ಅಧಿಕಾರಿಗಳ ನೇಮಕ
ಮೈಸೂರು: ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ- 2013ರ ಸೆಕ್ಷನ್ 14ರನ್ವಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪ ನಿರ್ದೇಶಕರ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಹಾಯಕ ನಿರ್ದೇಶಕರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಿ ಆದೇಶಿಸಲಾಗಿದೆ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ- 2013ರ ಅಡಿಯಲ್ಲಿ ಬರುವ ಎಲ್ಲಾ ಕುಂದುಕೊರತೆಯನ್ನು ಆಯಾ ಅಧಿಕಾರಿಗಳಿಗೆ ಸಲ್ಲಿಸಲು ಕೋರಲಾಗಿದೆ.
ಪ್ರಕಾಶ್ ಆಯ್ಕೆ
ಮೈಸೂರು: ಜಿಲ್ಲಾ ಹಾಪ್ಕಾಮ್ಸ್ನ ನಿರ್ದೇಶಕರಾಗಿ 2013-18ನೇ ಸಾಲಿಗೆ ಟಿ. ನರಸೀಪುರ ತಾಲೂಕಿನ ಮುಸವಿನಕೊಪ್ಪಲಿನ ಜಿ. ಪ್ರಕಾಶ್ 2ನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕರಾಟೆ: ಪ್ರಥಮ
ಮೈಸೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಕರ್ನಾಟಕ ಕ್ರೀಡಾ ಪ್ರಾಧಿಕಾರವು ಇತ್ತೀಚೆಗೆ ನಡೆಸಿದ ರಾಜ್ಯ ಮಟ್ಟದ ದಸರಾ ಕ್ರೀಡಾಕೂಟದ ಕರಾಟೆ ಸ್ಪರ್ಧೆಯಲ್ಲಿ ಶ್ರೀರಾಂಪುರದ ಮಹಾವೀರ ವಿದ್ಯಾಮಂದಿರ ಶಾಲೆಯ 8ನೇ ತರಗತಿ ವಿದ್ಯಾರ್ಥಿ ಡಿ.ಎಸ್. ತೇಜಸ್ ವೈಯಕ್ತಿಕ ಕತಾ ಮತ್ತು ಕುಮಿತೆ ಎರಡೂ ವಿಭಾಗದಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ. ಈತ ಗೋಜುಖಾನ್-ಕರಾಟೆ ಡೂ ಸಂಸ್ಥೆಯ ಸೆನ್ಸಾಯ್ ಶಿವಣ್ಣ ಅವರ ಬಳಿ ತರಬೇತಿ ಪಡೆಯುತ್ತಿದ್ದಾನೆ.
ಉಚಿತ ತಪಾಸಣೆ
ಮೈಸೂರು: ನಗರದ ಲಕ್ಷ್ಮೀಪುರಂನಲ್ಲಿರುವ ವಾಸನ್ ಐ ಕೇರ್ನಲ್ಲಿ ಯಶಸ್ವಿನಿ ಫಲಾನುಭವಿಗಳಿಗೆ ಕಣ್ಣಿನ ಉಚಿತ ತಪಾಸಣೆ ಹಾಗೂ ಶಸ್ತ್ರ ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ. ಯಶಸ್ವಿನಿ ಸಹಕಾರಿ ರೈತರ ಆರೋಗ್ಯ ರಕ್ಷಣಾ ಯೋಜನೆ ನೋಂದಾಯಿಸಲ್ಪಟ್ಟವರಿಗೆ ಉಚಿತ ನೋಂದಣಿ ಮತ್ತು ವೈದ್ಯರ ತಪಾಸಣೆ ಇರುತ್ತದೆ. ಚಿಕಿತ್ಸೆ ಅಗತ್ಯವಿದ್ದಲ್ಲಿ ಶೇ. 