ಮೈಸೂರು

ಸುನಿಧಿ ಗಾಯನಕ್ಕೆ ಹುಚ್ಚೆದ್ದು ಕುಣಿದ ಯುವಪಡೆ

Published On :

ಕ.ಪ್ರ.ವಾರ್ತೆ   ಮೈಸೂರು   ಅ. 8
ವೇದಿಕೆಯ ಕೇಂದ್ರ ಭಾಗದಿಂದ ನಾದದೊಂದಿಗೆ ಗಾಯನದ ತರಂಗಗಳು ಹೊರಹೊಮ್ಮುತ್ತಿದ್ದಂತೆ ಮುಂಭಾಗದಲ್ಲಿದ್ದ ಯುವಪಡೆಯ ಹರ್ಷೋಲ್ಲಾಸ ಮುಂಬರಿದು ಮುಗಿಲು ಮುಟ್ಟಿತು.
ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆಯುತ್ತಿರುವ ಯುವ ದಸರಾದ ಎರಡನೇ ದಿನವಾದ ಮಂಗಳವಾರ ಅಕ್ಷರಶಃ ಯುವಪಡೆ ಬೀಡುಬಿಟ್ಟಿತ್ತು. ಪ್ರೇಕ್ಷಕರ ದಾಂಗುಡಿಯನ್ನು ಕಂಡು ದಂಗಾದ ಕಲಾವಿದರು ಒಮ್ಮೆಲೆ ಬೆರಗುಗೊಂಡಂತೆ ತಮ್ಮಲ್ಲಿದ್ದ ಪ್ರತಿಭೆಯನ್ನು ಒಪ್ಪವಾಗಿ ತೋರಿಸುತ್ತಾ ಹೋದರು. ಪ್ರತಿಭೆ ಅನಾವರಣಗೊಳ್ಳುತ್ತಿದ್ದಂತೆ ಯುವಪಡೆಯಿಂದ ಶಿಳ್ಳೆ, ಕೇಕೆ, ವಿವಿಧ ಭಾವಭಂಗಿಯ ನೃತ್ಯ ಸಂಗಮ ಒಮ್ಮಿಂದೊಮ್ಮೇಲೇ ಉಮ್ಮಳಿಸಿ ಬರುತ್ತಿತ್ತು.
ಕಾರ್ಯಕ್ರಮದ ಮೊದಲಿಗೆ ಕೊಳ್ಳೇಗಾಲದ ಸೌಂಡ್ ಎನ್ ಸೌಂಡ್ಸ್ ಹಾಗೂ ಮೈಸೂರಿನ ಫ್ರೀಕಿ ಫೀಟ್ ಡ್ಯಾನ್ಸ್ ಅಕಾಡೆಮಿ ನೃತ್ಯಗಾರರು ಪ್ರದರ್ಶಿಸಿದ ಮನಮೋಹಕ ನೃತ್ಯ ಪ್ರೇಕ್ಷಕರನ್ನು ಸೊರೆಗೊಂಡಿತು. ನಗರದ ಬಿಂಕದ ನಡಿಗೆಗೆ ಗ್ರಾಮೀಣ ಸೊಗಡು ಸೇರಿಸಿದ ಗ್ರಾಮೀಣ ನೃತ್ಯಗಾರರು ಮೂಲ ಹೆಜ್ಜೆಗಳಲ್ಲೇ ಕುಣಿದರು. ಅವರಿಗೆ ಸಾಥ್ ನೀಡುವಂತೆ ಅಸ್ಸೋಂನ ಸಂಪ್ರದಾಯ ಕಲೆಯಾದ ಬಿಹೂ ನೃತ್ಯವೂ ಸೇರಿಕೊಂಡು ಮತ್ತಷ್ಟು ರಂಗು ತಂದಿತು.
ತಿನ್ನಬೇಡ ಕಮ್ಮಿ: ಇತ್ತೀಚೆಗೆ ತೆರೆ ಕಂಡ ಲೂಸಿಯಾ ಚಿತ್ರತಂಡದ ಸದಸ್ಯರು ವೇದಿಕೆ ಬಂದ ಕೂಡಲೇ 'ತಿನ್ನಬೇಡ ಕಮ್ಮಿ' ಎಂಬ ಉದ್ಗಾರ ತೂರಿಬಂದಿತು. ಕಲಾವಿದರ ನಿರೀಕ್ಷೆ ಈಡೇರಿತು. ತಕ್ಷಣ ಧ್ವನಿವರ್ಧಕದಿಂದ ಕಿವಿಗಡಚಿಕ್ಕುವ ಮಾರ್ದನಿ ಮಾರು ದೂರಿದಿಂದ ಹೊರಬಂದಂತೆ ಇಲ್ಲಿನ ಯುವಪಡೆಯು ನಗುಮುಖದಿಂದ ಉದ್ಗರಿಸುತ್ತಿದ್ದರು. ಚಿತ್ರದ ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ ಸಹ ಕಲಾವಿದರೊಂದಿಗೆ ವೇದಿಕೆಗೆ ಬಂದು ತಿನ್ನಬೇಡಕಮ್ಮಿ.. ತಿನ್ನಬೇಡ ಕಮ್ಮಿ..., ತಮ ತಮ ತಮಟೆ ಎದೆಯೊಳಗೆ... ಎಂಬ ಗೀತೆಯನ್ನು ಹಾಡಿ ರಂಜಿಸಿದರು.
ಎದೆ ಝಲ್ಲೆನಿಸುವ ನೃತ್ಯ: ಇನ್ನು ದಾವಣಗೆರೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ತಿರಂಗಾ ನೃತ್ಯವೂ ಪ್ರತಿಯೊಬ್ಬರ ಮೈ ರೋಮಾಂಚನಗೊಳಿಸಿ ದೇಶಭಕ್ತಿ ಉಕ್ಕಿಹರಿಯುವಂತೆ ಮಾಡಿತು.
   ಹಿಂದಿ ಗೀತೆಯೊಂದಿಗೆ ಕನ್ನಡದ ಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ ಸುನಿಧಿ ಶ್ರೋತೃಗಳ ಶ್ರವಣಕುಮಾರಿ, ಮನದ ಚಕೋರಿಯಾಗಿ ರಾರಾಜಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.