ಲಾಭದಾಯಕ ಹೈನುಗಾರಿಕೆಗೆ ಲಸಿಕೆ ಅಗತ್ಯ
ಎಚ್.ಡಿ. ಕೋಟೆ: ಹಸುಗಳಲ್ಲಿ ಕಾಲುಬಾಯಿ ಮತ್ತು ಚಪ್ಪೆ ರೋಗ ಕಾಣಿಸಿಕೊಂಡಿದ್ದು, ಎಲ್ಲ ಜಾನುವಾರುಗಳಿಗೆ ಲಸಿಕೆ ಹಾಕಿಸುವಂತೆ ಕೃಷಿ ವೈದ್ಯ ಡಾ.ಪ್ರಕಾಶ್ ಸಲಹೆ ನೀಡಿದರು. ತಾಲೂಕಿನ ಹಂಪಾಪುರ ವಲಯದ ಕ್ಯಾತನಹಳ್ಳಿ ಗ್ರಾಪಂ ವ್ಯಾಪ್ತಿಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಡೆದ ಹೈನುಗಾರಿಕಾ ತರಬೇತಿಯಲ್ಲಿ ಮಾತನಾಡಿದ ಅವರು, ಹೈನುರಾಸುಗಳ ಪಾಲನೆ ಪೋಷಣೆ ಬಗ್ಗೆ ವಿವರಿಸಿ, ಜಾನುವಾರುಗಳ ಆರೋಗ್ಯದ ದೃಷ್ಟಿಯಿಂದ ಲಸಿಕೆ ಹಾಕಿಸುವುದು ಅತ್ಯಮೂಲ್ಯವಾಗಿದೆ. ರಾಜ್ಯ ಸರ್ಕಾರದ ವತಿಯಿಂದ ಜಾನುವಾರುಗಳಿಗೆ ಶೆ.50 ರಿಯಾಯಿತಿ ದರದಲ್ಲಿ ಜಾನುವಾರು ವಿಮೆ ಸೌಲಭ್ಯವಿದ್ದು, ಸದುಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.
ಯೋಜನಾಧಿಕಾರಿ ಉಮಾರಬ್ಬ ಮಾತನಾಡಿ, ಸ್ವ-ಉದ್ಯೋಗಕ್ಕೆ ಪೂರಕವಾಗಿರುವುದರಲ್ಲಿ ಹೈನುಗಾರಿಕೆ ಒಂದು ಉತ್ತಮವಾದ ಉದಾಹರಣೆ. ಹೈನುಗಾರಿಕೆಯನ್ನು ಆಸಕ್ತಿಯಿಂದ ಮಾಡಿದರೆ, ಅಧಿಕ ಲಾಭ ಗಳಿಸಬಹುದು. ರಾಸುಗಳ ಆರೋಗ್ಯದ ದೃಷ್ಟಿಯಿಂದ ಕೊಟ್ಟಿಗೆ ರಚನೆ ಮತ್ತು ಶುಚಿತ್ವದ ಬಗ್ಗೆ ಗಮನಹರಿಸುವಂತೆ ಸಲಹೆ ನೀಡಿದರು.
ಯೋಜನೆ ಹೈನುಗಾರಿಕಾ ಮೇಲ್ವಿಚಾರಕ ಸದಾಶಿವ ನಾಯಕ್, ವಲಯದ ಮೇಲ್ವಿಚಾರಕ ಪ್ರದೀಪ್, ಸೇವಾ ಪ್ರತಿನಿಧಿ ಪ್ರಮೀಳಾ ಇದ್ದರು.
ಹರದನಹಳ್ಳಿ ಸಹಕಾರ ಸಂಘದ ಸಭೆ
ಸಾಲಿಗ್ರಾಮ: ಸಹಕಾರ ಸಂಘಗಳ ಬೆಳವಣಿಗೆಗೆ ಸಂಘದಲ್ಲಿ ಸದಸ್ಯರಾಗಿರುವ ರೈತರು, ಮಹಿಳೆಯರು, ವ್ಯಾಪಾರಸ್ಥರು ಸೇರಿದಂತೆ ಇತರೆ ವರ್ಗದವರು ಸಹಕಾರ ನೀಡಬೇಕೆಂದು ಮೈಸೂರು ಜಿಲ್ಲಾ ಸಹಕಾರ ಬ್ಯಾಂಕಿನ ಉಪಾಧ್ಯಕ್ಷ ಎಸ್. ಸಿದ್ದೇಗೌಡ ಹೇಳಿದರು.
ಕೆ.ಆರ್. ನಗರ ತಾಲೂಕು ಸಾಲಿಗ್ರಾಮ ಸಮೀಪದ ಹರದನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಗುರುವಾರ ನಡೆದ 2012-13ನೇ ಸಾಲಿನ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಸಂಘದ ಸದಸ್ಯರು ಬೋನಸ್ ಹಂಚಿರುವ ಹೆಗ್ಗಳಿಕೆಗೆ ಈ ಸಂಘವು ಪಾತ್ರವಾಗಿದ್ದು, ಸಂಘವು ಉತ್ತಮ ರೀತಿಯಲ್ಲಿ ನಡೆಯುತ್ತಿದೆ ಎಂದು ಪ್ರಶಂಸಿದರು. ಸಹಕಾರ ಸಂಘದ ನಿಯಮಗಳು ಮುಂದಿನ ಸಾಲಿನಿಂದ ತಿದ್ದುಪಡಿಯಾಗಿ, ಸಂಘಕ್ಕೆ ಅಧ್ಯಕ್ಷರೊಂದಿಗೆ ಉಪಾಧ್ಯಕ್ಷ ಸ್ಥಾನವು ಲಭ್ಯವಾಗಲಿದೆ ಎಂದು ತಿಳಿಸಿದರು. ಸಂಘದ ಅಧ್ಯಕ್ಷ ಟಿ. ರಾಮೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘದ ವತಿಯಿಂದ 2013-14ನೇ ಸಾಲಿನಲ್ಲಿ 3.23 ಲಕ್ಷಗಳನ್ನು ರೈತರಿಗೆ ವಿವಿಧ ಯೋಜನೆಗಳಡಿಯಲ್ಲಿ ಸಾಲ ನೀಡಲಾಗಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

