ಮೈಸೂರು

ತಾಯೆ ನಿನ್ನ ಮಡಿಲಲಿ...

Published On :

ಕ.ಪ್ರ.ವಾರ್ತೆ ಮೈಸೂರು ಅ. 20
ತಾಯೆ ನಿನ್ನ ಮಡಿಲಲಿ... ಎಂಬ ಸುಮಧುರ ಗೀತೆಯೊಂದಿಗೆ ಆರಂಭವಾದ ಇಂಚರ ಬಳಗದ 100ನೇ ಸಂಗೀತ ಕಾರ್ಯಕ್ರಮದಲ್ಲಿ ಉದಯ್ಮೋಖ ಗಾಯಕ, ಗಾಯಕಿಯರ ಗಾಯನ ಸುಧೆ ಸಂಗೀತ ಪ್ರೇಮಿಗಳ ಪ್ರಶಂಸೆಗೆ ಪಾತ್ರವಾಯಿತು.
ಕೃಷ್ಣಮೂರ್ತಿಪುರಂನ ಶಾರದಾ ವಿಲಾಸ ಶತಮಾನೋತ್ಸವ ಭವನದಲ್ಲಿ ಶನಿವಾರ ನಡೆದ ಈ ಸಂಗೀತ ಸಂಜೆಯಲ್ಲಿ, ಹಂಸಿನಿ ಎಸ್. ಕುಮಾರ್ ಅವರು ಅಮ್ಮ ನಿನ್ನ ತಾಯಿಯೆಂದು ಕರೆಯಲು, ಪ್ರಣೀತ ಎ. ಗೌತಮ್ ಅವರು ಅಮ್ಮ ಹಚ್ಚಿದೊಂದು ಹಣತೆ... ಎಂಬ ತಾಯಿ ಮಹತ್ವ ಕುರಿತ ಗೀತೆಗಳನ್ನು ಹಾಡಿದರು. ಅಮ್ಮನ ನೆನಪಿಸುವ ಇಂತಹ ಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭಿಸಲು ಕಾರಣವೂ ಇತ್ತು. ಇಂಚರ ಬಳಗದ ರೂವಾರಿ ನಾರಾಯಣ ಪ್ರಸಾದ್ ಅವರ ತಂದೆ ಸ್ವಾತಂತ್ರ್ಯ ಹೋರಾಟಗಾರ ಕಡಾಂಬಿ ಸೀತಾರಾಮ ಅಯ್ಯಂಗಾರ್ ಹಾಗೂ ತಾಯಿ ಪದ್ಮ. ಇವರ ಸ್ಮರಣಾರ್ಥ ಈ ಸಂಗೀತ ಸಂಜೆ ಏರ್ಪಡಿಸಲಾಗಿತ್ತು. ಪದ್ಮ ಹಾಡುತ್ತಿದ್ದರೂ ಅಲ್ಲದೆ ಹಾಡುವವರನ್ನು ಅಪಾರವಾಗಿ ಪ್ರೀತಿಸುತ್ತಿದ್ದರೂ ಈ ಕಾರಣಕ್ಕೂ ಸಂಗೀತ ಗಾಯಕರ ಉತ್ತೇಜನಕ್ಕೆ ಈ ಕಾರ್ಯಕ್ರಮ ಏರ್ಪಡಿಸುತ್ತಾ ಬಂದಿರುವುದು ವಿಶೇಷ.
ಈ ಸಂದರ್ಭದಲ್ಲಿ ಹೆಸರಾಂತ ಗಾಯಕ ಹಾಗೂ ರಾಗ ಸಂಯೋಜಕ ಗರ್ತಿಕೆರೆ ರಾಘಣ್ಣ ಅವರನ್ನು ನಾರಾಯಣ ಪ್ರಸಾದ್ ಮತ್ತು ನಳಿನಿ ಪ್ರಸಾದ್ ದಂಪತಿಯನ್ನು ಸನ್ಮಾನಿಸಿದರು. ವಕೀಲ ಪಿ.ಜೆ. ರಾಘವೇಂದ್ರ ಇದ್ದರು.
ನಂತರ ಭಕ್ತಿಗೀತೆಗಳ ಗಾಯನದಲ್ಲಿ ಜಸ್ವಂತ್ ಅವರು ನಾನೇಕೆ ಬಡವನು, ರಾಧಿಕಾ ಐ. ಭಟ್ ಅವರು ಸದಾ ನಿನ್ನ ನಾಲಿಗೆಯಲ್ಲಿ, ವಿಜಯಿಂದ್ರ ರಾವ್ ಅವರು ಸಪ್ತ ಸ್ವರದಲ್ಲಿ ತೇಲಿ ಬರುತ್ತಿದೆ, ಶ್ರೀಹರ್ಷ ಅವರು ಶಾರದೆ ದಯೆ ತೋರಿದೆ, ಹಂಸಿನಿ ಎಸ್. ಕುಮಾರ್ ಅವರು ಶಿವ ಶಿವ ಎನ್ನಲು ನಾಚಿಕೆಯಾಕೆ, ಅಶ್ವಿನಿ ಪ್ರಭು ಅವರು ಎಲ್ಲಾ ನಿನ್ನ ಮಾಯೆ ತಾಯಿ ಎಂಬ ಗೀತೆಯನ್ನು ಹಾಡಿದರು.
ಭಾವಗೀತೆಯಲ್ಲಿ ವಿಜಯಿಂದ್ರ ರಾವ್ ತರವಲ್ಲ ತಗಿನಿನ್ನ ತಂಬೂರಿ... ಎಂಬ ಗೀತೆ ಹಾಡಿ ಸಭಿಕರಿಗೆ ಮುದ ನೀಡಿದರು. ಗಣೇಶ್ ಭಟ್ ಮತ್ತು ವೃಂದದವರು ಪಕ್ಕ ವಾದ್ಯ ನುಡಿಸಿದರು. ರೂಪಶ್ರೀ ಹಾಗೂ ನಾಗರತ್ನ ನಿರೂಪಿಸಿದರು. ಸಭಾಂಗಣ ಸಂಗೀತ ರಸಿಕರಿಂದ ಭರ್ತಿಯಾಗಿತ್ತು.

