ಮೈಸೂರು

ವೈದ್ಯ, ನರ್ಸ್, ಅಡುಗೆ ಸಹಾಯಕ ಲೋಕಾ ಬಲೆಗೆ

Published On :

ಕಡೂರು:  ಸಹಜ ಹೆರಿಗೆ ಆಗಿದ್ದರೂ ಸಹ ಆಕೆಯ ಪತಿಯಿಂದ ಲಂಚ ಪಡೆದ  ವೈದ್ಯ, ನರ್ಸ್ ಹಾಗು ಅಡುಗೆಯವನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ ಘಟನೆ ಪಟ್ಟಣದಲ್ಲಿ ಮಂಗಳವಾರ ನಡೆದಿದೆ.
ವಿಶ್ವನಾಥ್ ಎಂಬುವರ ಪತ್ನಿಯನ್ನು ಕಡೂರು ಸಾರ್ವಜನಿಕ ಆಸ್ಪತ್ರೆಗೆ ಹೆರಿಗೆಗಾಗಿ ದಾಖಲು ಮಾಡಲಾಗಿತ್ತು. ಶನಿವಾರ ರಾತ್ರಿ ಆಕೆಗೆ ಸಹಜ ಹೆರಿಗೆಯಾಗಿತ್ತು. ಆದರೆ ಈ ಸಂದರ್ಬದಲ್ಲಿ ನರ್ಸ್ ಭಾರತಿ ಭಾರತಿ ಎಂಬುವರು ವೈದ್ಯರ ಶುಲ್ಕ ನೀಡದೇ ಇದ್ದಲ್ಲಿ ಆಸ್ಪತ್ರೆಯಿಂದ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದರೆನ್ನಲಾಗಿದೆ.
ಲಂಚ ಸ್ವೀಕಾರ: ಈ ಬಗ್ಗೆ ವಿಶ್ವನಾಥ್ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಬಲೆ ಬೀಸಿದ್ದರು. ವಿಶ್ವನಾಥ್ ಡಾ.ಜಗದೀಗೆ 600ರು. ಲಂಚ ನೀಡಲು ಹೋದಾಗ ಅವರು ಅಡುಗೆಯವರಾದ ಚಂದ್ರಪ್ಪನವರ ಬಳಿ ಕೊಡಿ ಎಂದು ಹೇಳಿದರು. ಅದರಂತೆ ವಿಶ್ವನಾಥ್ ನೀಡಿದ ಹಣವನ್ನು ಚಂದ್ರಪ್ಪ ಸ್ವೀಕರಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.