಕಾರಿನಲ್ಲಿ ಅಕ್ರಮವಾಗಿ ರಕ್ತ ಚಂದನ (ರೆಡ್ ಸ್ಯಾಂಡಲ್) ಮರದ ತುಂಡುಗಳನ್ನು ಸಾಗಿಸುತ್ತಿದ್ದ ಇಬ್ಬರು ಆರೋಪಿಗಳನ್ನು ಮೈಸೂರು ದಕ್ಷಿಣ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಮೈಸೂರಿನ ರಾಜೀವನಗರ ನಿವಾಸಿ ಇಮ್ತಿಯಾಜ್ ಖಾನ್ ಎಂಬವರ ಪುತ್ರ ಇರ್ಫಾನ್ ಖಾನ್ (32) ಮತ್ತು ಮಂಡಿ ಮೊಹಲ್ಲಾ ನಿವಾಸಿ ಫಿರುಲ್ಲಾ ಷರೀಫ್ ಎಂಬವರ ಪುತ್ರ ರಾಜೀಖ್ ಪಾಷ (25) ಬಂಧಿತ ಆರೋಪಿಗಳು. ಇವರಿಂದ 17 ಲಕ್ಷ ಮೌಲ್ಯದ ರಕ್ತ ಚಂದನ ಮರದ ತುಂಡುಗಳು, 5 ಲಕ್ಷ ಮೌಲ್ಯದ ಸ್ಕಾರ್ಪಿಯೋ ಕಾರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಇಬ್ಬರು ಎಲೆಕ್ಟ್ರಿಕ್ ಪೆನಲ್ಬೋರ್ಡ್ ಕೆಲಸ ಮಾಡಿಕೊಂಡಿದ್ದು, ಭಾನುವಾರ ಸ್ಕಾರ್ಪಿಯೋ ಕಾರಿನಲ್ಲಿ ಮೈಸೂರು ತಾಲೂಕು ರಮ್ಮನಹಳ್ಳಿ ಮಹದೇವಪುರ ರಸ್ತೆಯಲ್ಲಿ ರಕ್ತ ಚಂದನ ಮರವನ್ನು ತುಂಬಿಕೊಂಡು ಹೋಗುತ್ತಿದ್ದಾಗ ಪೊಲೀಸರು ಬಂಧಿಸಿದ್ದಾರೆ. ರಾಜೀವನಗರದ ಪರಾನ್ ಎಂಬಾತನು ಈ ಮರಗಳನ್ನು ಕೊಟ್ಟಿದ್ದಾಗಿ ಮತ್ತು ಇನ್ನೂ ಇದೇ ತರಹದ ಮರಗಳನ್ನು ರಾಜೀವನಗರದ ಫ್ಯಾಕ್ಟರಿ ಶೆಡ್ನಲ್ಲಿ ಇಟ್ಟಿರುವುದಾಗಿ ಆರೋಪಿಗಳು ಹೇಳಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜೀವನಗರದ ಆರೋಪಿ ಇರ್ಫಾನ್ ಖಾನ್ಗೆ ಸೇರಿದ ಫ್ಯಾಕ್ಟರಿ ಶೆಡ್ನಲ್ಲಿದ್ದ ರಕ್ತ ಚಂದನದ ಮರದ 12 ತುಂಡುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಎಸ್ಪಿ ಅಭಿನವ್ ಖರೆ, ಮೈಸೂರು ಗ್ರಾಮಾಂತರ ಉಪ ವಿಭಾಗದ ಡಿವೈಎಸ್ಪಿ ಶ್ರೀಹರಿ ಬರಗೂರು ಮಾರ್ಗದರ್ಶನದಲ್ಲಿ ಮೈಸೂರು ಗ್ರಾಮಾಂತರ ಸರ್ಕಲ್ ಇನ್ಸ್ಪೆಕ್ಟರ್ ಸದಾನಂದ ತಿಪ್ಪಣ್ಣನವರ್, ಮೈಸೂರು ದಕ್ಷಿಣ ಠಾಣೆಯ ಎಸ್ಐಗಳಾದ ಪಿ.ಜಗದೀಶ್, ಜಿ.ಎನ್. ರಮೇಶ್ ಮತ್ತು ಸಿಬ್ಬಂದಿ ವೆಂಕಟೇಶ್, ನಾರಾಯಣ, ಕೇಶವಮೂರ್ತಿ, ಅಬ್ದುಲ್ ಲತೀಫ್, ಮಹೇಶ್ ಈ ಪತ್ತೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

