ರೇಲ್ವೆ ಕೆಳಸೇತುವೆ ಅವ್ಯವಸ್ಥೆ ಖಂಡಿಸಿ ಪ್ರತಿಭಟನೆ
ಕ.ಪ್ರ.ವಾರ್ತೆ ನಂಜನಗೂಡು ಅ. 22
ಪಟ್ಟಣದ ಎಂಜಿಎಸ್ ರಸ್ತೆಯಲ್ಲಿರುವ ರೇಲ್ವೆ ಕೆಳಸೇತುವೆ ಅವ್ಯವಸ್ಥೆ, ಮಳೆ ಬಂದಾಗ ನೀರು ನಿಂತು ವಾಹನಗಳು ಹಾಗೂ ಸಾರ್ವಜನಿಕರಿಗೆ ಕಿರಿಕಿರಿಯಾಗಿ ತೀವ್ರ ತೊಂದರೆಯಾಗಿದ್ದರೂ ಸಂಬಂಧಪಟ್ಟವರ ನಿರ್ಲಕ್ಷ್ಯ ಖಂಡಿಸಿ, ಸೇತುವೆ ಕೆಳಗೆ ನಿಂತ ನೀರಲ್ಲಿ ತೆಪ್ಪದಲ್ಲಿ ಚಲಿಸುವ ಮೂಲಕ ಕರವೇ ಸಂಘಟನೆ ಕಾರ್ಯಕರ್ತರು ಮಂಗಳವಾರ ವಿನೂತನವಾಗಿ ಪ್ರತಿಭಟಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ತಹಸೀಲ್ದಾರ್ ಅರುಳ್ಕುಮಾರ್ ಮಾತನಾಡಿ, ರೇಲ್ವೆ ಕೆಳಸೇತುವೆ ನೀರು ನಿಲ್ಲುವುದು ಹಾಗೂ ರಸ್ತೆ ಕಾಮಗಾರಿ ನಡೆಸಲು ಸಂಸದ ಆರ್. ಧ್ರುವನಾರಾಯಣ ಅವರು ರೇಲ್ವೆ ಇಲಾಖೆಯಿಂದ 10 ಲಕ್ಷ ಬಿಡುಗಡೆ ಮಾಡಿಸಿದ್ದಾರೆ. ಶೀಘ್ರದಲ್ಲೆ ಕಾಮಗಾರಿ ನಡೆಸಲಾಗುವುದು. ಸೇತುವೆ ಕೆಳರಸ್ತೆಯಲ್ಲಿ ನಿಂತಿರುವ ನೀರನ್ನು ವಿದ್ಯುತ್ ಚಾಲಿತ ಯಂತ್ರದಿಂದ ಹೊರ ತೆಗೆಯುವ ಕಾರ್ಯ ಇಂದಿನಿಂದಲೆ ಪ್ರಾರಂಭವಾಗುತ್ತದೆ ಹಾಗೂ ಕಾಮಗಾರಿ ಪ್ರಾರಂಭವಾಗುವವರೆಗೂ ಮಳೆ ಬಂದು ನೀರು ನಿಂತರೆ ತೆಗೆಯಲು ಯಂತ್ರವನ್ನು ಉಪಯೋಗಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕರವೇ ಅಧ್ಯಕ್ಷ ಪ್ರವೀಣಕುಮಾರ್ ಮಾತನಾಡಿ, ಸಂಸದ ಆರ್. ಧ್ರುವನಾರಾಯಣ ಅವರು ನೀಡಿದ ಭರವಸೆ ಮೇರೆಗೆ ಪ್ರತಿಭಟನೆ ವಾಪಸ್ ಪಡೆಯುತ್ತಿದ್ದು, 10 ದಿನದಲ್ಲಿ ಕಾಮಗಾರಿ ಪ್ರಾರಂಭ ಮಾಡದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.
ತಾಲೂಕು ಅಧ್ಯಕ್ಷ ಪರಮೇಶ್, ಮುಖಂಡರಾದ ಆರ್. ಭಾಸ್ಕರ್, ಜಯಚಂದ್ರ, ಶ್ರೀನಿವಾಸ ಹರೀಶ್, ಅಶೋಕ್, ಶ್ರೀಕಂಠ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

