ಮೈಸೂರು

ನಾಳೆ ದೇಗುಲ ಪುನರ್ ಪ್ರತಿಷ್ಠಾಪನೆ

Published On :

ಕ.ಪ್ರ.ವಾರ್ತೆ ಮೈಸೂರು ಅ. 25
ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಹೊಸಗಾವಿಯಲ್ಲಿ ಶ್ರೀ ವಿಘ್ನೇಶ್ವರಸ್ವಾಮಿ ದೇವಸ್ಥಾನದ ಪುನರ್ ಪ್ರತಿಷ್ಠಾಪನ ಸಮಾರಂಭ ಅ.26 ಮತ್ತು 27 ನಡೆಯಲಿದೆ. ಅ.26ರ ಸಂಜೆ 6ಕ್ಕೆ ಗಣಪತಿ ಪ್ರಾರ್ಥನೆ, ಗಂಗಾಪೂಜೆ ತೀರ್ಥ ಸಂಗ್ರಹಣ, ಯಾಗಶಾಲಾ ಪ್ರವೇಶ, ಪ್ರಭಾವಂತನೆ, ಪುಣ್ಯಾಹ, ಮಹಾಸಂಕಲ್ಪ, ಗಣಪತಿ ಹೋಮ, ಮಹಾ ಸುದರ್ಶನ ಹೋಮ, ಕಳಸ ಸ್ಥಾಪನೆ, ಮಹಾಮಂಗಳಾರತಿ, ಪ್ರಸಾದ ವಿನಿಯೋಗವಾಗಲಿದೆ. ಅ.27 ಬೆಳಗ್ಗೆ 6ಕ್ಕೆ ಗಣಪತಿ ಪೂಜೆ, ವೇದಿಕಾರಾಧನೆ, ಕಳಶಾರಾಧನೆ, ಆದಿತ್ಯಾದಿ ನವಗ್ರಹ ಉಕ್ತ ಹೋಮಗಳು, ಸಹಸ್ರಮೋದಕ, ಗಣಪತಿ ಹೋಮ, ಪ್ರಾಣ ಪ್ರತಿಷ್ಠೆ, ನೇತ್ರೋನ್ಮಿಲನ, ತತ್ವನ್ಯಾಸ, ಅಂಗಹೋಮ, ಕಳಾಹೋಮ, ಪೂರ್ಣಾಹುತಿ, ಮಹಾಕುಂಬಾಭಿಷೇಕ, ದೀಪದರ್ಶನ, ಮಹಾಮಂಗಳಾರತಿ ನಡೆಯಲಿದೆ. ಬೆಳಗ್ಗೆ 10.30ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಸಮಾರಂಭ ಉದ್ಘಾಟಿಸುವರು. ನಿವೃತ್ತ ಎಂಜಿನಿಯರ್ ಎಚ್.ಸಿ. ಚನ್ನಯ್ಯ ಅಧ್ಯಕ್ಷತೆ ವಹಿಸುವರು. ಸಂಸದೆ ರಮ್ಯಾ, ಶಾಸಕರಾದ ಎನ್. ಚೆಲುವರಾಯಸ್ವಾಮಿ, ಸಿದ್ದರಾಜು, ಅಶ್ವಥನಾರಾಯಣ, ಬಿ. ರಾಮಕೃಷ್ಣ, ಮಾಜಿ ಶಾಸಕ ಕೆ.ಸುರೇಶ್‌ಗೌಡ, ಜಿಪಂ ಸದಸ್ಯ ಡಿ. ಶಿವಲಿಂಗಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಯೋಗ ಕಾರ್ಯಕ್ರಮ ಮುಂದುವರಿಕೆ
ಕ.ಪ್ರ.ವಾರ್ತೆ ಮೈಸೂರು ಅ. 25

ಯೋಗ ದಸರಾ ಮಹೋತ್ಸವದಲ್ಲಿ ಹಮ್ಮಿಕೊಂಡಿದ್ದ ವಿಶಿಷ್ಟ ಕಾರ್ಯಕ್ರಮಗಳಿಗೆ ಉತ್ತಮ ಪ್ರತಿಕ್ರಿಯೆ ಸಿಕ್ಕ ಹಿನ್ನೆಲೆಯಲ್ಲಿ ಅವುಗಳಲ್ಲಿ ಮುಖ್ಯವಾದ ಯೋಗ ಪರಿವರ್ತನಾ ಹಾಗೂ ಯೋಗ ಚೇತನ ಮತ್ತು ಯೋಗ ಪ್ರೇರೇಪಣಾ ಕಾರ್ಯಕ್ರಮವನ್ನು ಮುಂದುವರಿಸಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಡಾ. ನಾಗೇಶ್ ಹೇಳಿದರು. ಯೋಗ ಪರಿವರ್ತನಾ ಕಾರ್ಯಕ್ರಮವನ್ನು ಪುರುಷರು ಮತ್ತು ಮಹಿಳಾ ಕೈದಿಗಳಿಗೆ ಯೋಗಾಭ್ಯಾಸ ಮುಂದವರಿಸಲಾಗುವುದು. ಯೋಗ ಚೇತನಾ ಕಾರ್ಯಕ್ರಮವನ್ನು ಬುದ್ಧಿಮಾಂದ್ಯ ಮಕ್ಕಳಿಗೆ, ಕಿವುಡ ಮಕ್ಕಳಿಗಾಗಿ ಆಯೋಜಿಸಲಾಗುವುದು. ಈ ಹಿಂದೆ ನಡೆಸಿದ ಯೋಗ ನೃತ್ಯ ರೂಪಕ, ಯೋಗ ವನಿತೆ, ಪ್ರಾಣಿಕ್ ಹೀಲಿಂಗ್, ಯೋಗ ರಸಧಾರೆ, ಗುರುಯೋಗ, ಸೇವಾ ಯೋಗ, ಯೋಗ ವಾಹಿನಿ, ಆನಂದಯೋಗ, ಆಶಾ ಯೋಗ ಕಾರ್ಯಕ್ರಮಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು ಎಂದು ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಯೋಗ ದಸರಾ ಉಪಸಮಿತಿ ಅಧ್ಯಕ್ಷ ಎಲ್. ಭಾಸ್ಕರ್, ಕಾರ್ಯಾಧ್ಯಕ್ಷೆ ಡಾ. ಲತಾ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.