ಮೈಸೂರು

ಇಂದು ಪೂರೈಕೆ ವಿದ್ಯುತ್ ವ್ಯತ್ಯಯ

Published On :

ಮೈಸೂರು: ಕುವೆಂಪುನಗರ ಉಪ ವಿಭಾಗದ ಅರವಿಂದ ಘಟಕದ ಫೀಡರ್ ನಿರ್ವಹಣೆ ಕಾರ್ಯ ಇರುವುದರಿಂದ ಅ. 25 ರಂದು ಬೆಳಗ್ಗೆ 10 ರಿಂದ ಸಂಜೆ 5 ರವರೆಗೆ ನಗರದ ಕೆಲ ಬಡಾವಣೆಯಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಶ್ರೀರಾಂಪುರ 2ನೇ ಹಂತ, ಚಿಕ್ಕಹರದನಹಳ್ಳಿ, ಜಯನಗರ, ಕೆ.ಜಿ. ಕೊಪ್ಪಲು, ಸರಸ್ವತಿಪುರಂ ಮಹಿಳಾ ಕಾಲೇಜು, ಹಾಸ್ಟೆಲ್, ಸರಸ್ವತಿಪುರಂ 1, 2 ಮತ್ತು 7ನೇ ಮುಖ್ಯರಸ್ತೆ ಹಾಗೂ ಸರ್ಕಾರಿ ಮುದ್ರಣಾಲಯ ಪ್ರದೇಶದಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎಂದು ಸೆಸ್ಕ್ ಇಇ ತಿಳಿಸಿದ್ದಾರೆ.
ಕಥೆ ಕೇಳೋಣ ಬನ್ನಿ
ಮೈಸೂರು: ಕುವೆಂಪುನಗರದ ಚಿತ್ರಭಾನು ರಸ್ತೆಯ ಕಲಾಸುರುಚಿಯಲ್ಲಿ ಅ.26ರ ಸಂಜೆ 4.30 ರಿಂದ 5.30 ರವರೆಗೆ ಕಥೆ ಕೇಳೋಣ ಬನ್ನಿ ಕಾರ್ಯಕ್ರಮದಲ್ಲಿ ಮಾತೃಮಂಡಲಿ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷೆ ವಿಜಯಲಕ್ಷ್ಮಿ ಅರಸ್ ಅವರು ಮಕ್ಕಳಿಗೆ ಕಥೆ ಹೇಳುವರು. ಅ.27ರ ಬೆಳಗ್ಗೆ 10.30ಕ್ಕೆ ಸಾಹಿತ್ಯ ಚಾವಡಿ-ಸಂವಾದ ಕಾರ್ಯಕ್ರಮ ನಡೆಯಲಿದೆ. ಸ್ತ್ರೀವಾದಿ ನೆಲೆಯಿಂದ ಜನಪದ ಸಾಹಿತ್ಯದ ಗ್ರಹಿಕೆ ವಿಷಯದ ಬಗ್ಗೆ ಮೈಸೂರು ವಿವಿ ಕನ್ನಡ ಅಧ್ಯಯನ ಸಂಸ್ಥೆ ಸಂಶೋಧಕ ಡಾ.ಚಂದ್ರಮತಿ ಸೋಂದಾ ಮಾತನಾಡುವರು. ಮಾಹಿತಿಗಾಗಿ ದೂ. 2541795, ಮೊ. 9243581097 ಸಂಪರ್ಕಿಸಬಹುದು.
ಶಾಸ್ತ್ರೀಯ ಗಾಯನ
ಮೈಸೂರು: ಲಕ್ಷ್ಮೀಪುರಂನ ಶ್ರೀ ನಾದಬ್ರಹ್ಮ ಸಂಗೀತ ಸಭಾ ವತಿಯಿಂದ ಅ.26ರ ಸಂಜೆ 6ಕ್ಕೆ ಜೆಎಲ್‌ಬಿ ರಸ್ತೆಯ ಸಂಗೀತ ಕಲಾನಿಧಿ ಕೆ.ವಾಸುದೇವಾಚಾರ್ಯ ಭವನದಲ್ಲಿ ಸುಧಾರಾಣಿ ಅವರಿಂದ ಕರ್ನಾಟಕ ಶಾಸ್ತ್ರೀಯ ಗಾಯನ ನಡೆಯಲಿದೆ. ಅ.27ರ ಬೆಳಗ್ಗೆ 10ಕ್ಕೆ ವೈಣಿಕ ವೈಭವ- ವೀಣಾ ಕಾರ್ಯಕ್ರಮವನ್ನು ವಿದ್ವಾನ್ ಡಾ.ವಿ.ಎಸ್. ಸಂಪತ್‌ಕುಮಾರಾಚಾರ್ಯ ಉದ್ಘಾಟಿಸುವರು. ವಿದುಷಿ ವಾಣಿ ಯದುನಂದನ್ ಮತ್ತು ವಿದುಷಿ ಮಂಜುಳಾ ಸುರೇಂದ್ರ ಅವರು ದ್ವಂದ್ವ ವೀಣಾವಾದನ ಪ್ರಸ್ತುತಪಡಿಸುವರು. ಸಂಜೆ 5.30ಕ್ಕೆ ವಿದ್ವಾನ್ ಡಿ. ಬಾಲಕೃಷ್ಣ ಅವರಿಗೆ ವೈಣಿಕ ಬ್ರಹ್ಮ ಪ್ರಶಸ್ತಿ ಪ್ರದಾನ ಮಾಡುವರು.
ಚಿತ್ರಕಲಾ ಸ್ಪರ್ಧೆ
