ಉದ್ಯೋಗಕ್ಕೆ ಸಂವಹನ ಕೌಶಲ್ಯ ಅಗತ್ಯ: ಸುಧಾಕರ ಶೆಟ್ಟಿ
ಕ.ಪ್ರ.ವಾರ್ತೆ ಮೈಸೂರು ಸೆ. 7
ಸಂವಹನ ಕೌಶಲ್ಯ ಇದ್ದರೆ ಮಾತ್ರ ಉದ್ಯೋಗ ದೊರಕಲು ಸಾಧ್ಯ ಎಂದು ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಸುಧಾಕರ ಎಸ್. ಶೆಟ್ಟಿ ಹೇಳಿದರು. ಮಾನಸ ಗಂಗೋತ್ರಿಯ ಸಾಮರ್ಥ್ಯಾಭಿವೃದ್ಧಿ ಮತ್ತು ಉದ್ಯೋಗಾವಕಾಶಗಳ ಸೇವಾ ಕೇಂದ್ರ ಶನಿವಾರ ಏರ್ಪಡಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು. ಪತ್ರಿಕೋದ್ಯಮಕ್ಕೆ ಸೇರಿದ ಹಲವು ಮಂದಿ ಹುದ್ದೆಯಿಂದ ವಿಮುಖರಾಗಲು ಯತ್ನಿಸುತ್ತಾರೆ. ಆ ಕ್ಷೇತ್ರದಲ್ಲಿ ನ್ಯೂನತೆಗಳನ್ನು ತೆಗಳುತ್ತಾರೆ. ಆದರೆ, ಒಳ್ಳೆಯ ವಿಷಯ ಬಿಡುತ್ತಾರೆ. ಅಂತೆಯೆ ಎಲ್ಲಾ ಕ್ಷೇತ್ರದಲ್ಲಿಯೂ ತೆಗಳುವಿಕೆ ಬಿಡಬೇಕು. ಈಗ ವಿದ್ಯಾರ್ಹತೆ ಇದ್ದರೂ ಸಂದರ್ಶನ ಎದುರಿಸುವಲ್ಲಿ ವಿಫಲರಾಗುತ್ತಾರೆ. ಕಾರಣ ಸಂವಹನ ಕೌಶಲ್ಯದ ಕೊರತೆ ಇರುತ್ತದೆ. ಆದ್ದರಿಂದ ಸಂವಹನ ಕೌಶಲ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು. ಉದ್ಯೋಗ ಮೇಳಕ್ಕೆ ಬಂದ ಎಲ್ಲರಿಗೂ ಕೆಲಸ ದೊರಕುತ್ತದೆ ಎಂಬ ಭ್ರಮೆ ಇಟ್ಟುಕೊಳ್ಳಬಾರದು. ಅನೇಕ ವೇಳೆ 100 ಮಂದಿ ಭಾಗವಹಿಸಿದ್ದರೆ 3 ಮಂದಿಗೆ ಉದ್ಯೋಗ ದೊರಕಬಹುದು. ಆದ್ದರಿಂದ ಎಲ್ಲರಿಗೂ ಉದ್ಯೋಗ ದೊರಕುತ್ತದೆ ಎಂದು ತಿಳಿಯಬಾರದು ಎಂದರು. ಕೇಂದ್ರದ ನಿರ್ದೇಶಕ ಡಾ. ನಿರಂಜನ ವಾನಳ್ಳಿ ಮಾತನಾಡಿ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಿವಿ ವ್ಯಾಪ್ತಿಯ ಸುಮಾರು 175 ಕಾಲೇಜುಗಳಲ್ಲಿ ಕೌಶಲ್ಯ ತರಬೇತಿ ಕಾರ್ಯಕ್ರಮ ಆಯೋಜಿಸುವ ಉದ್ದೇಶ ಇದೆ. ಹನೂರು, ಸಾಲಿಗ್ರಾಮ ಸೇರಿದಂತೆ ಹಲವು ಕಡೆ ಈಗಾಗಲೆ ಕೌಶಲ್ಯ ತರಬೇತಿ ಆರಂಭಿಸಲಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

