ಮೈಸೂರು

ರೆವಿನ್ಯೂ ಬಡಾವಣೆ ಕಟ್ಟಡಗಳ ಸಕ್ರಮಕ್ಕೆ ಆಗ್ರಹ

Published On :

ಕ.ಪ್ರ.ವಾರ್ತೆ  ಮೈಸೂರು  ಸೆ. 17
ನಗರದ ವಿವಿಧೆಡೆ ರೆವಿನ್ಯೂ ಬಡಾವಣೆಗಳಲ್ಲಿ ವಾಸಿಸುತ್ತಿರುವ ಎಸ್ಸಿ, ಎಸ್ಟಿ, ಅಲ್ಪಸಂಖ್ಯಾತರು, ಹಿಂದುಳಿದವರಿಗೆ ಸುಲಭವಾದ ಶುಲ್ಕದೊಂದಿಗೆ ರೆವಿನ್ಯೂ ಕಟ್ಟಡಗಳನ್ನು ಸಕ್ರಮ ಮಾಡುವಂತೆ ಸರ್ವಜನಾಂಗ ಹಿತರಕ್ಷಣಾ ವೇದಿಕೆ ಒತ್ತಾಯಿಸಿದೆ.
ಮಂಗಳವಾರ ನಗರದ ನಟರಾಜ ಸಭಾ ಭವನದಲ್ಲಿ ನಡೆದ ರೆವಿನ್ಯೂ ಬಡಾವಣೆ ನಿವಾಸಿಗಳ ಸಭೆಯಲ್ಲಿ ಈ ಸಂಬಂಧ ಹಲವು ನಿರ್ಣಯ ಕೈಗೊಳ್ಳಲಾಯಿತು.
ಸರ್ಕಾರಿ ಕಚೇರಿಗಳ ಮುಂದೆ ಸಂಬಂಧಿಸಿದ ವಿಷಯವಾಗಿ ಪ್ರತಿಭಟನೆ ಹಮ್ಮಿಕೊಳ್ಳುವುದು, ಶಾಸಕರ ಮನೆ ಅಥವಾ ಕಚೇರಿಗಳ ಮುಂದೆ ಪ್ರತಿಭಟಿಸುವುದು. ರೆವಿನ್ಯೂ ನಿವಾಸಿಗರ ಸಮಸ್ಯೆಗಳು ಬಗೆಹರಿಯುವವರೆಗೆ ಹಲವಾರು ವಿಭಾಗಗಳಲ್ಲಿ ಪ್ರತಿಭಟನೆ ಗಾದೂ ವಿಧ ವಿಧವಾದ ನಿರಂತರ ಚಳವಳಿ ನಡೆಸುವುದು.
 ನಗರಪಾಲಿಕೆ ಮತ್ತು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಬೇಕಾದ ಯಾವುದೇ ತರಹದ ಕಂದಾಯ ಕಟ್ಟುವುದನ್ನು ನಿಲ್ಲಿಸುವುದು. ಬಡಬಗ್ಗರು, ದೀನ ದಲಿತರು ನಿರ್ಮಿಸಿರುವ 30್ಗ40 ಚ.ಅಡಿ ಅಳತೆಯ ಎಲ್ಲಾ ತರಹದ ಮನೆಗಳಿಗೂ 3 ವರ್ಷದ ಕಂದಾಯವನ್ನು ತೆಗೆದುಕೊಂಡು ಸಕ್ರಮ ಮಾಡುವವರೆಗೂ ಸರ್ಕಾರದ ವಿರುದ್ಧ ನಿರಂತರ ಹೋರಾಟ ನಡೆಸುವುದು.
60್ಗ40 ಚ.ಅಡಿ ಅಳತೆಯ ಎಲ್ಲಾ ತರಹದ ಮನೆಗಳಿಗೆ ಸುಲಭ ಸಕ್ರಮ ಶುಲ್ಕವನ್ನು ವಿಧಿಸುವಂತೆ ಹಾಗೂ ಈಗಾಗಲೇ ಹೋಲ್ಡರ್ ಖಾತೆ ಹೊಂದಿರುವವರಿಗೆ ಯಾವುದೇ ಶುಲ್ಕವಿಲ್ಲದೆ ಸಕ್ರಮಗೊಳಿಸುವಂತೆ ಒತ್ತಾಯಿಸಲು ತೀರ್ಮಾನಿಸಲಾಯಿತು.
ಸರ್ವ ಜನಾಂಗ ಹಿತರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ವೇಣುಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಪದಾಧಿಕಾರಿಗಳಾದ ಎಲ್. ಮಹದೇವಪ್ಪ, ಎಂ. ಪ್ರಭುದೇವ್, ಎನ್.ಎಸ್. ನಂಜುಂಡಸ್ವಾಮಿ, ಕೆ.ಆರ್. ಚಿಕ್ಕಣ್ಣ, ಆರ್. ಲಕ್ಷ್ಮಣ್ರಾಜ್, ಎಸ್ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.