ಲಕ್ಷ್ಮೀ ಮಹಿಳಾ ಸಹಕಾರ ಸಂಘ; ಲಲಿತಾಗೆ ಹ್ಯಾಟ್ರಿಕ್ ಗೆಲವು
ಕ.ಪ್ರ.ವಾರ್ತೆ ಹುಣಸೂರು ಸೆ. 14
ಇಲ್ಲಿನ ಲಕ್ಷ್ಮಿ ಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಸತತವಾಗಿ ಮೂರನೇ ಬಾರಿಗೆ ಅಧ್ಯಕ್ಷರಾಗಿ ಜಿಪಂ ಸದಸ್ಯೆ ಕೆ. ಲಲಿತಾ ದೇವೇಗೌಡ ಮತ್ತು ಉಪಾಧ್ಯಕ್ಷರಾಗಿ ಹನಗೋಡಿನ ಶಾಂತಕುಮಾರಿ ಪುಟ್ಟಸ್ವಾಮಪ್ಪ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ತಾಲೂಕಿನ ಮಹಿಳಾ ಸಹಕಾರ ಬ್ಯಾಂಕಿನ ಅವರಣದಲ್ಲಿ 2013-18ನೇ ಸಾಲಿನ ಅವಧಿಗೆ ಶನಿವಾರ ನಡೆದ ಮೈಸೂರು ಜಿಲ್ಲೆಯ ವ್ಯಾಪ್ತಿಯ ಲಕ್ಷ್ಮಿಮಹಿಳಾ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆದು, ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ, ಇವರಿಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ವರದೇಗೌಡ ತಿಳಿಸಿದರು.
ನಿರ್ದೇಶಕರ ಸ್ಥಾನಕ್ಕೆ ಕಳೆದ ವಾರ ಜಿಲ್ಲೆಯ ವ್ಯಾಪ್ತಿಯಲ್ಲಿ ನಡೆದ ಚುನಾವಣೆಯಲ್ಲಿ ಶಶಿಕಲಾ ನಾಗಣ್ಣ, ಶಕುಂತಲಾ ವೆಂಕಟೇಶ್, ನೇತ್ರಾವತಿ ಸ್ವತಂತ್ರಿಗೌಡ, ಮಂಜುಳಾ ಪುಟ್ಟಶೆಟ್ಟಿ, ಗೀತಾ ನಿಂಗರಾಜು, ಸುಮಾ ಪರಮೇಶ್, ನಳಿನಾಕ್ಷಿ ಜೈರಾಮೇಗೌಡ, ಪುಷ್ಪಾಲತಾ ಪ್ರಭಾಕರ್, ವಿ. ಸೌಭಾಗ್ಯ ಗುಣಶೇಖರ್, ನಳಿನಾಕ್ಷಿ ನರಸಿಂಹರಾಜು, ಕಲ್ಪನಾ ಬೋಮ್ಮೇಗೌಡ ಅವಿರೋಧ ಆಯ್ಕೆಯಾಗಿದ್ದರು.ನೂತನ ಅಧ್ಯಕ್ಷೆ ಕೆ. ಲಲಿತಾ ದೇವೇಗೌಡ ಅಧಿಕಾರ ಸ್ವೀಕರಿಸಿ ಮಾತನಾಡಿ, ತಮ್ಮ ಸಹಕಾರ ಬ್ಯಾಂಕಿನ ಸ್ವಂತ ಕಟ್ಟಡ ನಿರ್ಮಿಸುವ ಮೂಲಕ ರಾಜ್ಯದಲ್ಲೆ ಮಾದರಿ ಮಹಿಳಾ ವಿವಿದೋದ್ದೇಶ ಸಹಕಾರ ಬ್ಯಾಂಕ್ ಎಂದು ಜನಾಭಿಪ್ರಾಯ ಗಳಿಸಿರುವುದಕ್ಕೆ ತಮಗೆ ಸಂತಸ ತಂದಿದೆ ಎಂದರು. ಸಂಸ್ಥೆಯ ಕಾರ್ಯದರ್ಶಿ ಶಶಿಕಲಾ ಬಸವಲಿಂಗಯ್ಯ, ಸಲಹೆಗಾರ ನಂಜುಂಡಪ್ಪ, ನೌಕರ ವರ್ಗದವರಾದ ಲೋಕೇಶ್, ವಿನೋದ್, ಚಲುವರಾಜಚಾರಿ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

