ಮೈಸೂರು

ಗಾಯಾಳುವಿಗೆ ಚಿಕಿತ್ಸಾ ವೆಚ್ಚ

Published On :

ತಾಂಡವಪುರ: ಹಾವು ಕಚ್ಚಿ ಗಾಯಗೊಂಡು ಗ್ರಾಮದ ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪತ್ರಕರ್ತ ಟಿ.ಕೆ. ಬಸವರಾಜು ಅವರನ್ನು ಜಿಪಂ ಸದಸ್ಯೆ ರೇವಮ್ಮ ಟಿ.ಕೆ. ಮಾಲೇಗೌಡ ಆಸ್ಪತ್ರೆಗೆ ಭೇಟಿ ನೀಡಿ, ಶೀಘ್ರ ಗುಣಮುಖರಾಗಲೆಂದು ಹಾರೈಸಿದರು. ನಂತರ ಅವರು ಮಾತನಾಡಿ, ಕಾಂಗ್ರೆಸ್ ಯುವ ಮುಖಂಡ ರಾಕೇಶ್ ಸಿದ್ದರಾಮಯ್ಯ ಬಸವರಾಜು ಅವರ ಚಿಕಿತ್ಸೆಗೆ ತಗುಲುವ ವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ. ಜಿಪಂ ಸದಸ್ಯರೊಂದಿಗೆ ತಾಂಡವಪುರ ಗ್ರಾಪಂ ಅಧ್ಯಕ್ಷ ಪಿ. ಗಿರೀಶ್, ಸದಸ್ಯರಾದ ಬಿ. ಶಿವಣ್ಣ, ಮಾಜಿ ಸದಸ್ಯ ಬಿ.ಪಿ. ಮಹದೇವು, ಅಹಿಂದ ಮುಖಂಡ ಮನ್ನೇಗೌಡ ಆಸ್ಪತ್ರೆಗೆ ಭೇಟಿ ನೀಡಿದ್ದರು.
ಸಂಘಕ್ಕೆ ಆಯ್ಕೆ
ಎಚ್.ಡಿ. ಕೋಟೆ: ತಾಲೂಕು ವಕೀಲರ ಸಂಘದ ನೂತನ ಪದಾಧಿಕಾರಿಗಳಾಗಿ ವಕೀಲ ಡಿ.ಆರ್. ಮಹೇಶ್(ಅಧ್ಯಕ್ಷರು)  ಜವರಯ್ಯ(ಉಪಾಧ್ಯಕ್ಷರು), ಜೆ. ಸತೀಶ(ಕಾರ್ಯದರ್ಶಿ), ಟಿ.ಜೆ. ಶಶಿಧರ(ಜಂಟಿ ಕಾರ್ಯದರ್ಶಿ), ದಿನೇಶ್(ಖಜಾಂಚಿ) ಅವಿರೋಧ ಆಯ್ಕೆಯಾಗಿದ್ದಾರೆ.
ತಪಾಸಣಾ ಶಿಬಿರ
ಎಚ್.ಡಿ. ಕೋಟೆ: ಮೈಸೂರಿನ ನಾರಾಯಣ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ವತಿಯಿಂದ ಅ.12ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಎಚ್.ಡಿ.ಸರ್ಕಾರಿ ಆಸ್ಪತ್ರೆಯಲ್ಲಿ ವಾಜಪೇಯಿ ಆರೋಗ್ಯಶ್ರೀ ಯೋಜನಯಡಿ ಆರೋಗ್ಯ ಉಚಿತ ತಪಾಸಣಾ ಶಿಬಿರ ಏರ್ಪಡಿಸಿದೆ. ಮಾಹಿತಿಗೆ ಮೊ. 9620625258 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.