ಮೈಸೂರು

ಜಿಲ್ಲೆಯಲ್ಲಿ ಪರಿಸರ ಮಿತ್ರ ಶಾಲೆ ಪ್ರಶಸ್ತಿ

Published On :

ಕ.ಪ್ರ. ವಾರ್ತೆ   ಮೈಸೂರು   ಸೆ.10
ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಗ್ರಾಮೀಣ ಮಟ್ಟದ ಜನತೆಯನ್ನು ಶಾಲಾ ಮಕ್ಕಳ ಜತೆ ಸೇರಿ ತಲುಪುವ ಉದ್ದೇಶದಿಂದ ಕಳೆದ ಜೂನ್ನಿಂದ ಆರಂಭಿಸಿರುವ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಕಾರ್ಯಕ್ರಮವನ್ನು ಮೈಸೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಭಾಗವಹಿಸಲಿಚ್ಛಿಸುವ ಶಾಲೆಗಳ ಮುಖ್ಯೋಪಾಧ್ಯಾಯರು ಹೆಸರು ನೋಂದಾಯಿಸಿಕೊಳ್ಳಬಹುದು. ಆ ಶಾಲೆಯ ಮುಖ್ಯೋಪಾಧ್ಯಾಯರು ಆಸಕ್ತ ಇಬ್ಬರು ಶಿಕ್ಷಕರನ್ನು ಆಯ್ಕೆ ಮಾಡಿ ತಂಡವನ್ನು ಸ್ವಮೌಲ್ಯಮಾನಪಕ್ಕಾಗಿ ಸೆ.20 ರೊಳಗೆ ರಚಿಸುವುದು. ಆ ಶಿಕ್ಷಕರಿಗೆ ಜನಜಾಗೃತಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಸೆ.30 ರೊಳಗೆ ತರಬೇತಿ ನೀಡಿ ಪ್ರಶ್ನಾವಳಿ ವಿತರಿಸುತ್ತದೆ. ಪ್ರಶ್ನಾವಳಿಯನ್ನು ತುಂಬಿ ಸೆ.30 ರೊಳಗೆ ಸಂಸ್ಥೆಗೆ ನೀಡಬೇಕು. ಮೌಲ್ಯಮಾಪಕರು ಆಯ್ದ 30 ಶಾಲೆಗಳ ಪಟ್ಟಿಯನ್ನು ಡಿ.10 ರಂದು ಸಿದ್ಧಪಡಿಸುತ್ತದೆ. ನಂತರ ಮೌಲ್ಯಮಾಪಕರು ಶಾಲೆಗಳಿಗೆ ಭೇಟಿ ನೀಡಿ 21 ಶಾಲೆಗಳನ್ನು ಪ್ರಶಸ್ತಿಗೆ ಆಯ್ಕೆ ಮಾಡುತ್ತಾರೆ.
ಈ 21 ಶಾಲೆಗಳ ಪೈಕಿ 11 ಶಾಲೆಗಳನ್ನು ಆಯ್ಕೆ ಮಾಡಿ ಹನ್ನೊಂದು ಶಾಲೆಗಳಿಂದ ಒಬ್ಬರು ಶಿಕ್ಷಕರು, ಇಬ್ಬರು ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಸೇರಿದಂತೆ ಒಟ್ಟು 55 ಜನರ ತಂಡ ರಚಿಸಿ ಅವರ ಮೌಲ್ಯಮಾಪನಕ್ಕನುಸಾರವಾಗಿ ಪ್ರಶಸ್ತಿ ವಿಜೇತರ ಪಟ್ಟಿ ತಯಾರಿಸಲಾಗುತ್ತದೆ. ಈ ಪ್ರಕ್ರಿಯೆಯಲ್ಲಿ ಮೊದಲ ಸ್ಥಾನ ಪಡೆದ ಶಾಲೆಗೆ ಜಿಲ್ಲಾ ಪರಿಸರ ಮಿತ್ರ ಶಾಲೆ ಎಂದು ನಾಮಕರಣ ಮಾಡಿ ರಾಜ್ಯಮಟ್ಟದಲ್ಲಿ ಸ್ಪರ್ಧಿಸಲು ಅವಕಾಶ ಕಲ್ಪಿಸಲಾಗುತ್ತದೆ. 2014ರ ಫೆಬ್ರವರಿಯಲ್ಲಿ ಬಹುಮಾನ ನೀಡಲಾಗುತ್ತದೆ ಎಂದಿದ್ದಾರೆ.
ರಾಜ್ಯ ಮಟ್ಟದಲ್ಲಿ ಪರಿಸರ ಮಿತ್ರ ಶಾಲೆಗೆ 70 ಸಾವಿರ ನಗದು ಹಾಗೂ ಜಿಲ್ಲಾಮಟ್ಟದ ಶಾಲೆಗಳಿಗೆ 20 ಸಾವಿರ ನಗದು ಬಹುಮಾನವನ್ನು ಏ.22ರ ವಿಶ್ವ ಭೂಮಿ ದಿನಾಚರಣೆಯಂದು ನೀಡಲಾಗುತ್ತದೆ. ಜಿಲ್ಲೆಯಲ್ಲಿ 2 ರಿಂದ 11ನೇ ಸ್ಥಾನದವರೆಗೆ ಹಸಿರು ಶಾಲೆಗಳು ಎಂದು ಕರೆದು ತಲಾ 2 ಸಾವಿರ ಹಾಗೂ ಜಿಲ್ಲೆಯ 12 ರಿಂದ 21ನೇ ಸ್ಥಾನದವರೆಗೆ ಆಯ್ಕೆಯಾಗುವ ಶಾಲೆಗಳಿಗೆ ಕಿತ್ತ ಶಾಲೆಗಳು ಎಂದು ಕರೆದು ತಲಾ 1 ಸಾವಿರ ನೀಡಲಾಗುತ್ತದೆ. ಭಾಗವಹಿಸಿದ ಎಲ್ಲಾ ಶಾಲೆಗಳಿಗೆ ಹಳದಿ ಶಾಲೆಗಳು ಎಂದು ನಾಮಕರಣ ಮಾಡಲಾಗುತ್ತದೆ ಎಂದು ತಿಳಿಸಿದ್ದಾರೆ.
ಹೆಚ್ಚಿನ ವಿವರಗಳಿಗೆ ಜನಜಾಗೃತಿ ಗ್ರಾಮೀಣಾಭಿವೃದ್ಧಿ ಸಂಸ್ಥೆ, ನಂ.535, ಸುರಭಿ ಬೇಕರಿ ಮುಖ್ಯ ರಸ್ತೆ, ಬಿ.ಎಂ.ಶ್ರೀ ನಗರ, ಮೇಟಗಳ್ಳಿ, ಮೈಸೂರು- 570 016. ಹಾಗೂ ದೂ. 0821- 2581214, ಮೊ. 98445 96602, 9141103594 ಸಂಪರ್ಕಿಸಬಹುದು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.