ಮೈಸೂರು

ರಾಷ್ಟ್ರೀಯ ಕುಸ್ತಿ; ಸೆಮಿ ಫೈನಲ್‌ಗೆ ಕರ್ನಾಟಕ

Published On :

ಮೈಸೂರು: ದಸರಾ ರಾಷ್ಟ್ರೀಯ ಕುಸ್ತಿ ಪಂದ್ಯಾವಳಿಯ ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡ ಮೇಲುಗೈ ಸಾಧಿಸಿದ್ದು, ಸೆಮಿಫೈನಲ್ ಹಂತಕ್ಕೆ ತಲುಪಿದೆ. ಕುಸ್ತಿ ಪಂದ್ಯಾವಳಿಯ ಪುರುಷರ 60 ಕೆ.ಜಿ. ವಿಭಾಗದಲ್ಲಿ ಕರ್ನಾಟಕದ ಎಂ. ನಾಗರಾಜ್- ಎಂಎಲ್‌ಐಆರ್‌ಸಿ ತಂಡದ ಸಮೀರ್ ಪಾಟೀಲ್, ಆಕಾಶ್ ಗಾಡಿ- ಮುಂಬೈನ ರಾಕೇಶ್ ಕುಮಾರ್ ಅವರು ಮುಖಾಮುಖಿ ಆಗಲಿದ್ದಾರೆ. 55 ಕೆ.ಜಿ. ವಿಭಾಗದಲ್ಲಿ ಶರವಣ್- ಜಮಾದಾರ್ ಅವರನ್ನೂ, ಕರ್ನಾಟಕದ ಕೆಂಚಪ್ಪ- ವಿನಾಯಕ ಗೌರವ್ ಅವರು ಅ.10ರಂದು ಸೆಣಸುವರು. 66 ಕೆ.ಜಿ. ವಿಭಾಗದಲ್ಲಿ ಕರ್ನಾಟಕದವರೆ ಆದ ಸತೀಶ್ ಪಾದತರೆ- ಶಿವನಾಂದ, ರಮೇಶ್ ಮಲ್ಟಿ- ಸಿದ್ದಣ್ಣ ಪಾಟೀಲ್, 74 ಕೆ.ಜಿ. ವಿಭಾಗದಲ್ಲಿ ಕಾರ್ತಿಕ್ ಕಟೆ- ಪಾಂಡುರಂಗ ಸಿಂಧೆ, ಎಲ್. ಆನಂದ್- ಎಂಇಜಿಯ ಪಾಂಡುರಂಗ ಕಂಬಾರ್, 84 ಕೆ.ಜಿ. ವಿಭಾಗದಲ್ಲಿ ಕರ್ನಾಟಕದ ಲೋಕೇಶ್ ಯೆಲ್ಲ ಶೆಟ್ಟಿ- ಕೆಎಸ್‌ಪಿಯ ಭಾಗವಂತ್ ಬೆಳಗಿ, ಎಂಎಲ್‌ಐಆರ್‌ಸಿಯ ಸಂದೀಪ್ ಕುಮಾರ್- ಧಾರವಾಡದ ಎಸ್‌ಟಿಸಿಯ ಸಂದೀಪ್ ಕಾಟೆ ಅವರು ಮುಖಾಮುಖಿ ಆಗುವರು. ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಗೀತಾ ಮಿಶಾಲಿ- ಲಕ್ಷ್ಮೀ, ಗದಗ್‌ನ ಪ್ರೇಮ- ಧಾರವಾಡದ ಮಮತ, 51 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಶೃತಿ- ಆಳ್ವಾಸ್‌ನ ಧನಶ್ರೀ, ಗದಗನ ಶಾಹೀದ- ದೆಹಲಿಯ ಮಂಜು, 55 ಕೆ.ಜಿ. ವಿಭಾಗದಲ್ಲಿ ಮಹಾರಾಷ್ಟ್ರದ ಶ್ಯಾಮಲ- ಆಳ್ವಾಸ್‌ನ ರಂಜಿತ, ಎಸ್‌ಟಿಸಿ ಹಿಸ್ಸಾರ್‌ನ ನಿವೇದಿತ- ಆಳ್ವಾಸ್‌ನ ಸುಮೇಶ್ ಸಹ ಮುಖಾಮುಖಿ ಆಗುವರು. 59 ಕೆ.ಜಿ. ವಿಭಾಗದಲ್ಲಿ ಬೆಳಗಾವಿಯ ಪೂಜಾ- ಗದಗ್‌ನ ಜ್ಯೋತಿ ಉಪ್ಪಾರ್, ಕುರುಕ್ಷೇತ್ರದ ಸುಮೆ- ಆಳ್ವಾಸ್‌ನ ಸವಿಕ್ಕ, 63 ಕೆ.ಜಿ. ವಿಭಾಗದ ಆತ್ಮಶ್ರೀ- ಬೆಳಗಾವಿಯ ರೀತಾ ಪ್ರಿಯಾಂಕ, ಕುರುಕ್ಷೇತ್ರದ ಶಿವಾನಿ- ಆಳ್ವಾಸ್‌ನ ನಾಗರತ್ನ ಸಿದ್ದಿ, 67 ಕೆ.ಜಿ. ವಿಭಾಗದಲ್ಲಿ ಗುಜರಾತ್‌ನ ಕಟರ ಕೀರ್ತಿ- ಬೆಳಗಾವಿಯ ಐಶ್ವರ್ಯ, ಆಳ್ವಾಸ್‌ನ ಶಾಮ್ಯ- ಅಂಶ್ರೀ, 72 ಕೆ.ಜಿ. ವಿಭಾಗದಲ್ಲಿ ಕರ್ನಾಟಕದ ರಂಜಿತ- ಮಹಾರಾಷ್ಟ್ರದ ರೇಶ್ಮ ಅನಿಲ್ ಮನೆ, ರಮ್ಯ- ಕುರುಕ್ಷೇತ್ರದ ಇಂದು ಶರ್ಮ ಸೆಣಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.