ಪರಿಸರ ಕುರಿತು ಆದಿವಾಸಿ ಮಕ್ಕಳಿಗೆ ಕಾರ್ಯಾಗಾರ
ಕ.ಪ್ರ.ವಾರ್ತೆ , ಎಚ್.ಡಿ. ಕೋಟೆ , ಅ. 27
ತಾಲೂಕು ಆದಿವಾಸಿ ಗ್ರಾಮಸಭಾ ವೇದಿಕೆ ಹಾಗೂ ನಿಸರ್ಗ ಫೌಂಡೇಷನ್ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಗುರುಭವನದಲ್ಲಿ ಆದಿವಾಸಿ ಮಕ್ಕಳಿಗೆ ಪರಿಸರ ಕುರಿತು ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಾಗಾರ ಉದ್ಘಾಟಿಸಿದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಎಂ.ವಿ. ಜಯರಾಂ ಮಾತನಾಡಿ, ಆದಿವಾಸಿ ಮಹಿಳೆ ಮತ್ತು ಮಕ್ಕಳಲ್ಲಿ ಅಪೌಷ್ಟಿಕತೆ ನಿವಾರಣೆಯಾಗಬೇಕು. ಸರ್ಕಾರ ನೀಡುವ ಕಬ್ಬಿಣಾಂಶದ ಮಾತ್ರೆಗಳನ್ನು ಮಕ್ಕಳು ಮತ್ತು ಗರ್ಭಿಣಿಯರು ಉಪಯೋಗಿಸಿಕೊಳ್ಳಬೇಕು. ಮಕ್ಕಳ ಹಕ್ಕುಗಳು ಉಲ್ಲಂಘನೆ ಆಗದಂತೆ ಪೋಷಕರು ನಿಗಾವಹಿಸಬೇಕು. ಒಂದು ವೇಳೆ ಉಲ್ಲಂಘನೆ ಆದಲ್ಲಿ ನಮ್ಮ ಇಲಾಖೆಯ ಗಮನಕ್ಕೆ ತರುವಂತೆ ಮನವಿ ಮಾಡಿದರು.
ಶಿಕ್ಷಣಾಧಿಕಾರಿ ಎಂ. ಉದಯ ಕುಮಾರ್ ಮಾತನಾಡಿ, ಆದಿವಾಸಿಗಳು ವಾಸ ಮಾಡುವ ಸ್ಥಳದಲ್ಲೇ ಶಾಲೆಗಳನ್ನು ತೆರೆದು ಕಡ್ಡಾಯ ಶಿಕ್ಷಣ ಹಾಗೂ ಶಿಕ್ಷಣದ ಹಕ್ಕು ಎಲ್ಲಾ ಮಕ್ಕಳಿಗೂ ಸಿಗುವಂತಾಗಬೇಕು. ವಿಶೇಷವಾಗಿ ಆದಿವಾಸಿ ಮಕ್ಕಳನ್ನು ಶಾಲೆಗೆ ತರುವಲ್ಲಿ ಸಂಘ- ಸಂಸ್ಥೆಗಳ ಸಹಕಾರ ಅತ್ಯಗತ್ಯ ಎಂದರು.
ನಿಸರ್ಗ ಫೌಂಡೇಷನ್ ನಿರ್ದೇಶಕ ನಂಜುಂಡಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ, ಆದಿವಾಸಿಗಳು ಪ್ರಕೃತಿ ಮಧ್ಯೆ ಗಿಡ- ಮರ, ಪ್ರಾಣಿ- ಪಕ್ಷಿ ಸಕಲ ಜೀವಿ ರಾಶಿಗಳ ನಡುವೆ ಅನ್ಯೋನ್ಯವಾಗಿ ಶತಮಾನಗಳಿಂದ ಜೀವಿಸಿಕೊಂಡು ಬಂದವರು. ಇಂದು ಇವರ ಮಕ್ಕಳಿಗೆ ಅಂತಹ ಪರಿಸರ ಇಲ್ಲದೇ ಇರುವುದು ವಿಷಾದನೀಯ. ಆಭಿವೃದ್ಧಿ ಹೆಸರಿನಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು, ಅಣೆಕಟ್ಟುಗಳನ್ನು ಸಂರಕ್ಷಣೆ ಹಾಗೂ ಸಂಶೋಧನೆ ಹೆಸರಿನಲ್ಲಿ ಅರಣ್ಯ ವನ್ಯಜೀವಿಗಳು ಪಕ್ಷಿ ಸಂಕುಲ ನಾಶವಾಗಿದ್ದು ಪ್ರಕೃತಿ ಅಸಮತೋಲನಕ್ಕೆ ಕಾರಣವಾಗಿದೆ ಎಂದು ವಿಷಾದಿಸಿದರು.
ತಾಲೂಕು ಆದಿವಾಸಿ ಗ್ರಾಮ ಸಭಾ ವೇದಿಕೆ ಸಂಚಾಲಕಿ ದೇವಮ್ಮ ಅಧ್ಯಕ್ಷತೆ ವಹಿಸಿದ್ದರು. ಡೀಡ್ ಸಂಸ್ಥೆಯ ನಿರ್ದೇಶಕ ಶ್ರೀಕಾಂತ್, ಒಡನಾಡಿ ಸೇವಾ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ, ಪರಶು, ಒಡಿಪಿ ಸಂಸ್ಥೆಯ ಮಕ್ಕಳ ಸಹಾಯವಾಣಿ ಜಿಲ್ಲಾ ಸಂಯೋಜಕ ಧನರಾಜ್ ಇದ್ದರು. ರಾಘವೇಂದ್ರ ನಿರೂಪಿಸಿದರು. ಮಹದೇವೇಗೌಡ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

