ಮೈಸೂರು

ತತ್ವಶಾಸ್ತ್ರ ಮಹತ್ವ ಸಾರಿದ ಶಿಕ್ಷಕ ರಾಧಾಕೃಷ್ಣನ್

Published On :

ಮೈಸೂರು: ಜಗತ್ತಿಗೆ ತತ್ವಶಾಸ್ತ್ರದ ಮಹತ್ವ ಸಾರಿದ ತತ್ವಜ್ಞಾನಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಎಂದು ಮಾನಸಗಂಗೋತ್ರಿಯ ತತ್ವಶಾಸ್ತ್ರ ವಿಭಾಗದ ನಿವೃತ್ತ ಪ್ರಾಧ್ಯಾಪಕ ವಿ.ಎನ್. ಶೇಷಗಿರಿ ರಾವ್ ಹೇಳಿದರು.
ಮಹಾರಾಜ ಕಾಲೇಜಿನ ಅಧ್ಯಾಪಕರ ಸಂಘವು ಜೂನಿಯರ್ ಬಿ.ಎ ಹಾಲ್‌ನಲ್ಲಿ ಗುರುವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ನೀಡಿದರು. ವಿಶ್ವವಿಖ್ಯಾತ ತತ್ವಜ್ಞಾನಿ ಪ್ಲೇಟೋ ಆಶಿಸಿದಂತೆ ತತ್ವಜ್ಞಾನಿಯೊಬ್ಬರು ಆಡಳಿತ ಸೂತ್ರ ಹಿಡಿಯಬೇಕೆಂಬ ಮಾತನ್ನು ಭಾರತದ ರಾಷ್ಟ್ರಪತಿಯಾಗಿ ಡಾ.ರಾಧಾಕೃಷ್ಣನ್ ನಿಜವಾಗಿಸಿದ್ದಾರೆ. ಉನ್ನತ ಪದವಿಗಳನ್ನು ಪಡೆಯಲು ಬಡತನ ಕಾರಣವಾಗಲಾರದು. ಅದನ್ನು ಸಾಧಿಸುವ ಛಲವಿರಬೇಕು ಎಂಬುವ ಅವರ ಬದುಕು ಯುವಪೀಳಿಗೆಗೆ ಆದರ್ಶನೀಯ ಎಂದರು. ತತ್ವಶಾಸ್ತ್ರ ಎಲ್ಲಾ ಮೂಲಭೂತ ವಿಷಯಗಳನ್ನು ತಿಳಿಸುವ ನಿಘಂಟಾಗಿದೆ. ಅದು ಎಲ್ಲಾ ವಿಷಯಗಳಿಗೂ ತಾಯಿ ಬೇರು. ಇಂದಿನ ಪೀಳಿಗೆಯೂ ಕ್ಷಣಿಕವಾದದ್ದನ್ನು ಹುಡುಕುವಲ್ಲಿ ಶಾಂತಿ ಕಳೆದುಕೊಳ್ಳುತ್ತಿದೆ. ಇದೊಂದು ಸಾಮಾಜಿಕ ಪಿಡುಗಾಗಿದ್ದು, ಇದನ್ನು ನಿವಾರಿಸುವಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುವಲ್ಲಿ ಮುಂದಾಗಬೇಕು ಎಂದರು. ಪಾಶ್ಚಾತ್ಯ ತತ್ವಶಾಸ್ತ್ರ ಕೇವಲ ಬಾಹ್ಯ ವಿಷಯಗಳಿಗೆ ಸಂಬಂಧಿಸಿದ್ದಾಗಿದೆ. ಅದು ಮನಸ್ಸನ್ನು ಮುಟ್ಟುವಲ್ಲಿ ವಿಫಲವಾಗಿದೆ. ಆದರೆ ಭಾರತೀಯ ತತ್ವಶಾಸ್ತ್ರವು ವಿಷಯಗಳ ಆತ್ಮವಾಗಿದೆ. ಆದ್ದರಿಂದ ಪಾಶ್ಚಾತ್ಯ ಸಂಸ್ಕೃತಿಗಳು ಭಾರತೀಯ ಸಂಸ್ಕೃತಿಯತ್ತ ಮುಖ ಮಾಡಿವೆ. ದೇಶೀಯ ಸಂಸ್ಕೃತಿಯನ್ನು ವಿದ್ಯಾರ್ಥಿಗಳಿಗೆ ಕಲಿಸುವ ಕೆಲಸ ಹೆಚ್ಚಾಗಿ ನಡೆಯಬೇಕು ಎಂದು ಆಶಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.