ಮೇಗಳಕೊಪ್ಪಲಿನಲ್ಲಿ ಎನ್ಎಸ್ಎಸ್ ಶಿಬಿರ
ಕ.ಪ್ರ.ವಾರ್ತೆ ಬೈಲುಕುಪ್ಪೆ ಅ. 10
ಭಾರತ ಪ್ರಪಂಚದಲ್ಲೇ ಉತ್ತಮ ದೇಶ. ಈ ಮಣ್ಣಿನಲ್ಲಿ ಹುಟ್ಟಲು ನಾವೆಲ್ಲಾ ಪುಣ್ಯ ಮಾಡಿದ್ದೇವೆ ಎಂದು ಬಾಬಾ ಸ್ವಾಮೀಜಿ ಹೇಳಿದರು.
ಪಿರಿಯಾಪಟ್ಟಣ ತಾಲೂಕಿನ ಬೆಟ್ಟದತುಂಗದ ಮೇಗಳಕೊಪ್ಪಲಿನಲ್ಲಿ ಬೆಟ್ಟದಪುರ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ಏರ್ಪಡಿಸಿದ್ದ ವಾರ್ಷಿಕ ವಿಶೇಷ ಎನ್ಎಸ್ಎಸ್ ಶಿಬಿರದಲ್ಲಿ ಮಾತನಾಡಿದ ಅವರು, ಹೊರದೇಶಗಳಲ್ಲಿ ಕುಡಿಯಲು ನೀರಿಲ್ಲ ಆದರೆ, ನಮ್ಮ ಭಾರತ ಮಾತೆ ನಮಗೆ ಎಲ್ಲವನ್ನೂ ಸಂಮೃದ್ಧಿಯಾಗಿ ನೀಡಿದ್ದಾಳೆ ಹಾಗೂ ನಾವು ಸುರಕ್ಷಿತವಾಗಿದ್ದೇವೆ. ಯಾವುದೇ ಭೂಕಂಪನ ಅಥವಾ ಇತರೆ ಭೀತಿಯಿಲ್ಲ, ಹಾಗಾಗಿ ನಾವು ಈ ಮಣ್ಣಿನಲ್ಲಿ ಹುಟ್ಟಲು ಪುಣ್ಯಮಾಡಿದ್ದೇವೆ ಎಂದು ತಿಳಿಸಿದರು.
ಮಹಿಳೆಯರ ಸಬಲೀಕರಣ ಕುರಿತಾಗಿ ಉಪನ್ಯಾಸ ನೀಡಿದ ಡಾ. ನಫೀಜುಲ್ಲಾ ಷರೀಫ್, ನಮ್ಮ ಸಮಾಜದಲ್ಲಿ ಮೊದಲು ಅಂಗ ತಾರತಮ್ಯ ಹೋಗಲಾಡಿಸಬೇಕು, ಪುರುಷ ಪ್ರಧಾನವಾದ ಈ ಸಮಾಜದಲ್ಲಿ ಗಂಡು ಮಕ್ಕಳಿಗೆ ಕೊಡುವಷ್ಟು ಪ್ರಾಮುಖ್ಯತೆ ಹೆಣ್ಣು ಮಕ್ಕಳಿಗೂ ನೀಡುವಂತೆ ಮಾಡಬೇಕು ಎಂದು ಹೇಳಿದರು.
ಶಾಲಾಭಿವೃದ್ಧಿ ಅಧ್ಯಕ್ಷ ಸಿದ್ದೇಗೌಡ, ಟಿ.ಎಸ್. ಯಶೋದರ, ಲೋಕೇಶ್, ಕುಮಾರಸ್ವಾಮಿ, ಹಸನ್ರಾಜ್, ಶಿಬಿರಾಧಿಕಾರಿ ಜಿ.ಎಸ್. ಕುಮಾರಸ್ವಾಮಿ, ಎ.ಎನ್. ರವಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

