ಮೈಸೂರು

ಆಡಳಿತಾಧಿಕಾರಿ ಮೇಲೆ ವಿದ್ಯಾರ್ಥಿ ಹಲ್ಲೆ

Published On :

ಕ.ಪ್ರ.ವಾರ್ತೆ ಮೈಸೂರು ಸೆ. 20
ಕುವೆಂಪು ವಿದ್ಯಾವರ್ಧಕ ಟ್ರಸ್ಟ್‌ನ ಆಡಳಿತಾಧಿಕಾರಿ ಮೇಲೆ ವಿದ್ಯಾರ್ಥಿಯೊಬ್ಬ ಮಚ್ಚಿನಿಂದ ಹಲ್ಲೆ ನಡೆಸಿರುವ ಘಟನೆ ಜಯಲಕ್ಷ್ಮೀಪುರಂನಲ್ಲಿ ಶುಕ್ರವಾರ ನಡೆದಿದೆ.
ಟ್ರಸ್ಟ್‌ನ ಆಡಳಿತಾಧಿಕಾರಿ ಹಾಗೂ ಜೆ.ಪಿ. ನಗರ ನಿವಾಸಿ ಲೋಕೇಶ್ (32) ಹಲ್ಲೆಗೆ ಒಳಗಾದವರು. ಈ ಹಿಂದೆ ಟ್ರಸ್ಟ್‌ನ ಕಾಲೇಜಿನಲ್ಲಿ ಬಿಬಿಎಂ ವ್ಯಾಸಂಗ ಮಾಡುತ್ತಿದ್ದ, ಹಾಲಿ ಟಿ.ಕೆ. ಬಡವಾಣೆಯ ಜ್ಞಾನದೀಪ ಕಾಲೇಜಿನ ಅಂತಿಮ ವರ್ಷದ ಬಿಬಿಎಂ ವಿದ್ಯಾರ್ಥಿ ಪ್ರವೀಣ್ (22) ಹಲ್ಲೆ ಮಾಡಿದ ಆರೋಪಿ.
ಟಿವಿಎಸ್ ಬೈಕ್‌ನಲ್ಲಿ ಕಾಲೇಜಿಗೆ ಬರುತ್ತಿದ್ದ ಲೋಕೇಶ್ ಮೇಲೆ ಮತ್ತೊಂದು ಬೈಕ್ ಮೂಲಕ ಹಿಂದಿನಿಂದ ಬಂದ ಪ್ರವೀಣ್ ಈಜಿಡೇ ಮಾಲ್ ಬಳಿ ಹಲ್ಲೆ ನಡೆಸಿದ್ದಾನೆ. ಅಲ್ಲದೆ ಈಗ ತಪ್ಪಿಸಿಕೊಂಡಿರಬಹುದು, ಮತ್ತೊಮ್ಮೆ ನೋಡಿಕೊಳ್ಳುವುದಾಗಿ ಧಮಕ್ ಹಾಕಿದ್ದಾನೆ ಎಂದು ಲೋಕೇಶ್ ಪೊಲೀಸರಿಗೆ ದೂರಿದ್ದಾರೆ. ಮಚ್ಚು ಸುಮಾರು ಒಂದು ಇಂಚಿನಷ್ಟು ದೇಹದ ಒಳಗೆ ತೂರಿದೆ. ತೀವ್ರವಾಗಿ ಗಾಯಗೊಂಡು ರಸ್ತೆ ಮೇಲೆ ಬಿದ್ದ ಲೋಕೇಶ್ ಅವರನ್ನು ಸಾರ್ವಜನಿಕರು ಹತ್ತಿರದ ಬಿಎಂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆರೋಪಿ ಪ್ರವೀಣ್ ನಡತೆ ಸರಿಯಿಲ್ಲ ಎಂಬ ಕಾರಣಕ್ಕೆ ಆತನಿಗೆ ವರ್ಗಾವಣೆ ಪತ್ರ ನೀಡಿ ಕಳುಹಿಸಲಾಗಿತ್ತು. ಈ ಜಿದ್ದಿಗೆ ಆತ ಹಲ್ಲೆ ನಡೆಸಿರಬಹುದು ಎಂದು ಶಂಕಿಸಲಾಗಿದೆ.
ಆಸ್ಪತ್ರೆಗೆ ಎಸಿಪಿ ಸಿ.ಡಿ. ಜಗದೀಶ್ ಭೇಟಿ ನೀಡಿದ್ದರು. ಈ ಸಂಬಂಧ ಜಯಲಕ್ಷ್ಮೀಪುರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.