ಮೈಸೂರು: ಹ್ಯಾಪಿ ಕಿಡ್ಸ್ ಅಕಾಡೆಮಿಯು ಹೊಟೇಲ್ ಕ್ರಿಸ್ಟಲ್ ಪಾರ್ಕ್ ಸಹಯೋಗದಲ್ಲಿ ಅ.27ರ ಮಧ್ಯಾಹ್ನ 3 ಕ್ಕೆ ಜಗನ್ಮೋಹನ ಅರಮನೆಯಲ್ಲಿ ಚಿತ್ರಕಲಾ ಸ್ಪರ್ಧೆ ಆಯೋಜಿಸಿದೆ. ಆಸಕ್ತರು ತಮ್ಮ ಹೆಸರು ನೋಂದಾಯಿಸಲು ಮತ್ತು ಮಾಹಿತಿಗೆ ಮೊ. 9242049921 9591933889 ಸಂಪರ್ಕಿಸಿರಿ.
ಇಂದು ಕ್ಯಾಂಪಸ್ ಸಂದರ್ಶನ
ಮೈಸೂರು: ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಬೆಂಗಳೂರಿನ ಹೋಂಡ ಕಂಪನಿಯವರು ಇಎಂ, ಫಿಟ್ಟರ್, ಎಲೆಕ್ಟ್ರಿಷಿಯನ್, ವೆಲ್ಡರ್ ವೃತ್ತಿಗಳಿಗೆ ನಡೆದ ಕ್ಯಾಂಪಸ್ ಸಂದರ್ಶನದಲ್ಲಿ 30 ಮಂದಿ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆಯ ಪ್ರಾಂಶುಪಾಲ ಕೆ.ಸಿ. ರವಿಶಂಕರ್ ತಿಳಿಸಿದ್ದಾರೆ. ಹೆಬ್ಬಾಳು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಆವರಣದಲ್ಲಿ ಅ.25 ರಂದು ಬೆಂಗಳೂರಿನ ಐಟಿಸಿ ಕಂಪನಿಯು ಕ್ಯಾಂಪಸ್ ಸಂದರ್ಶನ ನಡೆಸಲಿದೆ. ಆಸಕ್ತ ತರಬೇತಿದಾರರು ಸಂದರ್ಶನದಲ್ಲಿ ಭಾಗವಹಿಸಲು ಪ್ರಾಂಶುಪಾಲರು ಕೋರಿದ್ದಾರೆ.
ಇಂದಿನಿಂದ ಕುರುಬಾರಹಳ್ಳಿಯಲ್ಲಿ ಜಾತ್ರೆ
ಮೈಸೂರು: ಕುರುಬಾರಹಳ್ಳಿಯಲ್ಲಿ ಬನ್ನಿ ಮಹಾಕಾಳೇಶ್ವರಿ ಅಮ್ಮನವರು ಮತ್ತು ಆಯರಹಳ್ಳಿ ಮೂಕಮ್ಮನವರು ಹಾಗೂ ಮಾಲಮ್ಮನವರ ದೇವಸ್ಥಾನದಲ್ಲಿ ಅ.25 ರಿಂದ 27 ರವರೆಗೆ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಲಿದೆ. 25 ರಂದು ವಿಶೇಷ ಪೂಜೆ, 26 ರಂದು ಮಜ್ಜನ ಪೂಜೆ ಹಾಗೂ 27 ರಂದು ಬೆಳಗ್ಗೆ 9 ರಿಂದ ವಾಹನೋತ್ಸವ ನಡೆಯಲಿದ್ದು, ಜಿಲ್ಲೆಯ ವಿವಿಧ ಭಾಗಗಳಿಂದ ಭಕ್ತರು ಭಾಗವಹಿಸುವರು ಎಂದು ಕಾಂಗ್ರೆಸ್ ಯುವ ಮುಖಂಡ ಕುರುಬಾರಹಳ್ಳಿ ಪ್ರಕಾಶ್ ಕೋರಿದ್ದಾರೆ. ಸಂಸದ ಎಚ್.ವಿಶ್ವನಾಥ್, ಶಾಸಕರಾದ ತನ್ವೀರ್‌ಸೇಠ್, ವಾಸು, ಎಂ.ಕೆ. ಸೋಮಶೇಖರ್ ಭಾಗವಹಿಸುವರು.ಮುಖಂಡರಾದ ಮಹದೇವ, ಕ್ಯಾಂಟೀನ್ ನಾಗಣ್ಣ, ಶಂಕರ್, ಟಿ. ಮಂಜನಾಥ್, ಜೆ.ರವಿ, ಶಿವಣ್ಣ ನೇತೃತ್ವದಲ್ಲಿ ಮಹೋತ್ಸವ ಹಮ್ಮಿಕೊಳ್ಳಲಾಗಿದೆ.
ನಾಡಿ ಪರೀಕ್ಷೆ
ಮೈಸೂರು: ದಿ ಆರ್ಟ್ ಆಫ್ ಲೀವಿಂಗ್ ಸಂಸ್ಥೆಯು ಅ.31 ರಂದು ನಂ.2343, ಸಂಪಿಗೆ ರಸ್ತೆ, ಜೆಎಸ್‌ಎಸ್ ಕಾನೂನು ಕಾಲೇಜು ಹಿಂಭಾಗ, ಕುವೆಂಪುನಗರ, ಮೈಸೂರು ಇಲ್ಲಿ ನಾಡಿ ಪರೀಕ್ಷೆ ಏರ್ಪಡಿಸಿದೆ. ಆಸಕ್ತರು ಹೆಚ್ಚಿನ ಮಾಹಿತಿಗೆ 9845963387 ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.