ಸರ ಅಪಹರಣಕಾರರ ಸೆರೆ
ಕ.ಪ್ರ. ವಾರ್ತೆ ಮೈಸೂರು ಸೆ.10
ನಗರದ ಎನ್.ಆರ್. ಠಾಣೆಯ ಪೊಲೀಸರು ಇಬ್ಬರು ಸರ ಅಪಹರಣಕಾರರನ್ನು ಬಂಧಿಸಿ 3.83 ಲಕ್ಷ ಮೌಲ್ಯದ 4 ಚಿನ್ನದ ಸರಗಳನ್ನು ವಶಪಡಿಸಿಕೊಂಡಿದ್ದಾರೆ.
ಉದಯಗಿರಿ 2ನೇ ಕ್ರಾಸ್ ನಿವಾಸಿ ಸೈಯದ್ ಜಾನಿ ಎಂಬವರ ಪುತ್ರ ಸೈಯದ್ ಅಯೂಬ್ ಅ. ಬಡ್ಡಾ (20) ಮತ್ತು ಗೌಸಿಯಾನಗರ ಹೈದರಾಲಿ ಬ್ಲಾಕ್ ನಿಲಾಸಿ ಲೇ. ಇಬ್ರಾಹಿಂ ಪಾಷ ಎಂಬವರ ಪುತ್ರ ಸುಹೇಲ್ ಪಾಷ ಅ. ಕಣ್ಣು (20) ಬಂಧಿತ ಆರೋಪಿಗಳು.
ಆರೋಪಿಗಳು ಸೋಮವಾರ ಎನ್.ಆರ್. ಮೊಹಲ್ಲಾದ ಬಜಾರ್ ಸ್ಟ್ರೀಟ್ನ ಗಿರಿವಿ ಅಂಗಡಿಗಳ ಬಳಿ ಚಿನ್ನದ ಸರ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದರು. ಬಂಧಿತರಿಂದ ಎನ್.ಆರ್. ಠಾಣೆಯ ಎರಡು ಹಾಗೂ ನಜರ್ಬಾದ್ ಠಾಣೆಯ 1 ಪ್ರಕರಣ ಪತ್ತೆಯಾಗಿದೆ. ಬಂಧಿತರಿಂದ 96 ಗ್ರಾಂ. ತೂಕದ ಒಟ್ಟು 4 ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ್ದ ಕರಿಷ್ಮಾ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಡಿಸಿಪಿ ಎಂ.ಎಂ. ಮಹದೇವಯ್ಯ, ಎಸಿಪಿ ಸಿ.ಡಿ. ಜಗದೀಶ್ ಮಾರ್ಗದರ್ಶನದಲ್ಲಿ ಎನ್.ಆರ್. ಠಾಣೆಯ ಇನ್ಸ್ಪೆಕ್ಟರ್ ಧನಂಜಯ, ಎಸ್ಐ ಮುಸ್ತಾಕ್ ಪಾಷ, ಪರಶುರಾಮ್ ಮತ್ತು ಸಿಬ್ಬಂದಿ ಈ ಪತ್ತೆ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