25ರಷ್ಟು ರಿಯಾಯಿತಿ ದರದಲ್ಲಿ ಮಾಡಿಕೊಡಲಾಗುತ್ತದೆ ಎಂದು ಆಸ್ಪತ್ರೆಯ ಡಾ. ಕೆ.ವಿ.ರಾಜೇಶ್ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಶಸ್ತ್ರಚಿಕಿತ್ಸೆಗೂ ಮುನ್ನ ಅಗತ್ಯವಿರುವ ಲ್ಯಾಬ್ ಪರೀಕ್ಷೆಗಳಾದ ಹಿಮೋಗ್ಲೋಬಿನ್, ಬ್ಲಡ್ ಶುಗರ್, ಎಚ್ಬಿಎಸ್, ಎ.ಜಿ.ಇಸಿಜಿ, ಎಸ್ಕ್ಯಾನ್ ಇವುಗಳನ್ನು 450ಕ್ಕೆ (ಇತರರಿಗೆ 900) ಮಾಡಿಕೊಡಲಾಗುತ್ತದೆ. ಈ ಸೌಲಭ್ಯ 75 ವರ್ಷದ ಒಳಗಿರುವವರಿಗೆ ಮಾತ್ರ ಅನ್ವಯಿಸುತ್ತದೆ ಎಂದರು. ಹೆಚ್ಚಿನ ಮಾಹಿತಿಗೆ ದೂ. 0821- 3989000 ಸಂಪರ್ಕಿಸಬಹುದು. ಡಾ. ಕವಿತಾ ವಾಡಿ, ಡಾ. ಸುನಿಲ್ ಇದ್ದರು.
ಸಂತಸದ ಶಿಬಿರ
ಮೈಸೂರು: ಸಿದ್ದಾರ್ಥನಗರದ ಆನಂದ ಮಾರ್ಗದಲ್ಲಿರುವ ದಿ ಆರ್ಟ್ ಆಫ್ ಲೀವಿಂಗ್ನಲ್ಲಿ ಅ.21ರಿಂದ 26 ರವರೆಗೆ ಸಂತಸದ ಶಿಬಿರ ಆಯೋಜಿಸಿದ್ದು, ಮೊ. 98455 20617 ಸಂಪರ್ಕಿಸಬಹುದು.
ರೈಲಿಗೆ ಸಿಲುಕಿ ವ್ಯಕ್ತಿ ಸಾವು
ಕ.ಪ್ರ.ವಾರ್ತೆ , ಮೈಸೂರು , ಅ. 18
ಮೈಸೂರು- ನಂಜನಗೂಡು ರೇಲ್ವೆ ಮಾರ್ಗದ ಅಶೋಕಪುರಂ- ಕಡಕೊಳ ಜಂಕ್ಷನ್ ನಡುವೆ ಸುಮಾರು 40 ವರ್ಷದ ಅಪರಿಚಿತ ವ್ಯಕ್ತಿಯೊಬ್ಬ ಶುಕ್ರವಾರ ರೈಲಿಗೆ ಸಿಲುಕಿ ಸಾವಿಗೀಡಾಗಿದ್ದಾರೆ. ಇಡೀ ದೇಹವು ರೈಲು ಗಾಲಿಗೆ ಸಿಲುಕಿದ್ದರಿಂದ ತಲೆ ಜಜ್ಜಿ ಹೋಗಿದ್ದು, ಕೈ- ಕಾಲು ತುಂಡರಿಸಿವೆ. ವ್ಯಕ್ತಿಯ ಚಹರೆ ಪತ್ತೆ ಹಚ್ಚಲಾಗದಷ್ಟು ಛಿದ್ರವಾಗಿದೆ. ವ್ಯಕ್ತಿ ಧರಿಸಿದ್ದ ಬಿಳಿ ಬಣ್ಣದ ಷರ್ಟ್, ಹಸಿರು ಬಣ್ಣದ ಚೌಕಳಿ ಕಾಟನ್ ಪಂಚೆ, ಕೆಂಪು ಉಡುದಾರ ಸಿಕ್ಕಿದೆ. ಮೈಸೂರು ರೇಲ್ವೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ವಾರಸುದಾರರು ಇದ್ದಲ್ಲಿ ದೂ. 0821- 2516579 ಸಂಪರ್ಕಿಸಬಹುದು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

