'ತಾಂತ್ರಿಕ ಕೇಂದ್ರವಾಗುತ್ತಿರುವ ಮೈಸೂರು'
ಕ.ಪ್ರ.ವಾರ್ತೆ ಮೈಸೂರು ಸೆ. 11
ಪ್ರಸ್ತುತ ದಿನಗಳಲ್ಲಿ ಮೈಸೂರು ತಾಂತ್ರಿಕ ಕೇಂದ್ರವಾಗುತ್ತಿದ್ದು, ಇದರ ಬೆಳವಣಿಗೆಗೆ ಎಲೆಕ್ಟ್ರಾನಿಕ್ಸ್ ವ್ಯವಸ್ಥೆ ವಿನ್ಯಾಸ ಮತ್ತು ಉತ್ಪಾದನೆಯಲ್ಲಿ ಸಾಕಷ್ಟು ಕೊಡುಗೆ ನೀಡಬೇಕಾಗಿದೆ ಎಂದು ಇಂಟೆಲ್ ಇಂಡಿಯಾ ಸಂಸ್ಥೆಯ ಅಧ್ಯಕ್ಷೆ ಕುಮುದಾ ಶ್ರೀನಿವಾಸನ್ ಅಭಿಪ್ರಾಯಪಟ್ಟರು.
ಭಾರತೀಯ ಕೈಗಾರಿಕಾ ಒಕ್ಕೂಟ ಹಾಗೂ ಇನ್ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಿದ್ದ ತಾಂತ್ರಿಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮೈಸೂರಿಗಾಗಿ ಬದಲಾದ ತಂತ್ರಜ್ಞಾನ ಮತ್ತು ಉದ್ಯಮ ಪ್ರವೃತ್ತಿ ಹಾಗೂ ಅವಕಾಶಗಳ ಕುರಿತು ಅವರು ಮಾತನಾಡಿದರು.
ಬದಲಾದ ಜೀವನ ಶೈಲಿಯು ಸಂಪರ್ಕ, ಕ್ರೀಡೆ, ಶಾಪಿಂಗ್, ಮನರಂಜನೆ ಇತ್ಯಾದಿ ಕ್ಷೇತ್ರಗಳನ್ನೂ ಒಳಗೊಂಡಂತೆ ತಾಂತ್ರಿಕ ಕ್ಷೇತ್ರದಲ್ಲಿ ಬದಲಾವಣೆ ತರುತ್ತದೆ. ದೇಶದಲ್ಲಿನ ಅಂತರ್ಜಾಲ ಕೊಂಡಿಯು ಜಿಡಿಪಿ ಬೆಳವಣಿಗೆ, ಮುಕ್ತ ವ್ಯವಹಾರ ಹಾಗೂ ಉದ್ಯೋಗಾವಕಾಶಗಳನ್ನು ಭಾರತೀಯರಿಗಾಗಿ ಒದಗಿಸಿಕೊಡುತ್ತಿದೆ. ಭಾರತ ವಿಶ್ವದ ಮೂರನೇ ಒಂದು ಭಾಗದಷ್ಟು ಜನಸಂಖ್ಯೆ ಹೊಂದಿದೆ. ಅಮೆರಿಕವು ಅಂತರ್ಜಾಲ ಕೇಂದ್ರವಾಗಿಲ್ಲದ ಕಾರಣ ಮೈಸೂರಿಗೆ ಆ ಹಿರಿಮೆ ಬರುವ ಸಾಧ್ಯತೆ ಇದೆ ಎಂದರು.
ವಾರ್ಷಿಕ ಫೇಸ್ಬುಕ್ ಬಳಕೆದಾರರ ಸಂಖ್ಯೆ ಶೇ.28 ರಷ್ಟಿದ್ದು, ಅದರಲ್ಲಿ ಶೇ.27 ರಷ್ಟು ಮಂದಿ ಭಾರತದವರೆ ಆಗಿದ್ದಾರೆ.
ಇದು ಭಾರತದಲ್ಲಿನ ಅಂತರ್ಜಾಲ ಬಳಕೆ ಬಗೆಗೆ ತಿಳಿಸುತ್ತದೆ. ತಾಂತ್ರಿಕ ಕ್ಷೇತ್ರದಲ್ಲಿನ ಉದ್ಯೋಗಿಗಳಲ್ಲಿ ಅತಿ ಹೆಚ್ಚು ಭಾರತೀಯರೆ ಇದ್ದಾರೆ. ಹೀಗಾಗಿ ಇಲ್ಲಿನ ಸರ್ಕಾರ ಆಮದು ಶುಲ್ಕ ಮತ್ತು ಉದ್ಯೋಗ ಸೃಷ್ಟಿಯ ಬಗ್ಗೆ ಚಿಂತಿಸುವ ಅಗತ್ಯವಿದೆ. ಭಾರತವು ಎಲೆಕ್ಟ್ರಾನಿಕ್ಸ್ನಲ್ಲಿ ಆದಾಯ ಗಳಿಸುವ ಕೇಂದ್ರವಾಗಿದ್ದರು ಕೂಡ ಇಲ್ಲಿಂದ ಹೆಚ್ಚಿನ ಕೊಡುಗೆ ನೀಡುತ್ತಿಲ್ಲ. ಇಂತಹ ಸನ್ನಿವೇಶವನ್ನು ನಾವು ಬದಲಾಯಿಸಬೇಕಿದೆ. ಭಾರತೀಯ ಮಾರುಕಟ್ಟೆಯಲ್ಲಿ ಸುಧಾರಣೆ ತರಬೇಕಿದೆ ಎಂದು ತಿಳಿಸಿದರು.
ಎಸ್ಎಂಇ ಪ್ಯಾನೆಲ್ ಸಂಚಾಲಕ ಅರ್ಜುನ್ ರಂಗ, ಐಇಟಿ ಉಪಾಧ್ಯಕ್ಷ ಕಪಿಲ್ ಖನ್ನಾ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

