ಮೈಸೂರು

ವೀರೇಂದ್ರ ಹೆಗ್ಗಡೆ ಸೇವೆ ಅನುಕರಣೀಯ: ಶಾಸಕ

Published On :

ಕ.ಪ್ರ.ವಾರ್ತೆ   ಸಾಲಿಗ್ರಾಮ್ಣ ಸೆ. 2
ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸಮಾಜಮುಖಿ ಕಾರ್ಯ ಮಾತ್ರ ಎಲ್ಲರಿಗೂ ಆದರ್ಶವಾಗಿದೆ ಎಂದು ಶಾಸಕ ಸಾ.ರಾ. ಮಹೇಶ್ ಹೇಳಿದರು.
ಗ್ರಾಮದ ಜೈನ ಸಮುದಾಯದ ಶಾಂತಿ ನಿವಾಸದ ಉದ್ಘಾಟನೆ ಮಾಡಿದ ನಂತರ ಬಾಹುಬಲಿ ಭವನದಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ಮಾತನಾಡಿದರು.
ಕೆ.ಆರ್. ನಗರ ತಾಲೂಕಿನ ಕೆಲವು ಗ್ರಾಮಗಳಲ್ಲಿ ಪುರಾತನ ದೇವಾಲಯಗಳು ಬೀಳುವ ಸ್ಥಿತಿಗೆ ಬಂದಿರುವುದನ್ನು ತಿಳಿದ ಇವರು, ಧರ್ಮಸ್ಥಳದ ಸಮಿತಿಯ ವತಿಯಿಂದ ಕೋಟ್ಯಂತರ ರುಪಾಯಿ ಖರ್ಚು ಮಾಡಿ, ಜೀರ್ಣೋದ್ಧಾರ ಕಾಮಗಾರಿ ಮಾಡಿಸುವುದಾಗಿ ತಿಳಿಸಿದಾಗ ನಾನೂ ಸಹಾಯ ಮಾಡಲು ಮುಂದಾಗಿದ್ದೇನೆ. ನನಗೆ ಇದು ಸಾಗರ ಮುನಿಶ್ರೀಯವರ ಆದೇಶವಾಗಿದೆ ಎಂದು ತಿಳಿಸಿದರು.
ಕನಕಗಿರಿ ಕ್ಷೇತ್ರದ ಭುವನಕೀರ್ತಿ ಭಟ್ಟಾರಕ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಧರ್ಮಸ್ಥಳದ ಡಾ. ಹರ್ಷೇಂದ್ರಕುಮಾರ್, ಜಿಪಂ ಸದಸ್ಯೆ ಸುಮಿತ್ರ ಗೋವಿಂದರಾಜು, ಗ್ರಾಪಂ ಅಧ್ಯಕ್ಷೆ ರಾಣಿರಾಜಣ್ಣ, ಮಹಿಳಾ ಸಂಘದ ಅಧ್ಯಕ್ಷೆ ಜಯಪದ್ಮಮ್ಮ, ಉಷಾಸುರೇಶ್, ಗುಣಪಾಲ್ ಜೈನ್, ಎಸ್.ಡಿ. ಪಾರ್ಶ್ವನಾಥ್ ಜೈನ್, ನೇಮಿಚಂದ್ರ, ಪ್ರೇಮ್ಕುಮಾರ್ ಜೈನ್, ಸುನಿಲ್, ಸಂಜಯ್ಕುಮಾರ್, ಗೀತಾ ಗುಣಪಾಲ್, ಅಮರ್ಜಿತ್, ರಾಜಣ್ಣ, ರಾಜೇಂದ್ರ ಪ್ರಸಾದ್, ಶಿಲ್ಪ ಸಂತೋಷ್, ಎಸ್.ವಿ. ಹೇಮಂತ್ ಜೈನ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.