ವಿದ್ಯಾಸಿರಿಗೆ ಆಗ್ರಹಿಸಿ ಪ್ರತಿಭಟನೆ
ಮೈಸೂರು: ವಿದ್ಯಾಸಿರಿ ಯೋಜನೆ ಆರಂಭಿಸಲು ಒತ್ತಾಯಿಸಿ ಮಹಾರಾಜ ಕಾಲೇಜು ವಿದ್ಯಾರ್ಥಿಗಳು ಕ್ರಾಫರ್ಡ್ ಭವನದ ಎದುರು ಗುರುವಾರ ಪ್ರತಿಭಟಿಸಿದರು. ವಿದ್ಯಾಸಿರಿ ಯೋಜನೆಯನ್ನು ನಗರದ ಬಹಪಾಲು ಕಾಲೇಜುಗಳಲ್ಲಿ ಆರಂಭಿಸಲಾಗಿದೆ. ಆದರೆ ಮಹಾರಾಜ ಕಾಲೇಜಿನಲ್ಲಿ ಇನ್ನೂ ಈ ಯೋಜನೆಗೆ ಚಾಲನೆ ನೀಡಿಲ್ಲ. ಕೂಡಲೆ ಈ ಯೋಜನೆ ಜಾರಿಗೆ ತಂದು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಆಗ್ರಹಿಸಿ ಕುಲಸಚಿವ ಪ್ರೊ. ಸಿ. ಬಸವರಾಜು ಅವರಿಗೆ ಮನವಿ ಸಲ್ಲಿಸಿದರು.
ನಾಳೆ ಸಂಗೀತ ಸಂಜೆ
ಮೈಸೂರು: ಇಂಚರ ಬಳಗವು ಶ್ರೀಮತಿ ಪದ್ಮ ಮತ್ತು ಕಡಾಂಬಿ ಸೀತಾರಾಮ ಅಯ್ಯಂಗಾರ್ ಸ್ಮಾರಕ ಸಂಗೀತ ಸಂಜೆ- 100 ಕಾರ್ಯಕ್ರಮವನ್ನು ಅ.19ರ ಸಂಜೆ 5ಕ್ಕೆ ಶಾರದಾ ವಿಲಾಸ ಕಾಲೇಜು ಶತಮಾನೋತ್ಸವ ಭವನದಲ್ಲಿ ಆಯೋಜಿಸಿದೆ. 100ನೇ ಕಾರ್ಯಕ್ರಮ ಇದಾಗಿದ್ದು, ಭಕ್ತಿಗೀತೆ, ಭಾವಗೀತೆ, ಹಳೆಯ ಚಿತ್ರಗೀತೆಗಳನ್ನು ಹಾಡಲಾಗುತ್ತದೆ.
ರೈಲಿಗೆ ಸಿಲುಕಿ ಯುವಕ ಆತ್ಮಹತ್ಯೆ
ಮೈಸೂರು: ರೈಲಿಗೆ ಸಿಲುಕಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗೊಳ ಸಮೀಪ ನಡೆದಿದೆ. ಬಿಎಂಶ್ರೀ ನಗರ 9ನೇ ಮುಖ್ಯರಸ್ತೆ ನಿವಾಸಿ ಶಿವಮಲ್ಲಶೆಟ್ಟಿ ಎಂಬವರ ಪುತ್ರ ಎಸ್. ಶ್ರೀನಿವಾಸ ಮೂರ್ತಿ(21) ಆತ್ಮಹತ್ಯೆ ಮಾಡಿಕೊಂಡ ಯುವಕ. ಇನ್ಫೋಸಿಸ್ ಹಿಂಭಾಗದಲ್ಲಿನ ರೇಲ್ವೆ ಹಳಿಯ ಮೇಲೆ ಶವ ಗಮನಿಸಿದ ಅರಸೀಕೆರೆ ರೈಲಿನ ಚಾಲಕ ರೇಲ್ವೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮೃತ ಯುವಕ ಮೆಟ್ರೋಪೋಲ್ ವೃತ್ತ ಸಮೀಪದ ರಿಲಯನ್ಸ್ ಟ್ರೆಂಡ್ನಲ್ಲಿ ಕೆಲಸ ಮಾಡುತ್ತಿದ್ದನು. ಆತನ ಬಳಿ ಇದ್ದ ಟೆಂಡ್ರ್ನ ಗುರುತಿನ ಚೀಟಿ ಮೂಲಕ ಆತನ ವಿಳಾಸ ಪತ್ತೆಯಾಗಿದೆ. ಎರಡು ದಿನದಿಂದ ಮನೆಗೆ ಬಾರದ ಮಗ ಸ್ನೇಹಿತರ ಜೊತೆ ದಸರಾಗೆ ತೆರಳಿರಬಹುದು ಎಂದು ಪೋಷಕರು ಭಾವಿಸಿದ್ದರು. ಶ್ರೀನಿವಾಸಮೂರ್ತಿಯ ಗುರುತಿನ ಚೀಟಿಯ ಮೂಲಕ ವಿಳಾಸ ಪತ್ತೆ ಹಚ್ಚಿ, ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಲಾಗಿದೆ. ರೇಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

