ಮೈಸೂರು

ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಅನುಷ್ಠಾನ

Published On :

ಕ.ಪ್ರ. ವಾರ್ತೆ, ಮೈಸೂರು, ಸೆ.10
ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮತ್ತು ಸೇವನೆ ನಿಯಂತ್ರಿಸಲು ಸಿಗರೇಟು ಮತ್ತು ಇತರೇ ತಂಬಾಕು ಉತ್ಪನ್ನಗಳ ಕಾಯ್ದೆ ಜಾರಿಗೆ ಬಂದಿದೆ. ಈ ಕಾಯ್ದೆ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ (ಹೊಟೇಲ್, ಆಸ್ಪತ್ರೆ, ಸಾರ್ವಜನಿಕ ಕಚೇರಿ, ಬಸ್, ರೈಲು ನಿಲ್ದಾಣ, ಕ್ರೀಡಾಂಗಣ, ಶಾಪಿಂಗ್ ಮಾಲ್, ಶೈಕ್ಷಣಿಕ ಸಂಸ್ಥೆಗಳು ಇತರೆ) ಧೂಮಪಾನ ಮಾಡಿದವರಿಗೆ 200 ದಂಡ ವಿಧಿಸಲಾಗುತ್ತದೆ. ಸಿಗರೇಟ್ ಅಥವಾ ಹೊಗೆಸೊಪ್ಪು ಕುರಿತು ಜಾಹೀರಾತು ಹಾಕಿದ್ದಲ್ಲಿ 1000 ಅಥವಾ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗುತ್ತದೆ. ಸಿಗರೇಟ್ ಅಥವಾ ಹೊಗೆಸೊಪ್ಪು ಉತ್ಪನ್ನಗಳನ್ನು 18 ವರ್ಷದೊಳಗಿನವರಿಗೆ ಮಾರಾಟ ಮಾಡುವುದು, ಶಾಲಾ ಕಾಲೇಜುಗಳ 100 ಅಡಿ ಸುತ್ತಮುತ್ತ ಸಿಗರೇಟ್ ಅಥವಾ ಹೊಗೆಸೊಪ್ಪು ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ 200 ದಂಡ, ಉತ್ಪಾದಕರಿಗೆ 5000 ದಂಡ ವಿಧಿಸಲಾಗುತ್ತದೆ. ತಂಬಾಕು ಉತ್ಪನ್ನಗಳ ಪ್ಯಾಕೆಟ್ ಮೇಲೆ ಎಚ್ಚರಿಕೆ ಚಿತ್ರಗಳ ಪ್ರದರ್ಶನ ಮಾಡದಿರುವುದು ಕಂಡುಬಂದರೆ ಮಾರಾಟಗಾರರಿಗೆ/ ವಿತರಕರಿಗೆ 1000 ದಂಡ ವಿಧಿಸಲಾಗುತ್ತದೆ. ಮೈಸೂರು ನಗರದಾದ್ಯಂತ ಕಟ್ಟುನಿಟ್ಟಾಗಿ ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಕಾಯ್ದೆಯನ್ನು ಜಾರಿಗೊಳಿಸಲಾಗುವುದು. ಸಾರ್ವಜನಿಕರು, ಅಂಗಡಿ ಮಾಲೀಕರು, ಮಾರಾಟಗಾರರು, ವಿತರಕರು, ಹೊಟೇಲ್ ರೆಸ್ಟೋರೆಂಟ್ ಮಾಲೀಕರು ಈ ಕಾಯ್ದೆಯನ್ನು ಅನುಷ್ಠಾನಗೊಳಿಸಲು ಸಹಕರಿಸುವಂತೆ ನಗರ ಪೊಲೀಸ್ ಆಯುಕ್ತ ಡಾ.ಎಂ.ಎ. ಸಲೀಂ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.