ಗ್ರಾಮಗಳ ಉದ್ಧಾರದಿಂದ ದೇಶದ ಅಭಿವೃದ್ಧಿ
ಹನೂರು: ಕೃಷಿ ಪ್ರಧಾನ ರಾಷ್ಟ್ರವಾದ ಭಾರತದಲ್ಲಿ ಗ್ರಾಮಗಳ ಉದ್ಧಾರವಾದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಹನೂರು ವೃತ್ತ ನಿರೀಕ್ಷಕ ಸಿ. ಕಿರಣ್ಕುಮಾರ್ ಅವರು ತಿಳಿಸಿದರು.
ಪಟ್ಟಣದ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಒಕ್ಕೂಟ ಕಾರ್ಯಕ್ರಮವನು ಉದ್ಘಾಟಿಸಿ ಮಾತನಾಡಿದ ಅವರು, ಮಹಿಳಾ ಸ್ವ ಸಹಾಯ ಸಂಘಗಳು ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮಹಿಳೆಯರು ಆರ್ಥಿಕವಾಗಿ ಸದೃಢರಾಗಿದ್ದು ಸ್ವಾವಲಂಬಿಗಳಾಗುತ್ತಿದ್ದಾರೆ ಎಂದರು.
ಹಿಂದಿನಂತೆ ಮಹಿಳೆಯರು ಪತಿ ಮತ್ತು ಇನಿತರ ಕುಟುಂಬದ ಸದಸ್ಯರನು ಅವಲಂಬಿಸುವಂತಿಲ್ಲ. ಇಂದು ಮಹಿಳೆಯರು ಹೆಚ್ಚಿನ ಪ್ರಮಾಣದಲ್ಲಿ ಹಣ ಉಳಿತಾಯ ಮಾಡುತ್ತಿರುವುದರಿಂದ ಗ್ರಾಮಗಳ ಅಭಿವೃದ್ಧಿಯಾಗುತ್ತಿದೆ ಎಂದರು.
ವಿದ್ಯಾಭ್ಯಾಸ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹನೂರು ಹೆಚ್ಚುವರಿ ತಹಸೀಲ್ದಾರ್ ನಂಜುಂಡಯ್ಯ ಅವರು ಸಮಾಜದ ಹಿತಾಸಕ್ತಿಗಾಗಿ ದುಡಿಯುವ ಸ್ತ್ರೀಶಕ್ತಿ ಸ್ವ -ಸಹಾಯ ಸಂಘಗಳು ಸಮಾಜಮುಖಿಯಾಗಿ ಕೆಲಸ ನಿರ್ವಹಿಸುತ್ತಿವೆ. ಕೆಲವು ಸಂಘ ಸಂಸ್ಥೆಗಳು ಸ್ವಂತ ಹಿತಾಸಕ್ತಿ ಈಡೇರಿದ ಮೇಲೆ ಮರೆಯಾಗುತ್ತಿವೆ. ಆದರೆ ಶ್ರೀ ಧರ್ಮಸ್ಥಳ ಸ್ತ್ರೀಶಕ್ತಿ ಸಂಘ ಗ್ರಾಮ ಸೌಕರ್ಯಗಳ ಬಗ್ಗೆ, ವಿದ್ಯಾಭ್ಯಾಸದ ಬಗ್ಗೆ ಮತ್ತು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಸಂತೋಷದಾಯಕ ಎಂದರು.
ಸಂಘ ಸಂಸ್ಥೆಗಳು ನಿಗದಿತ ಗುರಿಯೊಂದಿಗೆ ಯೋಜನಾಬದ್ಧವಾಗಿ, ಶಿಸ್ತು, ಒಗ್ಗಟ್ಟುಗಳಿಂದ ಲೋಪದೋಷಗಳಿಲ್ಲದೆ ನಡೆಯಬೇಕು. ಮಹಿಳೆಯರು ಇಂತಹ ಸವಲತ್ತುಗಳನು ಬಳಸಿಕೊಂಡು ಸದುಪಯೋಗಪಡಿಸಿಕೊಂಡು ಸ್ವಾವಲಂಬಿಯಾಗಬೇಕು. ಕಾಡಂಚಿನ ಗ್ರಾಮಗಳಲ್ಲಿ, ಸೋಲಿಗರ ಪೊಡುಗಳಲ್ಲಿ ಕಾರ್ಯಕ್ರಮಗಳನು ರೂಪಿಸಿ, ಸಂಘಗಳ ಬಗ್ಗೆ ಜಾಗೃತಿ ಮೂಡಿಸಬೇಕು ಎಂದು ತಿಳಿಸಿದರು.
ಮಾಸಾಶನ:ರಾಜ್ಯ ಸರ್ಕಾರವು ನೂತನವಾಗಿ 40 ವರ್ಷ ಮೇಲ್ಪಟ್ಟ ಅವಿವಾಹಿತ ಮಹಿಳೆಯರಿಗೆ ಮನಸ್ವಿನಿ ಮತ್ತು ಮಂಗಳಮುಖಿಯರಿಗೆ ಮೈತ್ರಿ ಯೋಜನೆಯನು ಜಾರಿಗೆ ತಂದಿದ್ದು, ಈ ಯೋಜನೆಗಳಿಂದ ಮಾಸಿಕ ರು. 500 ಮಾಸಾಶನ ದೊರೆಯಲಿದ್ದು, ಫಲಾನುಭವಿಗಳು ಇದನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಕೊಳ್ಳೇಗಾಲ ಯೋಜನಾಧಿಕಾರಿ ಮಾಧವನಗೌಡ ಮಾತನಾಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘವು ಜಾತಿಭೇಧ, ಪಕ್ಷ ಭೇಧಮರೆತು ಎಲ್ಲರನೂ ಒಗ್ಗೂಡಿಸುತ್ತಿದೆ. ಸದಸ್ಯರುಗಳು ಸದುದ್ದೇಶಕ್ಕೆ ಸಾಲಗಳನು ಪಡೆದು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ಮಹಿಳೆಯರಿಗೆ ಎಲ್ಐಸಿಯ ನೂತನ ಜೀವನ ಮಧುರಾ ವಿಮೆ ಬಾಂಡ್ಗಳನು ವಿತರಿಸಲಾಯಿತು. ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕೊಳ್ಳೇಗಾಲ ತಾ.ಪಂ ಸದಸ್ಯ ಮುರುಳಿ, ಪ.ಪಂ ಸದಸ್ಯರುಗಳಾದ ಬಾಲರಾಜ್ ನಾಯ್ಡು, ಕುಮಾರ್, ಮಮತಾ, ಮಹಾದೇವಮ್ಮ, ಕ್ಲಸ್ಟರ್ ಅಧಿಕಾರಿ ಸಿದ್ದಯ್ಯ, ಹಾಗೂ ಹನೂರು, ಮಣಗಳ್ಳಿ, ಕಾಂಚಳ್ಳಿ, ಅಜ್ಜೀಪುರ ಗ್ರಾಮಗಳ ಸ್ವ ಸಹಾಯ ಸಂಘದ ಸದಸ್ಯರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

