ಮೈಸೂರು

ಸರಸ್ವತಿ ನರಸಿಂಹಸ್ವಾಮಿ ನಿಧನ

Published On :

ಕ.ಪ್ರ.ವಾರ್ತೆ   ನಂಜನಗೂಡು   ಅ. 10
ಜೆಡಿಎಸ್ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಮತ್ತು ನಂಜನಗೂಡು ಪುರಸಭೆ ಮಾಜಿ ಅಧ್ಯಕ್ಷೆ ಪಿ. ಸರಸ್ವತಿ(58) ಬುಧವಾರ ರಾತ್ರಿ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.
ಪುರಸಭೆ ಮಾಜಿ ಅಧ್ಯಕ್ಷ ಎನ್. ನರಸಿಂಹಸ್ವಾಮಿ ಮೃತರ ಪತಿ. ಅವರಿಗೆ ಡಾ. ಹರ್ಷ ಸೇರಿದಂತೆ ಮೂವರು ಪುತ್ರರು ಇದ್ದಾರೆ.
ನಂಜನಗೂಡು ಪುರಸಭೆಗೆ ಮೂರು ಬಾರಿ ಆಯ್ಕೆಯಾಗಿದ್ದ ಸರಸ್ವತಿ, 1995ರಲ್ಲಿ ಉಪಾಧ್ಯಕ್ಷೆಯಾಗಿ ಮತ್ತು 2004ರಲ್ಲಿ ಅಧ್ಯಕ್ಷೆಯಾಗಿ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸಿ ಜನಮನ್ನಣೆಗೆ ಪಾತ್ರರಾಗಿದ್ದರು. ವಿಪಕ್ಷ ನಾಯಕರಾಗಿಯೂ ಅವರು ತೋರಿದ ದಿಟ್ಟತನ ಗಮನಾರ್ಹ. ಕ್ಷೇತ್ರದ ಅಂದಿನ ಹೆಸರಾಂತ ರಾಜಕಾರಣಿ ಕೆ. ನರಸೇಗೌಡರ ಕುಟುಂಬದ ಹಿರಿಯ ಸೊಸೆಯಾದ ಸರಸ್ವತಿ, ಪತಿ ನರಸಿಂಹಸ್ವಾಮಿ ಅವರ ರಾಜಕಾರಣಕ್ಕೆ ಹೆಗಲುಕೊಟ್ಟು ನಿಂತರಷ್ಟೇ ಅಲ್ಲದೆ, ರಾಜಕೀಯವಾಗಿ ತಮ್ಮ ವರ್ಚಸ್ಸನ್ನೂ ಬೆಳಸಿಕೊಂಡರು. ಪಟ್ಟಣಕ್ಕೆ ಯುಜಿಡಿ ಯೋಜನೆ ಕಾರ್ಯರೂಪಕ್ಕೆ ಬರುವಲ್ಲಿ ಸರಸ್ವತಿ ಅವರ ಶ್ರಮ ಅಭಿನಂದನಾರ್ಹ. ಸುತ್ತೂರ ಶ್ರೀಗಳು ಮೃತರ ಬಂಧುಗಳೊಂದಿಗೆ ದೂರವಾಣಿಯಲ್ಲಿ ಮಾತನಾಡಿ ಸಂತಾಪ ಸೂಚಿಸಿದರು.
ಗುರುವಾರ ಮಧ್ಯಾಹ್ನ ಇಲ್ಲಿನ ಪರುಶುರಾಮ ಕ್ಷೇತ್ರದ ರುದ್ರಭೂಮಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಿತು.
ಜಿಲ್ಲಾ ಉಸ್ತುವಾರಿ ಸಚಿವ ವಿ. ಶ್ರೀನಿವಾಸಪ್ರಸಾದ್, ಮಾಜಿ ಸಚಿವರಾದ ಎಂ. ಮಹದೇವ್, ಕೋಟೆ ಶಿವಣ್ಣ, ಶಾಸಕರಾದ ಜಿ.ಟಿ. ದೇವೇಗೌಡ, ಸಾ.ರಾ. ಮಹೇಶ್, ಸಿ. ಚಿಕ್ಕಮಾದು, ವಾಸು, ಸಂದೇಶ್ ನಾಗರಾಜ್, ಮೈಸೂರಿನ ಮೇಯರ್ ಎನ್.ಎಂ. ರಾಜೇಶ್ವರಿ, ಉಪ ಮೇಯರ್ ವಿ. ಶೈಲೇಂದ್ರ, ಪಾಲಿಕೆ ಸದಸ್ಯರಾದ ಸಿ. ಮಹದೇಶ್, ಎಸ್. ಬಾಲು, ಆರ್. ಲಿಂಗಪ್ಪ, ಪುರಸಭೆ ಮಾಜಿ ಅಧ್ಯಕ್ಷರಾದ ಎನ್.ಆರ್. ದೊರೆಸ್ವಾಮಿ, ಮುಹೀರ್, ಪಿ. ಶ್ರೀನಿವಾಸ್, ಸಿ.ಎಂ.ಶಂಕರ್, ಎನ್. ಶ್ರೀಧರ್, ಬಿ. ಚಲುವರಾಜು, ಎನ್.ಕೆ. ನಾಗರಾಜು, ಜೆಎಸ್ಎಸ್ ವಿದ್ಯಾಪೀಠದ ಕಾರ್ಯದರ್ಶಿ ಎಸ್ಪಿ. ಮಂಜುನಾಥ್, ಉಪ ಕಾರ್ಯದರ್ಶಿ ಶಿವಕುಮಾರಸ್ವಾಮಿ, ಮುಖಂಡರಾದ ಪ್ರೊ. ಮಲ್ಲಿಕಾರ್ಜುನಪ್ಪ, ಕೆ.ಆರ್. ಮೋಹನ್ಕುಮಾರ್, ಸಿ. ಬಸವೇಗೌಡ, ಯು.ಎನ್. ಪದ್ಮನಾಭರಾವ್, ಎಸ್.ಸಿ. ಬಸವರಾಜು, ಕರವೇ ಜಿಲ್ಲಾಧ್ಯಕ್ಷ ಪ್ರವೀಣ್ಕುಮಾರ್, ಪಿ. ವಿಶ್ವನಾಥ್, ಕೆ. ಮಹದೇವು, ಬಿ.ಪಿ. ಸುರೇಶ್, ಕೃಷ್ಣಪ್ಪ, ಎಸ್ಬಿಎಂ ಮಂಜು, ಎನ್. ಶ್ರೀನಿವಾಸ್, ಎನ್.ಇ. ಮಂಜುನಾಥ್, ಮಾಜಿ ಧರ್ಮದರ್ಶಿ ಸುರೇಶ್, ಪುರಸಭಾ ಸದಸ್ಯರಾದ ಎನ್.ಎಂ. ಮಂಜುನಾಥ್, ಅನುಸೂಯ ಸೇರಿದಂತೆ ನೂರಾರು ಮಂದಿ ಪ್ರಮುಖರು ಮೃತರ ಅಂತಿಮ ದರ್ಶನ ಪಡೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.