ಅಂಗಡಿಗಳ ಬಾಗಿಲು ಮುರಿದು ಸರಣಿ ಕಳವು
ಕ.ಪ್ರ.ವಾರ್ತೆ , ಮೈಸೂರು , ಅ. 16
ನಗರದ ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂಬತ್ತು ಅಂಗಡಿಗಳ ಬಾಗಿಲು ಮುರಿದು 1.37 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಬುಧವಾರ ಬೆಳಗಿನ ಜಾವ ನಡೆದಿದೆ.
ವಿಜಯನಗರ 2ನೇ ಹಂತ, ಹೆಬ್ಬಾಳು ಬಳಿಯ ತ್ರಿವೇಣಿ ವೃತ್ತ, ಸೂರ್ಯ ಬೇಕರಿ ವೃತ್ತ, ಅಭಿಷೇಕ್ ವೃತ್ತದ, ಮಹದೇಶ್ವರ ಬಡಾವಣೆ ಬಳಿಯಿರುವ ಅಂಗಡಿಗಳಲ್ಲಿ ಸರಣಿ ಕಳವು ನಡೆದಿದೆ.
ಭೈರವೇಶ್ವರ ಮೆಡಿಕಲ್ ಸ್ಟೋರ್, ಆಶಾಪುರ್ ಬುಕ್ ಡಿಪೋ, ರಾಮದೇವ್ ಸ್ಯಾರಿ ಸೆಂಟರ್, ಮಹಾವೀರ ಎಲಕ್ಟ್ರಾನಿಕ್ಸ್, ಶ್ರೀಲಕ್ಷ್ಮೀ ವೆಂಕಟೇಶ್ವರ ಪ್ರಾವಿಷನ್ ಸ್ಟೋರ್, ರಾಮದೇವ್ ಟೀ ಸ್ಟಾಲ್, ಟೆಕ್ನೋವರ್ಲ್ಡ್ ಮೊಬೈಲ್ ಶಾಫಿ ಸೇರಿದಂತೆ 9 ಅಂಗಡಿಗಳ ಬಾಗಿಲು ಮುರಿದಿದ್ದಾರೆ.
ಈ ಪೈಕಿ ಮೊಬೈಲ್ ಶಾಫಿ ಅಂಗಡಿಯಲ್ಲಿದ್ದ 1.30 ಲಕ್ಷ ಮೌಲ್ಯದ ಮೊಬೈಲ್‌ಗಳು, ಭೈರವೇಶ್ವರ ಮೆಡಿಕಲ್ ಸ್ಟೋರ್‌ನಲ್ಲಿದ್ದ 7,000 ಸೇರಿದಂತೆ 1.37 ಲಕ್ಷ ಕಳವಾಗಿದೆ. ಉಳಿದ ಅಂಗಡಿಗಳ ಬಾಗಿಲು ಮುರಿದು ಒಳ ನುಗ್ಗಿ ವಸ್ತುಗಳನ್ನು ಚೆಲ್ಲಾಪಿಲ್ಲಿ ಮಾಡಿದ್ದಾರೆ. ಮುಂಜಾನೆ ವಾಯುವಿಹಾರಕ್ಕೆ ತೆರಳುತ್ತಿದ್ದವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಡಿಸಿಪಿ ಎಂ.ಎಂ. ಮಹದೇವಯ್ಯ, ವಿಜಯನಗರ ಠಾಣೆ ಇನ್ಸ್‌ಪೆಕ್ಟರ್ ರವಿ, ಎಸ್‌ಐ ಕುಮಾರ್ ಮತ್ತು ಸಿಬ್ಬಂದಿ, ಬೆರಳಚ್ಚು ತಜ್ಞರು, ಶ್ವಾನದಳ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

