ಮೈಸೂರು

ನಾಳೆಯಿಂದ ನಗರದಲ್ಲಿ ಕಿರುಧಾನ್ಯಗಳ ಹಿರಿ ಮೇಳ ಆರಂಭ

Published On :

ಕ.ಪ್ರ.ವಾರ್ತೆ   ಮೈಸೂರು   ಸೆ. 11
ಗ್ರಾಮೀಣ ನ್ಯಾಚುರಲ್ ಸಂಸ್ಥೆ ವತಿಯಿಂದ ಸೆ.13 ರಿಂದ 15 ರವರೆಗೆ ನಗರದ ನಂಜರಾಜ ಬಹದ್ಧೂರ್ ಛತ್ರದಲ್ಲಿ ಮಾಲಿನ್ಯಮುಕ್ತ ಕಿರುಧಾನ್ಯ ಮೇಳ ಆಯೋಜಿಸಲಾಗಿದೆ.
ಸೆ.13ರ ಬೆಳಗ್ಗೆ 11ಕ್ಕೆ ರಾಷ್ಟ್ರೀಯ ಟೆನ್ನಿಸ್ ಆಟಗಾರ್ತಿ ಪೂಜಾಶ್ರೀ ವೆಂಕಟೇಶ್ ಉದ್ಘಾಟಿಸಲಿದ್ದು, ಪರಿಸರತಜ್ಞ ಡಾ.ಯಲ್ಲಪ್ಪ ರೆಡ್ಡಿ, ಶಾಸಕ ಬಿ. ರಾಮಕೃಷ್ಣ, ಸಹಜ ಸಮೃದ್ಧ ನಿರ್ದೇಶಕ ಕೃಷ್ಣಪ್ರಸಾದ್, ನೈಸರ್ಗಿಕ ಕೃಷಿಕರಾದ ಶಿವಳ್ಳಿ ಬೋರೇಗೌಡ, ಆರ್.ಕೆ. ವಿದ್ಯಾಸಂಸ್ಥೆಯ ಕಾರ್ಯಾಧ್ಯಕ್ಷ ಎನ್. ಪ್ರಸನ್ನ ಭಾಗವಹಿಸುವರು ಎಂದು ಗ್ರಾಮೀಣ ನ್ಯಾಚುರಲ್ ಸಂಸ್ಥೆಯ ಆಡಳಿತಾಧಿಕಾರಿ ಎ.ಜಿ. ದೇವರಾಜು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಳೆಯಾಧಾರಿತ, ರಾಸಾಯನಿಕ ಗೊಬ್ಬರ ಕ್ರಿಮಿನಾಶಕ ಇತ್ಯಾದಿಗಳಿಂದ ಮುಕ್ತವಾಗಿ ಸಹಜಕೃಷಿ ಪದ್ಧತಿಯಲ್ಲಿ ಬೆಳೆದಿರುವ ಕಿರುಧಾನ್ಯಗಳನ್ನು ಪ್ರದರ್ಶಿಸಲಾಗುತ್ತದೆ. ಜನಸಾಮಾನ್ಯರಿಗೆ ಮಾಲಿನ್ಯಮುಕ್ತವಾದ ಆಹಾರ ಪದಾರ್ಥ ನೀಡುವುದು ಮೇಳದ ಉದ್ದೇಶ. ಕಿರುಧಾನ್ಯಗಳನ್ನು ಸೇವಿಸುವುದರಿಂದ ಮಧುಮೇಹ, ಹೃದಯಾಘಾತವಾಗುವುದು ಕಡಿಮೆಯಾಗುತ್ತದೆ. ನೈಸರ್ಗಿಕ ಕೃಷಿಕರಿಂದ ಆಹಾರೋತ್ಪನ್ನಗಳನ್ನು ನೇರವಾಗಿ ಪಡೆದು ಗ್ರಾಹಕರಿಗೆ ಸೂಕ್ತ ಬೆಲೆಯಲ್ಲಿ ಮಾರಾಟ ಮಾಡಲಾಗುವುದು ಎಂದರು.
ಮೇಳದಲ್ಲಿನ ಕಿರುಧಾನ್ಯಗಳು: ನವಣೆ, ಸಾಮೆ, ಆರ್ಕಾ, ಸಜ್ಜೆ, ಕೊರಲು, ನವಣೆ ಇಡ್ಲಿ ರವೆ, ಸಾಮೆ ಇಡ್ಲಿ ರವೆ, ನವಣೆ ಉಪ್ಪಿಟ್ಟು ರವೆ, ಸಾಮೆ ಉಪ್ಪಿಟ್ಟು ರವೆ, ಆರ್ಕಾ ಉಪ್ಪಿಟ್ಟು ರವೆ, ಕೆಂಪಕ್ಕಿ ರವೆ, ಸಜ್ಜೆ ರವೆ, ಜೋಳದ ರವೆ, ಕೆಂಪಕ್ಕಿ, ಗಂಧಸಾಲೆ, ಸೋನಾ ಮಸೂರಿ, ರಾಜಮುಡಿ, ಬಾಣಂತಿ ಅಕ್ಕಿ, ಮೊಗದ ಸಿರಿ, ಸಣ್ಣವಾಳ್ಯ, ಮಧುಮೇಹ ಅಕ್ಕಿ, ಸುಮತಿ, ಅಭಿಲಾಷ, ನವರ, ಬೆಳಗಾಂ, ಬಾಸುಮತಿ, ಮೈಸೂರು ಸಣ್ಣ, ಅಕ್ಕಿ ನುಚ್ಚು, ರವೆ, ಹೆಸರು ಕಾಳು, ಬೇಳೆ, ಉದ್ದಿನಕಾಳು, ಬೇಳೆ, ಕಡಲೇಕಾಳು, ಬೇಳೆ, ಸೋಯಾ ಅವರೆ, ಅಲಸಂದೆ, ತೊಗರಿಬೇಳೆ, ಅವರೆ ಕಾಳು, ಬಟಾಣಿ ಕಾಳು ಇತ್ಯಾದಿ ಪದಾರ್ಥಗಳನ್ನು ಪ್ರದರ್ಶಿಸಲಾಗುತ್ತದೆ. ಕಿರುಧಾನ್ಯಗಳ ಸೇವನೆಯಿಂದ ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ಕೀಲುಗಳ ಸದೃಢವಾಗಿ ಕಾರ್ಯನಿರ್ವಹಣೆ, ಒತ್ತಡ ನಿವಾರಣೆ, ಆರೋಗ್ಯವರ್ಧನೆ, ಅಸ್ತಮ ಪಿರಿಪಿರಿ ನಿಯಂತ್ರಣ, ತಲೆಶೂಲ ನಿಯಂತ್ರಣ, ಅತಿ ರಕ್ತದೊತ್ತಡ ನಿಯಂತ್ರಣ, ರಕ್ತದಲ್ಲಿನ ಕೊಲೆಸ್ಟ್ರಾಲ್ ಕಡಿಮೆ ಮಾಡಲು, ಮೂಳೆಗಳ ಸಾಂಧ್ರತೆ ಹೆಚ್ಚಿಸಲು ಸಹಾಯಕವಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.