ಬಿಸಿಎಂ ಹಾಸ್ಟೆಲ್‌ನಲ್ಲಿ ಸಮಸ್ಯೆಗಳ ಮಹಾಪೂರ
ಕ.ಪ್ರ.ವಾರ್ತೆ ಕೆ.ಆರ್. ನಗರ ಸೆ. 13
ಸ್ನಾನಕ್ಕೆ ಬಿಸಿ ನೀರು ಇಲ್ಲ, ಒಂದೇ ತರಹದ ತಿಂಡಿಯನ್ನು ದಿನವು ಕೊಡುತ್ತಾರೆ. ಸಮಸ್ಯೆ ಹೇಳಿದರೆ ಕೇಳುವವರೇ ಇಲ್ಲ, ತಾಲೂಕು ಬಿಸಿಎಂ ಅಧಿಕಾರಿಯೇ ವಾರ್ಡನ್ ಕೆಲಸ ಮಾಡುತ್ತಾರೆ ಎಂಬ ಹತ್ತಾರು ದೂರುಗಳು ಜಿಪಂ ಹಂಗಾಮಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ಅವರಿಗೆ ವಿದ್ಯಾರ್ಥಿನಿಯರಿಂದ ಕೇಳಿ ಬಂದವು.
ಇಲ್ಲಿನ ಒಕ್ಕಲಿಗರ ಸಮುದಾಯ ಭವನದ ಬಳಿಯಿರುವ ಹಿಂದುಳಿದ ವರ್ಗಗಳ ಬಾಲಕಿಯರ ವಿದ್ಯಾರ್ಥಿನಿಲಯಕ್ಕೆ ಗುರುವಾರ ಸಂಜೆ ಜಿಪಂ ಪ್ರಭಾರ ಅಧ್ಯಕ್ಷರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ವಿದ್ಯಾರ್ಥಿನಿಯರು ದೂರು ನೀಡಿ, ಕೂಡಲೇ ಇವುಗಳನ್ನು ಪರಿಹರಿಸಿ ಎಂದು ವಿದ್ಯಾರ್ಥಿನಿಯರು ಮನವಿ ಮಾಡಿದರು. ನಿಲಯದಲ್ಲಿ ಇರುವ ಸೋಲಾರ್ ಕೆಟ್ಟು ಹೋಗಿ ತಿಂಗಳುಗಳೇ ಆಗಿದ್ದು, ಈವರೆಗೆ ದುರಸ್ತಿಯಾಗಿಲ್ಲ ಎಂದರು.
ಅಧ್ಯಕ್ಷರು ವಿದ್ಯಾರ್ಥಿನಿಲಯಕ್ಕೆ ಭೇಟಿ ನೀಡಿದಾಗ ವಾರ್ಡನ್ ಕೆಲಸ ನಿರ್ವಹಿಸುವ ಬಿಸಿಎಂ ಅಧಿಕಾರಿ ಭಾಗ್ಯಮ್ಮ ಇರಲಿಲ್ಲ. ಅಡುಗೆಯವರನ್ನು ಅಧ್ಯಕ್ಷರು ಸಮಸ್ಯೆಗಳನ್ನು ಬಗೆಹರಿಸದಿರುವ ಬಗ್ಗೆ ಪ್ರಶ್ನಿಸಿದಾಗ ನಮಗೆ ಏನು ಗೊತ್ತಿಲ್ಲ ಮೇಡಮ್ ಹೇಳಿದಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ವಿದ್ಯಾರ್ಥಿನಿಯರ ಎಲ್ಲ ಸಮಸ್ಯೆ ಮತ್ತು ಅಹವಾಲುಗಳನ್ನು ತಾಳ್ಮೆಯಿಂದ ಆಲಿಸಿದ ಅಧ್ಯಕ್ಷರು, ಈ ಸಂಬಂಧ ಇಲಾಖೆ ಅಧಿಕಾರಿಗಳ ಸಭೆ ಕರೆದು ವಿದ್ಯಾರ್ಥಿನಿಲಯಗಳ ಸಮಸ್ಯೆಗಳನ್ನು ಬಗೆಹರಿಸಲು ತುರ್ತುಕ್ರಮ ಕೈಗೊಳ್ಳುವ ಭರವಸೆ ನೀಡಿದರಲ್ಲದೆ ಕರ್ತವ್ಯ ಲೋಪ ಎಸಗಿದರೆ ಕಠಿಣ ಕ್ರಮಕ್ಕೆ ಶಿಫಾರಸು ಮಾಡುವುದಾಗಿ ಎಚ್ಚರಿಕೆ ನೀಡಿದರು.
ಇಒ ಕೆ.ಬಸವರಾಜು, ತಾಪಂ ಸದಸ್ಯರಾದ ನಾಗಣ್ಣ, ಕೃಷ್ಣೇಗೌಡ, ಬಿ. ರಮೇಶ್, ಗಂಧನಹಳ್ಳಿ ಮಹದೇವ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