ಎಟಿಎಂಇಗೆ ಚಾಂಪಿಯನ್‌ಶಿಪ್
ಕ.ಪ್ರ.ವಾರ್ತೆ ಮೈಸೂರು ಅ. 20
ಮೈಸೂರು ಹ್ಯಾಂಡ್‌ಬಾಲ್ ಅಸೋಸಿಯೇಷನ್ ಆಯೋಜಿಸಿದ್ದ ಹ್ಯಾಂಡ್‌ಬಾಲ್ ಪಂದ್ಯಾವಳಿಯಲ್ಲಿ ಎಟಿಎಂಇ ಎಂಜಿನಿಯರಿಂಗ್ ಕಾಲೇಜು ತಂಡ ಚಾಂಪಿಯನ್‌ಶಿಪ್ ಪಡೆದುಕೊಂಡಿತು. ಜೆ.ಪಿ. ನಗರದ ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ನಡೆದ ಎಟಿಎಂಇ ಹ್ಯಾಂಡ್‌ಬಾಲ್ ಚಾಂಪಿಯನ್‌ಶಿಪ್- 2013ನಲ್ಲಿ ಎಟಿಎಂಇ ತಂಡವು, ಸ್ಟ್ರೋಮಸ್ ತಂಡವನ್ನು 21-14 ಅಂತರದಿಂದ ಸೋಲಿಸಿತು. ಎಟಿಎಂಇ ತಂಡದ ಗಣೇಶ್ 11 ಮತ್ತು ಹರ್ಷ 9 ಗೋಲ್‌ಗಳನ್ನು ಬಾರಿಸಿ ತಂಡದ ಗೆಲವಿಗೆ ಕಾರಣರಾದರು. ಸ್ಟ್ರೋಮಸ್ ತಂಡವು ದ್ವಿತೀಯ ಸ್ಥಾನವನ್ನೂ, ವಾರಿಯರ್ಸ್ ತಂಡ ತೃತೀಯ ಸ್ಥಾನ ಗಳಿಸಿತು. ನಿವೃತ್ತ ಪ್ರಾಧ್ಯಾಪಕ ಪ್ರೊ. ಶೇಷಣ್ಣ ಬಹುಮಾನ ವಿತರಿಸಿದರು. ಎಟಿಎಂಇ ಎಂಜಿನಿಯರಿಂಗ್ ಕಾಲೇಜಿನ ಅಧ್ಯಕ್ಷ ಎಲ್. ಅರುಣ್ ಕುಮಾರ್, ಟ್ರಸ್ಟಿ ಆರ್. ವಿರೇಶ್, ಮೈಸೂರು ಹ್ಯಾಂಡ್‌ಬಾಲ್ ಸಂಘದ ಅಧ್ಯಕ್ಷ ಪಿ. ಕುಮರೇಶನ್, ವಿರೇಂದ್ರಕುಮಾರ್, ಭೈರಪ್ಪ, ಗುರುರಾಜ್, ನವೀನ್ ಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.