ಮೈಸೂರು

ಯುವತಿ, ಯುವಕ ನಾಪತ್ತೆ

Published On :

ಮೈಸೂರು: ಪ್ರತ್ಯೇಕ ಪ್ರಕರಣಗಳಲ್ಲಿ ಯುವತಿ ಮತ್ತು ಯುವಕ ನಾಪತ್ತೆಯಾಗಿದ್ದಾರೆ.ಮೈಸೂರು ತಾಲೂಕು ಬೊಮ್ಮೇನಹಳ್ಳಿ ನಿವಾಸಿ ಬಿ.ಎಸ್. ಬಲವರಾಜು ಎಂಬವರ ಪುತ್ರಿ ಬಿ. ಶಿಲ್ಪಾ(18) ಬುಧವಾರ ಇಲವಾಲದಲ್ಲಿರುವ ಅಜ್ಜಿ ಮನೆಗೆ ಹೋದವರು ನಾಪತ್ತೆಯಾಗಿದ್ದಾರೆ. ಚಹರೆ- 5.6 ಅಡಿ ಎತ್ತರ, ಎಣ್ಣೆಗೆಂಪು ಮೈಬಣ್ಣ, ದೃಢಕಾಯ ಶರೀರ, ಕನ್ನಡ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ಸಿಕ್ಕಲ್ಲಿ ದೂ. 0821- 2402222 ಸಂಪರ್ಕಿಸಲು ಇಲವಾಲ ಠಾಣೆ ಪೊಲೀಸರು ಕೋರಿದ್ದಾರೆ. ಮೈಸೂರಿನ ಜೆಎಲ್ಬಿ ರಸ್ತೆಯಲ್ಲಿರುವ ಸಾಹುಕಾರ್ ಕಬ್ಬಳ್ಳಿ ಹಾಸ್ಟೆಲ್ನಲ್ಲಿದ್ದ ಕೆ.ಬಿ. ಮಹದೇವಸ್ವಾಮಿ(19) ಭಾನುವಾರ ಪೊಲೀಸ್ ಭವನದಲ್ಲಿ ಸಂಬಂಧಿಕರ ಮದುವೆಗೆ ಹೋದವರು ನಾಪತ್ತೆಯಾಗಿದ್ದಾರೆ. ಮಾಹಿತಿ ಸಿಕ್ಕಲ್ಲಿ ದೂ. 0821- 2418306 ಸಂಪರ್ಕಿಸಬಹುದು.


ನಿರ್ಗತಿಕ ವೃದ್ಧ ಸಾವು

ಮೈಸೂರು: ನಗರ ಪಾಲಿಕೆ ಮತ್ತು ವೀಕೇರ್ ಸಂಸ್ಥೆ ನಡೆಸುತ್ತಿರುವ ರಾತ್ರಿ ವಸತಿ ರಹಿತ ನಿರ್ಗತಿಕ ಪುರುಷರ ಕೇಂದ್ರದಲ್ಲಿದ್ದ ಚೆಲುವಣ್ಣ ಎಂಬವರ ಪುತ್ರ ದೇವರಾಜು(75) ಎಂಬವರು ಅನಾರೋಗ್ಯದಿಂದ ಕೆ.ಆರ್. ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ರೈಲು ನಿಲ್ದಾಣದ ಬಳಿ ಸಿಕ್ಕ ಇವರನ್ನು ಕೇಂದ್ರದಲ್ಲಿ ಇರಿಸಲಾಗಿತ್ತು. ಮೃತರ ವಾರಸುದಾರರು ಇದ್ದಲ್ಲಿ ದೂ. 0821- 2418313 ಸಂಪರ್ಕಿಸಲು ಮಂಡಿ ಠಾಣೆ ಪೊಲೀಸರು ಕೋರಿದ್ದಾರೆ.


ಚಿನ್ನಾಭರಣ ಕಳವು
ಮೈಸೂರು: ಮೊಮ್ಮಗಳ ಮದುವೆಗಾಗಿ ಖರಿಸಿ ಮನೆಯಲ್ಲಿ ಇರಿಸಲಾಗಿದ್ದ 3 ಲಕ್ಷ ಮೌಲ್ಯದ ಚಿನ್ನಾಭರಣ ಕಳವಾಗಿರುವ ಘಟನೆ ಎನ್.ಆರ್. ಮೊಹಲ್ಲಾದಲ್ಲಿ ಸೋಮವಾರ ಬೆಳಗಿನ ಜಾವ ನಡೆದಿದೆ. ಎನ್.ಆರ್. ಮೊಹಲ್ಲಾ 6ನೇ ಅಡ್ಡರಸ್ತೆ ನಿವಾಸಿ ಸೈಯದ್ ಪಾಷ ಎಂಬವರ ಮನೆಯಲ್ಲಿದ್ದ 85 ಗ್ರಾಂ. ತೂಕದ ಚಿನ್ನಾಭರಣ ಕಳವಾಗಿದೆ. ಮೊಮ್ಮಗಳ ಮದುವೆಯನ್ನು ತಾವೇ ಮುಂದೆ ನಿಂತು ಮಾಡಲು ಸಿದ್ಧತೆ ನಡೆಸಿದ್ದರು. ಸೋಮವಾರ ಉದಯಗಿರಿಯ ಸಾಬಾ ಪ್ಲಾಜಾದಲ್ಲಿ ಮೊಮ್ಮಗಳ ವಿವಾಹ ನಿಗದಿಯಾಗಿತ್ತು. ಮನೆಯವರೆಲ್ಲರು ಭಾನುವಾರ ರಾತ್ರಿಯೇ ಛತ್ರಕ್ಕೆ ಬಂದಿದ್ದು, ಬೆಳಗಿನ ಜಾವ ವಾಪಸ್ ಬಂದಾಗ ಮನೆಯ ಹಿಂಬಾಗಿಲು ಮುರಿದು ಬೀರುವಿನಲ್ಲಿದ್ದ ಕಳವು ಮಾಡಿರುವುದು ಗೊತ್ತಾಗಿದೆ. ಎನ್.ಆರ್. ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.