ಕಾಳಿಸಿದ್ದನಹುಂಡಿಯಲ್ಲಿ ಕಳವು: ಆರೋಪಿ ಬಂಧನ
ಮೈಸೂರು: ಹಗಲು ವೇಳೆ ಮನೆಯೊಳಗೆ ಇಳಿದು ಚಿನ್ನಾಭರಣ ಮತ್ತು ನಗದು ದೋಚಿದ್ದ ಆರೋಪಿಯನ್ನು ಮೈಸೂರು ದಕ್ಷಿಣ ಠಾಣೆ ಪೊಲೀಸರು ಸೋಮವಾರ ರಮ್ಮನಹಳ್ಳಿ ಬಳಿ ಬಂಧಿಸಿದ್ದಾರೆ. ಮೈಸೂರು ತಾಲೂಕು ಕಾಳಿಸಿದ್ದನಹುಂಡಿ ನಿವಾಸಿ ಲೇ. ಲಕ್ಷ್ಮಣ ಎಂಬವರ ಪುತ್ರ ನಾರಾಯಣ ಬಂಧಿತ ಆರೋಪಿ. ಈತ ಅದೇ ಗ್ರಾಮದ ಚೆನ್ನಯ್ಯ ಪುತ್ರ ಮಹದೇವ ಅವರ ಮನೆ ಬಾಗಿಲು ಮುರಿದು 1.30 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ 20,000 ಕಳವು ಮಾಡಿದ್ದ. ಬಂಧಿತನಿಂದ 1.50 ಲಕ್ಷ ಮೌಲ್ಯದ ಚಿನ್ನಾಭರಣ ಮತ್ತು ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಗೂಡ್ಸ್ ವಾಹನ ಪಲ್ಟಿ: ಇಬ್ಬರು ಸಾವು
ಮೈಸೂರು: ಗೂಡ್ಸ್ ವಾಹನವೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದು ಇಬ್ಬರು ಮೃತಪಟ್ಟು, 18 ಮಂದಿ ಗಾಯಗೊಂಡಿರುವ ಘಟನೆ ನಗರದ ಗಾಂಧಿ ಚೌಕದಲ್ಲಿ ಸೋಮವಾರ ನಡೆದಿದೆ. ಮೈಸೂರು ತಾಲೂಕು ಇಲವಾಲ ನಿವಾಸಿ ಸುರೇಶ್ (38) ಮತ್ತು ನಂಜನಗೂಡು ತಾಲೂಕಿನ ಜಗದೀಶ್ (35) ಮೃತಪಟ್ಟವರು. ಗಾಯಗೊಂಡಿರುವ 18 ಜನರು ಕೆ.ಆರ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಪೈಕಿ ಹೊನ್ನೇಗೌಡ ಮತ್ತು ಮಹದೇವಸ್ವಾಮಿ ಎಂಬವರ ಸ್ಥಿತಿ ಚಿಂತಾಜನಕವಾಗಿದೆ.
ರಾಜಪಥ ಕಾಮಗಾರಿಗಾಗಿ 22 ಕೂಲಿ ಕಾರ್ಮಿಕರು ಟಾಟಾ ಏಸ್ ಗೂಡ್ಸ್ ವಾಹನದಲ್ಲಿ ಬರುತ್ತಿದ್ದರು. ಅತಿ ವೇಗವಾಗಿ ಬಂದಿದ್ದರಿಂದ ಚಾಲಕನ ನಿಯಂತ್ರಣ ತಪ್ಪಿ ಗಾಂಧಿಚೌಕದಲ್ಲಿ ವಾಹನ ಮಗುಚಿ ಬಿದ್ದಿದೆ. ಇದರಿಂದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಈ ಸಂಬಂಧ ಲಷ್ಕರ್ ಸಂಚಾರ ಠಾಣೆ ಎಸ್ಐ ಸಿ.ರವಿಕುಮಾರ್ ಮತ್ತು ಸಿಬ್ಬಂದಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

