ಮೈಸೂರು

'ಹಳ್ಳಿಗರ ಉನ್ನತ ಶಿಕ್ಷಣಕ್ಕೆ ಮಠಗಳು ಕಾರಣ'

Published On :

ಕ.ಪ್ರ.ವಾರ್ತೆ   ಕೆ.ಆರ್. ನಗರ   ಸೆ. 4
ಮಠಗಳು ಜಾತಿ ಭೇದ ಮಾಡದೆ ಸರ್ವರನ್ನು ಸಮನಾಗಿ ಕಂಡು ಅಕ್ಷರ ದಾಸೋಹ ಮತ್ತು ಅನ್ನದಾಸೋಹದ ಕಾಯಕ ಮಾಡುತ್ತಿರುವುದರಿಂದ, ಹಳ್ಳಿಯ ಬಡವರು ಉನ್ನತ ಮತ್ತು ಉತ್ತಮ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿದೆ ಎಂದು ತಾಪಂ ಮಾಜಿ ಉಪಾಧ್ಯಕ್ಷ ಹಾಡ್ಯ ಮಹದೇವಸ್ವಾಮಿ ಹೇಳಿದರು.
ತಾಲೂಕಿನ ಹಾಡ್ಯ ಗ್ರಾಮದ ಜೆಎಸ್ಎಸ್ ಪ್ರೌಢಶಾಲೆಯಲ್ಲಿ ನಡೆದ ಸುತ್ತೂರು ಶಿವರಾತ್ರಿ ರಾಜೇಂದ್ರ ಸ್ವಾಮೀಗಳ 97ನೇ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾವಂದೂರು ಮುರುಘಾಮಠದ ಮೋಕ್ಷಪತಿ ಶ್ರೀಗಳ ಸಮ್ಮಖದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೈಸೂರಿನ ಕದಳಿ ಮಹಿಳಾ ವೇದಿಕೆಯ ಅಧ್ಯಕ್ಷೆ ಲೀಲಾವತಿ ಉಪನ್ಯಾಸ ನೀಡಿದರು. ಹಂಪಾಪುರ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕಿ ಸಿ.ಇ. ತ್ರಿವೇಣಿ ವಿದ್ಯಾರ್ಥಿಗಳು ಹೊರತಂದಿರುವ ಪ್ರಣತಿ ಎಂಬ ಸಾಂದರ್ಭಿಕ ವಾರ್ಷಿಕ ಪತ್ರಿಕೆಯನ್ನು ಬಿಡುಗಡೆ ಮಾಡಿದರು.
ಮುಖ್ಯ ಶಿಕ್ಷಕ ಎ.ಸಿ. ಜಗದೀಶ್, ಶ್ರೀರಾಮ ಸಹಕಾರ ಸಕ್ಕರೆ ಕಾರ್ಖಾನೆ ಮಾಜಿ ಉಪಾಧ್ಯಕ್ಷ ಹಾಡ್ಯ ಕುಮಾರ್, ಪಿಎಲ್ಡಿ ಬ್ಯಾಂಕ್ ನಿರ್ದೇಶಕ  ಪ್ರಸಾದ್, ಗ್ರಾಮದ ಮುಖಂಡರಾದ ಶಿವಣ್ಣ, ಸೋಮಶೇಖರಯ್ಯ, ಶಿಕ್ಷಕರಾದ ಜಿ.ಎಂ. ಶಿವಪ್ರಸಾದ್, ಬಿ.ಎನ್. ಪ್ರಕಾಶ್, ಚಂದ್ರಶೇಖರ್, ಸಿದ್ದಲಿಂಗಪ್ಪ, ಸಿ.ಎಂ. ರವೀಶ್ಕುಮಾರ್, ಬಸವರಾಜಸ್ವಾಮಿ, ಎಸ್. ನೀಲಕಂಠ, ಎಸ್.ಪಿ. ಸುನಿಲ್, ಬಿ. ಜೀವನ್ಕುಮಾರ್, ಎಚ್.ಬಿ. ಕುಮಾರಾಚಾರ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.